ನೀವು ಇಡೀ ದಿನ ಉಲ್ಲಾಸದಿಂದ ಕಳೆಯಬೇಕೆಂದರೆ ಅಂದು ನೀವು ತಿನ್ನುವ ಉಪಾಹಾರ ಉತ್ತಮವಾಗಿರಬೇಕು. ನೀವು ಸೇವಿಸುವ ಬೆಳಗ್ಗಿನ ತಿಂಡಿ ರುಚಿಕರ ಹಾಗೂ ಆರೋಗ್ಯಕರವಾಗಿದ್ದರೆ ನಿಮ್ಮ ಇಡೀ ದಿನವೂ ಉಲ್ಲಾಸಭರಿತವಾಗಿರುತ್ತದೆ. ನೀವು ಅಡುಗೆಮನೆಯಲ್ಲಿ ಹೊಸದೇನಾದರೂ ಪ್ರಯೋಗ ಮಾಡಲು ಬಯಸುತ್ತೀರಾದರೆ ನಾವಿಂದು ಸ್ಪೆಷಲ್ ಅಡುಗೆ ಹೇಳಿಕೊಡುತ್ತೇವೆ. ರುಚಿಕರವಾದ ಜೋಳದ ಪಡ್ಡು (Jowar Paddu) ನೀವೂ ಒಮ್ಮೆ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಜೋಳದ ಹಿಟ್ಟು – 1 ಕಪ್
ಉದ್ದಿನ ಬೇಳೆ – ಅರ್ಧ ಕಪ್
ಮೆಂತ್ಯ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ – 1 ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಕಡಲೆ ಬೇಳೆ – 1 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ತುರಿದ ಶುಂಠಿ – 1 ಇಂಚು
ಸಣ್ಣಗೆ ಹೆಚ್ಚಿದ ಈರುಳ್ಳಿ – 1 ಇದನ್ನೂ ಓದಿ: ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ರವಾ ಟೋಸ್ಟ್ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಉದ್ದಿನಬೇಳೆ ಹಾಗೂ ಮೆಂತ್ಯವನ್ನು ಸುಮಾರು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
* ಬಳಿಕ ಮಿಕ್ಸರ್ ಜಾರ್ಗೆ ವರ್ಗಾಯಿಸಿ, ಸ್ವಲ್ಪ ನೀರು ಸೇರಿಸಿ, ನುಣ್ಣನೆ ಹಿಟ್ಟಾಗಿ ರುಬ್ಬಿಕೊಳ್ಳಿ.
* ರುಬ್ಬಿದ ಹಿಟ್ಟಿಗೆ ಜೋಳದ ಹಿಟ್ಟು ಹಾಗೂ ಉಪ್ಪು ಹಾಕಿ, ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ.
* ಈ ಹಿಟ್ಟನ್ನು ನೀವು ರಾತ್ರಿ ತಯಾರಿಸಿ, ಮುಚ್ಚಿ, ಬೆಳಗ್ಗಿನವರೆಗೆ ವಿಶ್ರಾಂತಿ ನೀಡಿ.
* ಬೆಳಗ್ಗೆ ನೀವು ಹಿಟ್ಟು ಹುದುಗಿರುವುದನ್ನು ಕಾಣಬಹುದು. ಈಗ ಹಿಟ್ಟಿಗೆ ಸ್ಥಿರತೆ ಹೊಂದುವಂತೆ ನೀರು ಸೇರಿಸಿ, ಮಿಶ್ರಣ ಮಾಡಿ.
* ಈಗ ಒಗ್ಗರಣೆ ತಯಾರಿಸಲು ಒಂದು ಬಾಣಲೆ ತೆಗೆದುಕೊಳ್ಳಿ. ಎಣ್ಣೆ ಹಾಕಿ ಬಿಸಿಯಾದ ಬಳಿಕ ಸಾಸಿವೆ, ಉದ್ದಿನಬೇಳೆ ಹಾಗೂ ಕಡಲೆ ಬೇಳೆ ಹಾಕಿ ಸಿಡಿಸಿ.
* ಬಳಿಕ ಕರಿಬೇವಿನ ಎಲೆ, ಮೆಣಸಿನ ಕಾಯಿ, ಶುಂಠಿ ಹಾಗೂ ಈರುಳ್ಳಿ ಸೇರಿಸಿ, 2-3 ನಿಮಿಷ ಹುರಿಯಿರಿ.
* ಈಗ ಒಗ್ಗರಣೆಯನ್ನು ಹಿಟ್ಟಿಗೆ ಹಾಕಿ, ಮಿಶ್ರಣ ಮಾಡಿ.
* ಬಳಿಕ ಪಡ್ಡು ತಯಾರಿಸುವ ಗುಳಿಯಿರುವ ಪ್ಯಾನ್ ಅನ್ನು ಬಿಸಿ ಮಾಡಿ. ಗುಳಿಗಳಿಗೆ ಎಣ್ಣೆ ಸವರಿ, ಬ್ಯಾಟರ್ ಅನ್ನು ಸುರಿಯಿರಿ.
* ಪ್ಯಾನ್ ಅನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ ಪಡ್ಡುಗಳನ್ನು ಬೇಯಿಸಿ.
* ಪಡ್ಡು ಮೇಲ್ಭಾಗ ಬೆಂದಿದೆ ಎನಿಸಿದರೆ ತಳಭಾಗ ಗೋಲ್ಡನ್ ಬ್ರೌನ್ ಬಣ್ಣವಾಗಿರುತ್ತದೆ. ನೀವು ಈಗ ಪಡ್ಡುಗಳನ್ನು ಮಗುಚಿ ಹಾಕಿ, ಈ ರೀತಿ ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವಂತೆ ಬೇಯಿಸಿಕೊಳ್ಳಿ.
* ಇದೀಗ ಜೋಳದ ಪಡ್ಡು ತಯಾರಾಗಿದ್ದು, ಬಿಸಿಬಿಸಿಯಾಗಿ ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಫಟಾಫಟ್ ಅಂತ ಮಾಡಿ ಬಾಳೆಕಾಯಿ ದೋಸೆ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k