ಆರೋಗ್ಯಕರ ಹಾಗೂ ಪೌಷ್ಟಿಕಾಂಶವುಳ್ಳ ಉಪಾಹಾರ ಪ್ರತಿ ದಿನ ಮಾಡಬೇಕೆಂದರೆ, ಒಮ್ಮೆ ಹೆಸರು ಬೇಳೆಯ ದೋಸೆ (Moong Dal Dosa) ಮಾಡಿ ನೋಡಿ. ಸರಳವಾಗಿ ತಯಾರಿಸಬಹುದಾದ ಹೆಸರು ಬೇಳೆ ದೋಸೆ ಕೆಲವೇ ಪದಾರ್ಥಗಳನ್ನು ಬಳಸಿ ಮಾಡಬಹುದು. ಇದನ್ನು ಯಾವುದೇ ಸೈಡ್ ಡಿಶ್ ಇಲ್ಲದೇ ಸವಿಯಬಹುದಾದರೂ ಚಟ್ನಿಯೊಂದಿಗೆ ಇದರ ರುಚಿ ದುಪ್ಪಟ್ಟಾಗುತ್ತದೆ. ಒಮ್ಮೆ ಮನೆಯಲ್ಲಿ ಹೆಸರು ಬೇಳೆ ದೋಸೆಯನ್ನು ಮಾಡಿನೋಡಿ.
Advertisement
ಬೇಕಾಗುವ ಪದಾರ್ಥಗಳು:
ಹೆಸರು ಬೇಳೆ – 1 ಕಪ್
ಮೆಣಸಿನಕಾಯಿ – 1
ಶುಂಠಿ – 1 ಇಂಚು
ಜೀರಿಗೆ – 1 ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಹಿಂಗ್ – ಚಿಟಿಕೆ
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – ದೋಸೆ ಕಾಯಿಸಲು ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ದೋಸೆ ಒಮ್ಮೆ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ ಹೆಸರು ಬೇಳೆ ತೆಗೆದುಕೊಂಡು, ಮುಳುಗುವಷ್ಟು ನೀರು ಹಾಕಿ 3 ಗಂಟೆಗಳ ಕಾಲ ನೆನೆಸಿ.
* ನೀರನ್ನು ಸೋಸಿ ಹೆಸರು ಬೇಳೆಯನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ.
* ಈಗ ಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಸೇರಿಸಿ, ಅಗತ್ಯವಿರುವಷ್ಟು ನೀರು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
* ಈಗ ಬ್ಯಾಟರ್ ಅನ್ನು ಪಾತ್ರೆಗೆ ವರ್ಗಾಯಿಸಿ, ಅರಿಶಿನ, ಕೊತ್ತಂಬರಿ ಸೊಪ್ಪು, ಹಿಂಗ್ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.
Advertisement
* ಬಿಸಿ ತವಾದ ಮೇಲೆ ಒಂದು ಸೌಟು ಬ್ಯಾಟರ್ ಸುರಿದು, ನಿಧಾನವಾಗಿ ಹರಡಿ.
* ದೋಸೆಯ ಮೇಲೆ 1 ಟೀಸ್ಪೂನ್ ಎಣ್ಣೆ ಹಾಕಿ, ತವಾ ಮುಚ್ಚಿ, 1 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ.
* ದೋಸೆಯನ್ನು ಮಗುಚಿ ಹಾಕಿ, ಎರಡೂ ಬದಿ ಕಾಯಿಸಿಕೊಳ್ಳಿ.
* ಇದೀಗ ಹೆಸರು ಬೇಳೆ ದೋಸೆ ತಯಾರಾಗಿದ್ದು, ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್