ರುಚಿಕರ ಮಾತ್ರವಲ್ಲದೇ ಆರೋಗ್ಯಕರ ಉಪಾಹಾರ ತಯಾರಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಪ್ರತಿ ದಿನ ಬಗೆಬಗೆಯದ್ದು ಮಾಡುವುದು ಸವಾಲೇ ಸರಿ. ಇಂದು ನಾವು ಆಲೂಗಡ್ಡೆಯ ದೋಸೆ (Potato Dosa) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ರುಚಿಕರವಾದ ಈ ದೋಸೆಯನ್ನು ಸಂಜೆಯ ತಿಂಡಿಯಾಗಿಯೂ ತಯಾರಿಸಬಹುದು. ಮಕ್ಕಳಂತೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.
Advertisement
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 3
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಕಡಲೇ ಹಿಟ್ಟು – 2 ಟೀಸ್ಪೂನ್
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1
ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – 1 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – ಕಾಯಿಸಲು ಇದನ್ನೂ ಓದಿ: ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ಆಲೂಗಡ್ಡೆಯ ಸಿಪ್ಪೆ ತೆಗೆದು, ತುರಿದುಕೊಳ್ಳಿ.
* 5 ನಿಮಿಷಗಳ ಕಾಲ ತುರಿದ ಆಲೂಗಡ್ಡೆಯನ್ನು ನೀರಿನಲ್ಲಿ ನೆನೆಸಿಡಿ.
* ಈಗ ತುರಿದ ಆಲೂಗಡ್ಡೆಯನ್ನು ಹಿಸುಕಿ ನೀರನ್ನು ಹರಿಸಿ.
* ಈಗ ಕಾರ್ನ್ ಫ್ಲೋರ್ ಹಾಗೂ ಕಡಲೇ ಹಿಟ್ಟನ್ನು ಸೇರಿಸಿ. ಆಲೂಗಡ್ಡೆಯಲ್ಲಿ ತೇವಾಂಶ ಹೆಚ್ಚಿದ್ದರೆ ಇನ್ನಷ್ಟು ಸೇರಿಸಬಹುದು.
Advertisement
* ಈಗ ಮಿಶ್ರಣಕ್ಕೆ ಕರಿಮೆಣಸಿನ ಪುಡಿ, ಜೀರಿಗೆ ಹಾಗೂ ಉಪ್ಪು ಸೇರಿಸಿ ಮಿಕ್ಸ್ ಮಾಡಿ.
* ಈಗ ತವಾವನ್ನು ಬಿಸಿ ಮಾಡಿ, ಅದಕ್ಕೆ ಚಮಚದ ಸಹಾಯದಿಂದ ದೋಸೆ ಆಕಾರದಲ್ಲಿ ಆಲೂಗಡ್ಡೆ ಮಿಶ್ರಣವನ್ನು ತೆಳ್ಳಗೆ ಹರಡಿ.
* ದೋಸೆಯ ಸುತ್ತಲೂ 1 ಟೀಸ್ಪೂನ್ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಕಾಯಿಸಿ.
* ದೋಸೆ ಗೋಲ್ಡನ್ ಬ್ರೌನ್ ಹಾಗೂ ಗರಿಗರಿಯಾಗುವತನಕ ಎರಡೂ ಬದಿಯಲ್ಲಿ ಬೇಯಿಸಿ.
* ಇದೀಗ ಆಲೂಗಡ್ಡೆ ದೋಸೆ ತಯಾರಾಗಿದ್ದು, ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬಾದಾಮಿ ಕೇಕ್ ಮಾಡುವ ಸುಲಭ ವಿಧಾನ – ನೀವೊಮ್ಮೆ ಟ್ರೈಮಾಡಿ