ಬೆಂಗಳೂರು: ಕುರುಬರ ಬಗ್ಗೆ ಸಿಎಂ ಬೊಮ್ಮಾಯಿಗೆ (Basavaraj Bommai) ತುಂಬಾ ಪ್ರೀತಿ ಬಂದಿದೆ. ಹಾಗಾದ್ರೆ ಬೊಮ್ಮಾಯಿ ತನ್ನ ಸಿಎಂ (Chief Minister) ಸ್ಥಾನಕ್ಕೆ ರಾಜೀನಾಮೆ ನೀಡಿ ಈಶ್ವರಪ್ಪನ್ನ (KS Eshwarappa) ಸಿಎಂ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕುಟುಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯರವನ್ನ (Kurubas Community) ಸಿದ್ದರಾಮಯ್ಯ ಬೆಳಸಿಲ್ಲ, ಕುರುಬರ ಮೇಲೆ ಸಿದ್ದರಾಮಯ್ಯಗೆ ಪ್ರೀತಿ ಇಲ್ಲ ಎಂದು ಸಿಎಂ ಹೇಳಿದ್ದಾರೆ. ನಾನೇ ಕುರುಬ ಸಮುದಾಯವನು ನಾನು ಸಿಎಂ ಆಗಿರಲಿಲ್ವಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿರ್ತಾರೆ; ಥರ್ಟಿ, ಸಿಕ್ಸ್ಟಿ ಅಲ್ಲ 2 ಬಾಟ್ಲಿ ಕುಡಿತಾರೆ – ಪ್ರೀತಂ ಗೌಡ
Advertisement
Advertisement
ಬಿಜೆಪಿಯ (BJP) ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಬೊಮ್ಮಾಯಿ (Basavaraj Bommai) ಅವರು ಕುರುಬರಿಗೆ ಉಪಕಾರ ಮಾಡಿದ್ದೇನೆ ಅಂತಾ ಆದೇಶದ ಪ್ರತಿಯನ್ನ ಪ್ರದರ್ಶಿಸಿದ್ದರು. ಎನ್‌ಸಿಟಿಸಿಯಿಂದ ಶೇ.50 ಸಾಲ ನೀಡುವ ಪ್ರತಿಯನ್ನ ಪ್ರದರ್ಶಿಸಿದರು. ಇರದಲ್ಲಿ ಶೇ.25 ಸರ್ಕಾರದಿಂದ ಸಾಲ ನೀಡಿದ್ರೆ, ಇನ್ನೂ ಶೇ.25 ಫಲಾನುಭವಿಗಳೇ ಹಾಕಿಕೊಳ್ಳಬೇಕು. ನಾನೂ ಸಹ ಆದೇಶ ಪ್ರತಿಯನ್ನ ಓದಿ ನೋಡಿದೆ. ಇದನ್ನ ಕ್ಯಾಬಿನೆಟ್‌ನಲ್ಲೂ ಪ್ರಸ್ತಾಪಿಸದೇ ಬಹಳ ತರಾತುರಿಯಲ್ಲಿ ಸಮಾವೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದು ಯೋಜನೆ ವೆಚ್ಚ 350 ಕೋಟಿ ರೂಪಾಯಿ ಮಾತ್ರ ಇದರಲ್ಲಿ ಸರ್ಕಾರದ ವೆಚ್ಚ 85 ಕೋಟಿ ಅಷ್ಟೇ. ಈ ಯೋಜನೆ ಅನುಷ್ಠಾನವಾಗೋದೇ ಇಲ್ಲ. ಏಕೆಂದರೆ ಕುರಿ ಸಾಕಾಣಿಕೆ ಕುರುಬರು ಮಾತ್ರ ಮಾಡುತ್ತಿಲ್ಲ. ಬೇರೆ ಜಾತಿಯವರೂ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಕೀಲೆ ಜೊತೆ ಅಸಭ್ಯ ವರ್ತನೆ ಮಾಡಿದ್ದ ಸಿಪಿಐ ಮೇಲೆ ಪ್ರಕರಣ ದಾಖಲು
