ಸಾಮಾನ್ಯವಾಗಿ ಚಿಕನ್ ಅನ್ನು ಕಬಾಬ್, ಚಿಕನ್ ಪೆಪ್ಪರ್, ಚಿಕನ್ ಬಿರಿಯಾನಿ ಹೀಗೆ ವಿವಿಧ ರೀತಿಯಲ್ಲಿ ಮಾಡುತ್ತಾರೆ. ಜೊತೆಗೆ ಗಾರ್ಲಿಕ್ ಚಿಕನ್ ಕೂಡ ಮಾಡುತ್ತಾರೆ. ಆದ್ರೆ ಈ ಗಾರ್ಲಿಕ್ ಚಿಕನ್ ಮಾಡೋಕು ಸುಲಭ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು:
– ಚಿಕನ್
* ಬೆಳ್ಳುಳ್ಳಿ
* ಈರುಳ್ಳಿ
* ಹಸಿಮೆಣಸಿನಕಾಯಿ
* ಶುಂಠಿ
* ಕರಿ ಮೆಣಸು
* ಅರಿಶಿನ ಪುಡಿ
* ಉಪ್ಪು
* ಎಣ್ಣೆ
* ಕೊತ್ತಂಬರಿ ಎಲೆ
* ನಿಂಬೆ ರಸ
ತಯಾರಿಸುವ ವಿಧಾನ:
– ಮಾಂಸ ಮ್ಯಾರಿನೇಟ್ ಮಾಡುವುದು:
ಸಣ್ಣದಾಗಿ ಕತ್ತರಿಸಿದ ಚಿಕನ್ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಬೇಕು. ಅದಕ್ಕೆ ಉಪ್ಪು, ಅರಿಶಿನ, ಕಪ್ಪು ಮೆಣಸು ಪುಡಿ, ಚಿಕ್ಕದಾಗಿ ಕತ್ತರಿಸಿದ ಅರ್ಧ ಬೆಳ್ಳುಳ್ಳಿ, ಅರ್ಧ ಶುಂಠಿ ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 30 ನಿಮಿಷ ಬಿಡಿ.
– ಎಣ್ಣೆ ಬಿಸಿ ಮಾಡುವುದು
ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ, ಮೊದಲಿಗೆ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ. ನಂತರ ಈರುಳ್ಳಿ ಮತ್ತು ಸಣ್ಣದಾಗಿ ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಸೇರಿಸಿ ಸ್ವಲ್ಪ ಹುರಿಯಿರಿ. ಇದಕ್ಕೆ ಮ್ಯಾರಿನೆಟ್ ಮಾಡಿದ ಚಿಕನ್ ಸೇರಿಸಿ. ಬಣ್ಣ ಬದಲಾದ ನಂತರ ಸ್ವಲ್ಪ ನೀರು ಹಾಕಿ ಮುಚ್ಚಿ 10-15 ನಿಮಿಷ ಬೇಯಿಸಿ.
– ಗಾರ್‍ಲಿಕ್ ಫ್ಲೇವರ್ ಮಾಡಿಕೊಳ್ಳುವುದು
ಬೇಯಿಸಿದ ಮೇಲೆ ಕೊನೆಯಲ್ಲಿ ಮತ್ತಷ್ಟು ಬೆಳ್ಳುಳ್ಳಿ ಹಾಕಿ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಸೇರಿಸಿ ಚೆನ್ನಾಗಿ ಹುರಿಯಿರಿ. ಇದು ಗಾರ್‍ಲಿಕ್ ರುಚಿಯನ್ನು ಹೆಚ್ಚಿಸುತ್ತದೆ. ಕೊನೆಗೆ ತಯಾರಾದ ಚಿಕನ್ ಮೇಲೆ ಕೊತ್ತಂಬರಿ ಎಲೆ ಹಾಕಿ ಅಲಂಕರಿಸಿ ಬಿಸಿ ಬಿಸಿ ಚಪಾತಿ, ಪರೋಟಾ ಅಥವಾ ಅನ್ನದ ಜೊತೆಗೆ ಸವಿಯಿರಿ.
ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹದಲ್ಲಿ ಪ್ರೋಟಿನ್ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ದೇಹದಲ್ಲಿ ಕೊಬ್ಬಿನಾಂಶವನ್ನು ನಿಯಂತ್ರಿಸುತ್ತದೆ