ಮದುವೆ ಸಮಾರಂಭಗಳ ಊಟದಲ್ಲಿ ನಾವು ಸಾಮಾನ್ಯವಾಗಿ ಗೋಡಂಬಿ ತೊಂಡೆಕಾಯಿ ಪಲ್ಯವನ್ನು ಸವಿದಿರುತ್ತೇವೆ. ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಅನ್ನ, ಸಾಂಬರ್ ಜೊತೆಗೆ ಬಡಿಸುವ ಪಲ್ಯಗಳಲ್ಲಿ ಇದು ಅತ್ಯಂತ ಫೇಮಸ್ ಕೂಡಾ ಆಗಿದೆ. ಇಂದು ನಾವು ಮದುವೆ ಸಮಾರಂಭಗಳಲ್ಲಿ ಮಾಡುವ ರುಚಿಕರವಾದ ಗೋಡಂಬಿ ತೊಂಡೆಕಾಯಿ ಪಲ್ಯವನ್ನು ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತೇವೆ. ನೀವೂ ಒಮ್ಮೆ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಮಸಾಲೆ ರುಬ್ಬಲು:
ತುರಿದ ತೆಂಗಿನಕಾಯಿ – ಮುಕ್ಕಾಲು ಕಪ್
ಸಾಸಿವೆ – 1 ಟೀಸ್ಪೂನ್
ಒಣ ಕೆಂಪು ಮೆಣಸಿನಕಾಯಿ – 5
ಒಗ್ಗರಣೆಗೆ:
ಎಣ್ಣೆ – 3 ಟೀಸ್ಪೂನ್
ಸಾಸಿವೆ – ಮುಕ್ಕಾಲು ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಕಡಲೆ ಬೇಳೆ – 1 ಟೀಸ್ಪೂನ್
ಒಣ ಕೆಂಪು ಮೆಣಸಿನಕಾಯಿ – 1
ಕರಿಬೇವಿನ ಎಲೆ – ಕೆಲವು
ಹೋಳು ಮಾಡಿದ ತೊಂಡೆಕಾಯಿ – 3 ಕಪ್
ನೆನೆಸಿದ ಗೋಡಂಬಿ – ಅರ್ಧ ಕಪ್
ಬೆಲ್ಲ – 1 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ನೀರು – ಕಾಲು ಕಪ್ ಇದನ್ನೂ ಓದಿ: ಫಟಾಫಟ್ ಅಂತ ಮಾಡಿ ಮಂಡಕ್ಕಿ ಇಡ್ಲಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ತೆಂಗಿನಕಾಯಿ, ಸಾಸಿವೆ ಮತ್ತು 5 ಒಣ ಕೆಂಪು ಮೆಣಸಿನಕಾಯಿ ತೆಗೆದುಕೊಂಡು, ಅದನ್ನು ಮಿಕ್ಸರ್ ಜಾರ್ಗೆ ಹಾಕಿ ಒರಟಾದ ಪೇಸ್ಟ್ ತಯಾರಿಸಿಕೊಳ್ಳಿ. (ನೀರು ಸೇರಿಸುವುದು ಬೇಡ)
* ಈಗ ದೊಡ್ಡ ಕಡಾಯಿಯನ್ನು ತೆಗೆದುಕೊಂಡು, ಅದಕ್ಕೆ 3 ಟೀಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ.
* ಈಗ ಹೋಳು ಮಾಡಿದ ತೊಂಡೆಕಾಯಿ ಹಾಗೂ ನೆನೆಸಿದ ಗೋಡಂಬಿ ಸೇರಿಸಿ, 1 ನಿಮಿಷ ಫ್ರೈ ಮಾಡಿ.
* ನಂತರ ಬೆಲ್ಲ, ಅರಿಶಿನ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಕಾಲು ಕಪ್ ನೀರು ಸೇರಿಸಿ, ಮುಚ್ಚಿ 10 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
* ಈಗ ಮೊದಲೇ ತಯಾರಿಸಿಟ್ಟ ಮಸಾಲೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ರುಚಿಕರವಾದ ಗೋಡಂಬಿ ತೊಂಡೆಕಾಯಿ ಪಲ್ಯ ತಯಾರಾಗಿದ್ದು, ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?