ದೂದ್ ಪಾಕ್ ಹಾಲು, ಅಕ್ಕಿ ಮತ್ತು ಒಣ ಬೀಜಗಳನ್ನು ಬಳಸಿ ಮಾಡುವ ಕೆನೆಭರಿತ ಭಾರತೀಯ ಸಿಹಿ. ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಇದನ್ನು ತಯಾರಿಸಿ ಹಂಚಲು ಸೂಕ್ತವಾಗಿದೆ. ಊಟದ ನಂತರ ಇದನ್ನು ಸವಿದರೆ ಭೋಜನ ಸಂಪೂರ್ಣವಾಗುತ್ತದೆ. ಇದನ್ನು ತಯಾರಿಸಿದ ಬಳಿಕ ತಣ್ಣಾಗಿಸಿ ಸವಿದರೆ ಅದ್ಭುತ ಎನಿಸುತ್ತದೆ. ಸಿಹಿಯಾದ ದೂದ್ ಪಾಕ್ ನೀವೂ ಮಾಡಿ, ಊಟದ ಬಳಿಕ ಮನೆಮಂದಿಗೆ ಹಂಚಿ.
Advertisement
ಬೇಕಾಗುವ ಪದಾರ್ಥಗಳು:
ಹಾಲು – 1 ಲೀಟರ್
ತೊಳೆದು ನೆನೆಸಿದ ಅಕ್ಕಿ – ಅರ್ಧ ಕಪ್
ಸಕ್ಕರೆ – ಅರ್ಧ ಕಪ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
ಕೇಸರಿ ಎಳೆಗಳು – ಚಿಟಿಕೆ
ಕತ್ತರಿಸಿದ ಬಾದಾಮಿ – 2 ಟೀಸ್ಪೂನ್
ಕತ್ತರಿಸಿದ ಪಿಸ್ತಾ – 2 ಟೀಸ್ಪೂನ್ ಇದನ್ನೂ ಓದಿ: ಗುಲಾಬ್ ಜಾಮೂನ್ ಗೊತ್ತು.. ಗುಲಾಬ್ ಬರ್ಫಿನೂ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ತಳವಿರುವ ಪ್ಯಾನ್‌ನಲ್ಲಿ ಹಾಲನ್ನು ಕಡಿಮೆ ಉರಿಯಲ್ಲಿ ಕುದಿಸಿಕೊಳ್ಳಿ.
* ತೊಳೆದು ನೆನೆಸಿದ ಅಕ್ಕಿಯನ್ನು ಹಾಲಿಗೆ ಸೇರಿಸಿ, ಅಕ್ಕಿ ಮೃದುವಾಗುವವರೆಗೆ ಮತ್ತು ಹಾಲು ದಪ್ಪವಾಗುವವರೆಗೆ ಬೇಯಿಸಿ.
* ಹಾಲಿನ ಮಿಶ್ರಣಕ್ಕೆ ಸಕ್ಕರೆ, ಏಲಕ್ಕಿ ಪುಡಿ, ಚಿಟಿಕೆ ಕೇಸರಿ ಸೇರಿಸಿ ಚೆನ್ನಾಗಿ ಬೆರೆಸಿ.
* ಸಕ್ಕರೆ ಕರಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸುವುದನ್ನು ಮುಂದುವರಿಸಿ.
* ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಲು ಬಿಡಿ.
* ನಂತರ ಅದನ್ನು ಫ್ರಿಜ್‌ನಲ್ಲಿ 1-2 ಗಂಟೆ ಇಡಿ.
* ಬಡಿಸುವುದಕ್ಕೂ ಮೊದಲು ಹೆಚ್ಚಿದ ಬೀಜಗಳಿಂದ ಅಲಂಕರಿಸಿ. ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