ಹಾಂಗ್ ಕಾಂಗ್ ಫ್ರೈಡ್ ರೈಸ್ ಅನ್ನು ಅನ್ನ, ತರಕಾರಿ ಮತ್ತು ಪ್ರೋಟೀನ್‌ಯುಕ್ತ ಯಾವುದೇ ಮಾಂಸವನ್ನು ಬಳಸಿ ತಯಾರಿಸುವ ಜನಪ್ರಿಯ ಚೀನೀ ಅಡುಗೆ. ಇದು ಕ್ವಿಕ್ ಹಾಗೂ ಸುಲಭವಾಗಿ ತಯಾರಿಸಬಹುದಾದ ಒನ್ ಪ್ಯಾನ್ ಅಡುಗೆ. ಅದ್ಭುತ ಸುವಾಸನೆಯ ಈ ರೆಸಿಪಿಗೆ ಸಿಗಡಿ, ಚಿಕನ್ ಅಥವಾ ನಿಮ್ಮ ನೆಚ್ಚಿನ ತರಕಾರಿಗಳನ್ನೂ ಸೇರಿಸಬಹುದು. ಹಾಂಗ್ ಕಾಂಗ್ ಫ್ರೈಡ್ ರೈಸ್ ಮಾಡೋದು ಹೇಗೆಂದು ನಾವಿಂದು ಹೇಳಿಕೊಡುತ್ತೇವೆ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಿ ತಣ್ಣಗಾಗಿಸಿದ ಅನ್ನ – 3 ಕಪ್
ಕೊಚ್ಚಿದ ಬೆಳ್ಳುಳ್ಳಿ – 2
ನಿಮ್ಮ ಆಯ್ಕೆಯ ತರಕಾರಿಗಳು – 1 ಕಪ್ (ಕ್ಯಾರೆಟ್, ಕಾರ್ನ್, ಬಟಾಣಿ ಇತ್ಯಾದಿ)
ಸಿಗಡಿ/ ಚಿಕನ್ – ಅಗತ್ಯವಿದ್ದಂತೆ
ಮೊಟ್ಟೆ – 1
ಸೋಯಾ ಸಾಸ್ – 2 ಟೀಸ್ಪೂನ್
ಆಯ್ಸ್ಟರ್ ಸಾಸ್ – 1 ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಅಲಂಕರಿಸಲು ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ಮಾಡ್ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಬೆಳ್ಳುಳ್ಳಿಯನ್ನು ಪರಿಮಳ ಬರುವವರೆಗೆ ಹುರಿಯಿರಿ.
* ನಿಮ್ಮ ಆಯ್ಕೆಯ ಚಿಕನ್ ಅಥವಾ ಸಿಗಡಿ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
* ಕ್ಯಾರೆಟ್, ಬಟಾಣಿ ಮತ್ತು ಕ್ಯಾಪ್ಸಿಕಮ್ ಸೇರಿದಂತೆ ತರಕಾರಿಗಳನ್ನು ಸೇರಿಸಿ ಹುರಿದುಕೊಳ್ಳಿ.
* ಬೇಯಿಸಿದ ಎಲ್ಲಾ ಪದಾರ್ಥಗಳನ್ನು ಪ್ಯಾನ್‌ನ ಒಂದು ಬದಿಗೆ ತಳ್ಳಿ, ಅದರ ಖಾಲಿ ಜಾಗದಲ್ಲಿ ಮೊಟ್ಟೆಯನ್ನು ಒಡೆದು ಹಾಕಿ.
* ಮೊಟ್ಟೆಯನ್ನು ಹುರಿದು ನಂತರ ಬದಿಗಿಟ್ಟಿದ್ದ ಎಲ್ಲಾ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ.
* ಈಗ ಬೇಯಿಸಿದ ಅನ್ನವನ್ನು ಸೇರಿಸಿ, ಸೋಯಾ ಸಾಸ್, ಆಯ್ಸ್ಟರ್ ಸಾಸ್ ಸೇರಿಸಿ ಮಿಕ್ಸ್ ಮಾಡಿ.
* ಎಲ್ಲವನ್ನೂ ಚೆನ್ನಾಗಿ ಬೆರೆಸಿ ಬಿಸಿಯಾಗುವವರೆಗೆ ಫ್ರೈ ಮಾಡಿ.
* ಕೊನೆಯಲ್ಲಿ ಸ್ಪ್ರಿಂಗ್ ಆನಿಯನ್ ಹಾಕಿ ಅಲಂಕರಿಸಿ, ಹಾಂಗ್ ಕಾಂಗ್ ಫ್ರೈಡ್ ರೈಸ್ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: 15 ನಿಮಿಷದಲ್ಲಿ ಮಾಡೋ ಚಿಕನ್ ನೂಡಲ್ ಸೂಪ್ ರೆಸಿಪಿ