ಗಣೇಶ ಹಬ್ಬ ಬಂದೇ ಬಿಡ್ತು. ಹಬ್ಬದ ತಯಾರಿಯಂತೂ ಜೋರಾಗಿ ನಡೆಯುತ್ತಿದೆ. ಗಣೇಶ ಚತುರ್ಥಿಗೆ ಗಣಪನಿಗೆ ಅಚ್ಚುಮೆಚ್ಚಿನ ತಿಂಡಿಗಳಲ್ಲಿ ಒಂದಾದ ಮೋದಕವನ್ನು ತಯಾರಿಸಿ ನೈವೇದ್ಯಕ್ಕೆ ಇಡುವುದು ವಾಡಿಕೆ. ಮೋದಕದಲ್ಲಿ ಹಲವು ವಿಧದ ಮೋದಕಗಳಿವೆ. ಈ ಬಾರಿಯ ಗಣೆಶ ಚತುರ್ಥಿಗೆ ಬಗೆಬಗೆಯ ಮೋದಕಗಳನ್ನು ಮಾಡುವ ಮೂಲಕ ಗಣೇಶೋತ್ಸವಕ್ಕೆ ಇನ್ನಷ್ಟು ಮೆರುಗು ನೀಡಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಗಣೇಶನಿಗೆ ಪ್ರಿಯವಾದ ವಿಭಿನ್ನ ಬಗೆಯ ಮೋದಕಗಳನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
ಡ್ರೈ ಫ್ರೂಟ್ಸ್ ಮೋದಕ:
ಬೇಕಾಗುವ ಸಾಮಗ್ರಿಗಳು:
ಗೋಡಂಬಿ – 1/4 ಕಪ್
ಬಾದಾಮಿ – 1/4 ಕಪ್
ಪಿಸ್ತಾ – 1/4 ಕಪ್
ಒಣ ದ್ರಾಕ್ಷಿ – 1/4 ಕಪ್
ಕೊಬ್ಬರಿ ತುರಿ – 2-3 ಚಮಚ
ಖರ್ಜೂರ – 1/2 ಕಪ್
ತುಪ್ಪ – 3ರಿಂದ 4 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲು ಬಾದಾಮಿ, ಪಿಸ್ತಾ, ಗೋಡಂಬಿಯನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ಪುಡಿ ಮಾಡಿ.
*ನಂತರ ಒಣ ದ್ರಾಕ್ಷಿ ಮತ್ತು ಖರ್ಜೂರವನ್ನ ಚೆನ್ನಾಗಿ ಪೇಸ್ಟ್ ಮಾಡಿ.
* ನಂತರ ಸ್ವಲ್ಪ ತುಪ್ಪ ಹಾಕಿ, ಪುಡಿ ಮಾಡಿದ ಡ್ರೈ ಫ್ರೂಟ್ಸ್ ಹಾಕಿ ಕಲಸಿ.
* ನಂತರ ಖರ್ಜೂರ, ಒಣದ್ರಾಕ್ಷಿ ಪೇಸ್ಟ್ ಮತ್ತು ಕೊಬ್ಬರಿ ಹಾಕಿ ಮಿಕ್ಸ್ ಮಾಡಿ.
* ನಂತರ ಮೋದಕ ಅಚ್ಚಿನಲ್ಲಿ ಡ್ರೈಫ್ರೂಟ್ಸ್ ಮಿಶ್ರಣ ತುಂಬಿ ಪ್ರೆಸ್ ಮಾಡಿದರೆ ಆರೋಗ್ಯಕರ ಡ್ರೈಫ್ರೂಟ್ಸ್ ಮೋದಕ ಸಿದ್ಧ.
