ರೆಸ್ಟೋರೆಂಟ್‌ಗಳಲ್ಲಿ ಸಿಗುವ ರುಚಿಕರವಾದ ಟೊಮೆಟೊ ಸೂಪ್ ನೀವು ಯಾವಾಗಲೂ ಸವಿದಿರುತ್ತೀರಿ. ಆಗಾಗ ಅಂಗಡಿಗಳಲ್ಲಿ ಸಿಗುವ ಇನ್ಸ್ಟೆಂಟ್ ಪೌಡರ್‌ಗಳಿಂದಲೂ ಸೂಪ್ ಮಾಡಿರುತ್ತೀರಿ. ಆದರೆ ಹೊರಗಡೆ ಸಿಗುವ ಸೂಪ್ ಆರೋಗ್ಯಕರವಾಗಿರುತ್ತದೆಯೇ ಎಂಬ ಪ್ರಶ್ನೆ ಖಂಡಿತವಾಗಿಯೂ ನಿಮ್ಮಲ್ಲಿ ಮೂಡುತ್ತದೆ. ಮನೆಯಲ್ಲಿಯೇ ಟೊಮೆಟೊ ಸೂಪ್ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಲ್ವಾ. ರುಚಿಕರ ಹಾಗೂ ಆರೋಗ್ಯಕರ ಟೊಮೆಟೊ ಸೂಪ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಬೆಣ್ಣೆ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
ಬೆಳ್ಳುಳ್ಳಿ – 2
ಕರಿಬೇವಿನ ಎಲೆ – 1
ಕತ್ತರಿಸಿದ ಟೊಮೆಟೊ – 3
ಕತ್ತರಿಸಿದ ಕ್ಯಾರೆಟ್ – ಅರ್ಧ
ಉಪ್ಪು – ಅರ್ಧ ಟೀಸ್ಪೂನ್
ನೀರು – 1 ಕಪ್
ಸಕ್ಕರೆ – 1 ಟೀಸ್ಪೂನ್
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಫ್ರೆಶ್ ಕ್ರೀಂ – 2 ಟೀಸ್ಪೂನ್ ಇದನ್ನೂ ಓದಿ: ರುಚಿಕರ ಸೋಯಾಬೀನ್ 65 ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಕಡಾಯಿಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆ ಸೇರಿಸಿ ಫ್ರೈ ಮಾಡಿ.
* ಬಳಿಕ ಟೊಮೇಟೊ, ಕ್ಯಾರೆಟ್ ಮತ್ತು ಉಪ್ಪು ಸೇರಿಸಿ, ಒಂದು ನಿಮಿಷ ಅಥವಾ ಟೊಮೆಟೊ ಬಣ್ಣ ಬದಲಾಯಿಸುವ ತನಕ ಹುರಿಯಿರಿ.
* ಈಗ ನೀರು ಸೇರಿಸಿ, ಮುಚ್ಚಿ 10 ನಿಮಿಷಗಳ ಕಾಲ ಕುದಿಸಿ.
* ಮಿಶ್ರಣ ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿ.
* ಈಗ ಜರಡಿಯಲ್ಲಿ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ, ಸೋಸಿಕೊಳ್ಳಿ.
* ನಿಮಗೆ ಸೂಪ್ ಎಷ್ಟು ಗಾಢವಾಗಿ ಬೇಕು ಎಂಬ ಅಂದಾಜಿನಲ್ಲಿ ಹೆಚ್ಚುವರಿ ನೀರನ್ನು ಸೇರಿಸಿ, ಮತ್ತೊಮ್ಮೆ ಕುದಿಸಿ.
* ಅದಕ್ಕೆ ಸಕ್ಕರೆ, ಕರಿಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಒಲೆಯನ್ನು ಆಫ್ ಮಾಡಿ, ಫ್ರೆಶ್ ಕ್ರೀಂ ಸೇರಿಸಿ ಮಿಕ್ಸ್ ಮಾಡಿ.
* ಇದೀಗ ಆರೋಗ್ಯಕರ ಟೊಮೆಟೊ ಸೂಪ್ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