ಭಾರತೀಯ ಸಾಂಪ್ರದಾಯಿಕ ಅಡುಗೆಗಳಲ್ಲಿ ಸಿಹಿಗೆ ಬೆಲ್ಲವನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಸಕ್ಕರೆಗಿಂತಲೂ ಆರೋಗ್ಯಕ್ಕೆ ಉತ್ತಮವಾದ ಬೆಲ್ಲವನ್ನು ಸಿಹಿ ಆಹಾರ ಮಾತ್ರವಲ್ಲದೇ ಖಾರವಾದ ಅಡುಗೆಗಳಲ್ಲೂ ಬಳಸಲಾಗುತ್ತದೆ. ನಾವಿಂದು ಬೆಲ್ಲದ ಪರೋಟ (Jaggery Paratha) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಬೆಳಗ್ಗಿನ ತಿಂಡಿಗೆ ಉತ್ತಮವಾದ ಬೆಲ್ಲದ ಪರೋಟವನ್ನು ಒಮ್ಮೆ ನೀವು ಕೂಡಾ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು – 1 ಕಪ್ (ಅಗತ್ಯವಿದ್ದರೆ ಹೆಚ್ಚುವರಿ)
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – 1 ಟೀಸ್ಪೂನ್
ನೀರು – ಹಿಟ್ಟು ಕಲಸಲು ಬೇಕಾಗುವಷ್ಟು
ಬೆಲ್ಲ – ಅರ್ಧ ಕಪ್
ತುಪ್ಪ – ಪರೋಟ ಕಾಯಿಸಲು ಇದನ್ನೂ ಓದಿ: ಸುಲಭ, ಆರೋಗ್ಯಕ್ಕೂ ಉತ್ತಮ – ಕಡಲೆಕಾಳು ಉಸ್ಲಿ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು, ಉಪ್ಪು ಮತ್ತು ಎಣ್ಣೆಯನ್ನು ಹಾಕಿ, ಸ್ವಲ್ಪ ಮಿಶ್ರಣ ಮಾಡಿ.
* ಬಳಿಕ ನಿಧಾನವಾಗಿ ನೀರನ್ನು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರಣವನ್ನು ಕಲಸಿಕೊಳ್ಳಿ.
* ಈಗ ಹಿಟ್ಟಿನ ಬಟ್ಟಲನ್ನು ಮುಚ್ಚಿ, 20 ನಿಮಿಷ ವಿಶ್ರಾಂತಿ ನೀಡಿ.
* 20 ನಿಮಿಷದ ಬಳಿಕ ಹಿಟ್ಟನ್ನು ಮತ್ತೊಮ್ಮೆ ಕಲಸಿಕೊಂಡು, ಚಪಾತಿ ಹಿಟ್ಟಿಗೆ ಕಟ್ಟುವಂತಹ ಗಾತ್ರದಲ್ಲಿ ಉಂಡೆಗಳನ್ನು ತಯಾರಿಸಿಕೊಳ್ಳಿ.
Advertisement
* ಉಂಡೆಗಳನ್ನು ಸ್ವಲ್ಪ ಲಟ್ಟಿಸಿ, ಅದರ ಮೇಲೆ 1 ಟೀಸ್ಪೂನ್‌ನಷ್ಟು ಬೆಲ್ಲ ಹಾಕಿ, ಮಡಚಿ, ಮತ್ತೆ ಲಟ್ಟಿಸಿ.
* ಪರೋಟದ ಆಕಾರ ಹಾಗೂ ಗಾತ್ರ ಬಂದ ಮೇಲೆ ಬಿಸಿ ಪ್ಯಾನ್‌ನಲ್ಲಿ ಹಾಕಿ, 1 ನಿಮಿಷ ಕಾಯಿಸಿ.
* ಪರೋಟದ ಮೇಲೆ ಸ್ವಲ್ಪ ತುಪ್ಪ ಸವರಿ, ಮಗುಚಿ, ಎರಡೂ ಬದಿ ಚೆನ್ನಾಗಿ ಕಾಯಿಸಿಕೊಳ್ಳಿ.
* ಇದೀಗ ರುಚಿಕರವಾದ ಬೆಲ್ಲದ ಪರೋಟ ತಯಾರಾಗಿದ್ದು, ಇನ್ನಷ್ಟು ತುಪ್ಪದೊಂದಿಗೆ ಸವಿಯಿರಿ. ಇದನ್ನೂ ಓದಿ: ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?