Advertisement
Advertisement
ಸಿದ್ದರಾಮಯ್ಯ ಅವಧಿಯಲ್ಲಿ ಕುರುಬರು ಮಂತ್ರಿಯಾಗಿರಲಿಲ್ಲ ಅಂದಿದ್ದಾರೆ. ಹೆಚ್.ಎಂ ರೇವಣ್ಣ (HM Revanna), ಹೆಚ್.ವೈ ಮೇಟಿ, ಎಂಟಿಬಿ ನಾಗರಾಜ್ (MTB Nagaraj) ಸಚಿವರಾಗಿರಲಿಲ್ಲವಾ? ಪ್ರಮೋದ್ ಮಧ್ವರಾಜ್, ವಿಜಯ್ ಕುಮಾರ್ ಸೊರಕೆ, ಕಾಗೋಡು ತಿಮ್ಮಪ್ಪ, ಚಿಂಚನಸೂರು, ಪುಟ್ಟರಂಗಶೆಟ್ಟಿ ಇವರೆಲ್ಲಾ ಯಾವ ಜಾತಿಯವರು ಹಿಂದುಳಿದವರಲ್ವಾ? ಆಗ ಸಿಎಂ ಆಗಿದ್ದವರು ಕುರುಬ ಸಮುದಾಯದವರಲ್ಲವಾ? ನಾನೇ ಕುರುಬ ಸಮುದಾಯವನು, ಮುಖ್ಯಮಂತ್ರಿಯಾಗಿರಲಿಲ್ವಾ? ಇವತ್ತಿಗೂ ಹಿಂದುಳಿದವರು ಸಿಎಂ ಆಗಿರೋದು ಕಾಂಗ್ರೆಸ್ ನಲ್ಲಿ ಮಾತ್ರ, ಈಗ ಸಿಎಂಗೆ ಇವರಿಗೆ ಕುರುಬರ ಬಗ್ಗೆ ಭಾರೀ ಪ್ರೀತಿ ಬಂದಿದೆ ಎಂದು ತಿರುಗೇಟು ನೀಡಿದ್ದಾರೆ.
ಬೊಮ್ಮಾಯಿಯದ್ದು ಮೊಸಳೆ ಕಣ್ಣೀರು: ನಾನು ದೇವರಾಜು ಅರಸು ನಿಗಮಕ್ಕೆ 2017-18ನೇ ಸಾಲಿನಲ್ಲಿ 374 ಕೋಟಿ ಕೊಟ್ಟಿದ್ದೆ, ಆದರೆ ಬಿಜೆಪಿ ಸರ್ಕಾರ ಹಿಂದುಳಿದ ಜಾತಿ, ದಲಿತರ ಸಮುದಾಯದ (Dalits Community) ವಿದ್ಯಾರ್ಥಿಗಳಿಗೆ ಎರಡು ವರ್ಷದಿಂದ ವಿದ್ಯಾರ್ಥಿ ವೇತನ ಕೊಟ್ಟಿಲ್ಲ. ಬಿಜೆಪಿ ಸರ್ಕಾರದಲ್ಲಿ ಇದುವರೆಗೂ ಹಿಂದುಳಿದ ಸಮುದಾಯಕ್ಕೆ 3,714 ಕೋಟಿ ಮಾತ್ರ ಕೊಟ್ಟಿದ್ದಾರೆ. ನಾನು 5 ವರ್ಷದಲ್ಲಿ 10 ಸಾವಿರದ 98 ಕೋಟಿ ರೂ. ಕೊಟ್ಟಿದ್ದೆ, ಬಜೆಟ್ ನ ಗಾತ್ರ ಹೆಚ್ಚಾಗುತ್ತಿದ್ದಂತೆ ಅನುದಾನ ಹೆಚ್ಚಾಗಬೇಕು. ಇವರು ಕಡಿಮೆ ಮಾಡುತ್ತಾ ಬಂದಿದ್ದಾರೆ. ಹಿಂದುಳಿದ ಜಾತಿಗಳ ಬಗ್ಗೆ ಬೊಮ್ಮಾಯಿ ಮೊಸಳೆ ಕಣ್ಣೀರು ಹಾಕುತ್ತಾ ಬಂದಿದ್ದಾರೆ. ಇದು ನಿಮ್ಮ ಹಿಂದುಳಿದ ಜಾತಿ ಮೇಲಿರುವ ಪ್ರೀತಿನಾ ಎಂದು ಟಾಂಗ್ ನೀಡಿದ್ದಾರೆ.