ರಸ್ತೆ ಬದಿಯಲ್ಲಿ ಸಿಗುವ ಚೈನೀಸ್ ಖಾದ್ಯಗಳಿಗೆ ಮನಸೋತವರೇ ಇಲ್ಲ. ನೂಡಲ್ಸ್, ಮಂಚೂರಿಯನ್ ಸೇರಿದಂತೆ ಹಲವು ರೋಡ್ ಸೈಡ್ ತಿಂಡಿಗಳಿಗಾಗಿ ಮುಖ್ಯವಾಗಿ ಯುವಕ-ಯುವತಿಯರು ಮುಗಿಬೀಳುತ್ತಾರೆ. ನಾವಿಂದು ಅಂತಹುದೇ ಒಂದು ಖಾದ್ಯವನ್ನು ಮನೆಯಲ್ಲಿ ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇವೆ. ಬಾಯಲ್ಲಿ ನೀರೂರಿಸುವ ಚೈನೀಸ್ ಪಕೋಡಾ (Chinese Pakoda) ಒಮ್ಮೆ ನೀವು ಕೂಡಾ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಸಣ್ಣಗೆ ಕತ್ತರಿಸಿದ ಎಲೆಕೋಸು – ಒಂದೂವರೆ ಕಪ್
ತುರಿದ ಕ್ಯಾರೆಟ್ – 1
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – ಕಾಲು ಭಾಗ
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ಚಿಲ್ಲಿ ಸಾಸ್ – 1 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಮೈದಾ – ಅರ್ಧ ಕಪ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಕೆಂಪು ಆಹಾರ ಬಣ್ಣ (ಫುಡ್ ಕಲರಿಂಗ್) – ಅರ್ಧ ಟೀಸ್ಪೂನ್ (ಐಚ್ಛಿಕ)
ಎಣ್ಣೆ – ಹುರಿಯಲು ಇದನ್ನೂ ಓದಿ: ಚಹಾದೊಂದಿಗೆ ಮಾಡಿ ಸವಿಯಿರಿ ರುಚಿರುಚಿಯಾದ ಗೆಣಸಿನ ಕಟ್ಲೆಟ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಮ್, ಸ್ಪ್ರಿಂಗ್ ಆನಿಯನ್, ಮತ್ತು ಈರುಳ್ಳಿ ತೆಗೆದುಕೊಳ್ಳಿ.
* ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಮೈದಾ, ಕಾರ್ನ್ ಫ್ಲೋರ್, ಕೆಂಪು ಆಹಾರ ಬಣ್ಣವನ್ನು ಸೇರಿಸಿ.
* ಮಿಶ್ರಣ ಹಿಟ್ಟಿನಂತಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಕೈಗೆ ಎಣ್ಣೆ ಸವರಿ, ಒಂದೊಂದು ಟೀಸ್ಪೂನ್ ಮಿಶ್ರಣವನ್ನು ತೆಗೆದುಕೊಂಡು, ಪಕೋಡಾ ರೀತಿಯಲ್ಲಿ ಉಂಡೆ ಮಾಡಿಕೊಳ್ಳಿ.
* ಈಗ ಬಾಣಲೆಗೆ ಎಣ್ಣೆ ಹಾಕಿ, ಪಕೋಡಾಗಳನ್ನು ಡೀಪ್ ಫ್ರೈ ಮಾಡಿ.
* ಪಕೋಡಾ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ.
* ಇದೀಗ ಪಕೋಡಾವನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹರಡಿ.
* ಚೀನೀಸ್ ಪಕೋಡಾ ಇದೀಗ ತಯಾರಾಗಿದ್ದು, ಟೊಮೆಟೊ ಸಾಸ್, ಹಸಿರು ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಟೇಸ್ಟಿ ಆಲೂಗಡ್ಡೆ ರವಾ ಫ್ರೈ