Advertisement
ರೋಸ್ ರಸ್‌ಮಲೈ ಮೋದಕ:
ಬೇಕಾಗುವ ಸಾಮಗ್ರಿಗಳು:
ಪನ್ನಿರ್ – 200 ಗ್ರಾಂ
ಹಾಲಿನ ಪುಡಿ – 3/4 ಕಪ್
ತುಪ್ಪ – 1 ಚಮಚ
ಸಕ್ಕರೆ – 1/2 ಕಪ್
ಏಲಕ್ಕಿ ಪುಡಿ – ಸ್ವಲ್ಪ
ಪಿಸ್ತಾ – ಸ್ವಲ್ಪ
ಪಿಂಕ್ ಫುಡ್ ಕಲರ್ – ಅಗತ್ಯಕ್ಕೆ ತಕ್ಕಷ್ಟು
ರೋಸ್ (ಗುಲಾಬಿ) ದಳಗಳು
Advertisement
ಮಾಡುವ ವಿಧಾನ:
* ಪನ್ನೀರನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ.
* ನಂತರ ತವಾದಲ್ಲಿ ತುಪ್ಪ ಹಾಕಿ ಬಿಸಿಯಾದ ನಂತರ ಪುಡಿ ಮಾಡಿದ ಪನ್ನೀರ್ ಹಾಕಿ.
* ನಂತರ ಹಾಲಿನ ಪುಡಿ ಸೇರಿಸಿ, ತೆಗೆದಿಟ್ಟ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಏಲಕ್ಕಿ ಪುಡಿ, ಪುಡಿ ಮಾಡಿದ ಪಿಸ್ತಾ, ಪಿಂಕ್ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ.
* ಈಗ ಮೋದಕ ಅಚ್ಚುವಿನಲ್ಲಿ ಗುಲಾಬಿ ದಳ ಇಟ್ಟು, ಪಿಸ್ತಾ ಇಟ್ಟು ನಂತರ ಪನ್ನಿರ್ ಮಿಶ್ರಣ ತುಂಬಿ ಒತ್ತಿ.
* ರುಚಿಕರವಾದ ರೋಸ್ ರಸ್‌ಮಲೈ ಮೋದಕ ಸವಿಯಲು ಸಿದ್ಧ.
ಅಂಜೂರದ ಮೋದಕ:
ಬೇಕಾಗುವ ಸಾಮಗ್ರಿಗಳು:
ಬಾದಾಮಿ – 1/4 ಕಪ್
ಗೋಡಂಬಿ – 1/4 ಕಪ್
ಪಿಸ್ತಾ – 2 ಚಮಚ
ಒಣ ದ್ರಾಕ್ಷಿ – 2 ಚಮಚ
ಅಂಜೂರ – 1/2 ಕಪ್
ಖರ್ಜೂರ – 1/2 ಕಪ್
ಪುಡಿ ಮಾಡಿದ ತೆಂಗಿನ ತುರಿ – 1/4 ಕಪ್
ಗಸೆಗಸೆ – 1/4 ಕಪ್
ಏಲಕ್ಕಿ ಪುಡಿ – 1/2 ಚಮಚ
ಮಾಡುವ ವಿಧಾನ:
* ಒಂದು ಮಿಕ್ಸಿ ಜಾರ್‌ಗೆ ಬಾದಾಮಿ, ಗೋಡಂಬಿ, ಪಿಸ್ತಾ ಹಾಕಿ ಚೆನ್ನಾಗಿ ಪುಡಿ ಮಾಡಿ.
* ನಂತರ ಒಣದ್ರಾಕ್ಷಿ, ಅಂಜೂರ, ಖರ್ಜೂರ ಹಾಕಿ ಪೇಸ್ಟ್ ಮಾಡಿ.
* ನಂತರ ಇದನ್ನು ಒಂದು ಬೌಲ್‌ಗೆ ಹಾಕಿ ಪುಡಿ ಮಾಡಿದ ತೆಂಗಿನ ತುರಿ, ಗಸೆಗಸೆ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ತಯಾರಾದ ಮಿಶ್ರಣವನ್ನು ಮೋದಕ ಅಚ್ಚಿಗೆ ಹಾಕಿ ಒತ್ತಿ. ಅಂಜೂರ ಮೋದಕ ರೆಡಿ.