ಈಗಷ್ಟೇ ಚಳಿ ಮುಗಿದು, ನಿಧಾನವಾಗಿ ಬೇಸಿಗೆ ಪ್ರಾರಂಭವಾಗುತ್ತಿದೆ. ಹೋಟೆಲ್, ಮಾರುಕಟ್ಟೆಗಳಲ್ಲಿ ತಂಪಾದ ಪಾನೀಯಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಮನೆಯಲ್ಲೂ ಏನಾದರೂ ಚಿಲ್ ಆಗಿ ಸವಿಯಲು ರೆಸಿಪಿಗಳನ್ನು ನೀವು ಹುಡುಕುತ್ತಿದ್ದರೆ, ನಾವಿಂದು ಒಂದು ಸೂಪರ್ ಪಾನೀಯ ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ. ಕೇವಲ 5 ನಿಮಿಷಗಳಲ್ಲಿ ಚೆರಿ ಸ್ಮೂದಿ (Cherry Smoothie) ನೀವು ಕೂಡಾ ಮನೆಯಲ್ಲಿ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಚೆರಿ ರಸ – ಒಂದೂವರೆ ಕಪ್
ಬಾಳೆಹಣ್ಣು – 1
ಫ್ರೋಝನ್ ಕಪ್ಪು ಸಿಹಿ ಚೆರಿ – ಒಂದೂವರೆ ಕಪ್
ಮೊಸರು – ಮುಕ್ಕಾಲು ಕಪ್
ಪುದೀನಾ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಹುಳಿ-ಸಿಹಿ ರುಚಿಯ ನೆಲ್ಲಿಕಾಯಿ ಜ್ಯಾಮ್ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಳೆ ಹಣ್ಣನ್ನು ಮಧ್ಯಮ ಭಾಗಗಳಾಗಿ ಕತ್ತರಿಸಿಕೊಳ್ಳಿ.
* ಮಿಕ್ಸರ್ ಜಾರ್‌ಗೆ ಚೆರಿ ರಸ, ಬಾಳೆಹಣ್ಣು, ಫ್ರೋಝನ್ ಚೆರಿ ಮತ್ತು ಮೊಸರು ಹಾಕಿ, ನಯವಾಗಿ ರುಬ್ಬಿಕೊಳ್ಳಿ.
* ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು 2 ಗಂಟೆ ಫ್ರಿಜ್‌ನಲ್ಲಿ ಇಡಿ. (ತಣ್ಣಗಾಗಿಸಿ ಕುಡಿಯಲು ಇಷ್ಟಪಡದವರು ಹಾಗೆಯೇ ಸವಿಯಬಹುದು)
* ಈಗ ಸ್ಮೂದಿಯನ್ನು ಗ್ಲಾಸ್‌ಗಳಿಗೆ ಹಾಕಿಕೊಂಡು, ಅದರ ಮೇಲೆ ಅಲಂಕಾರಕ್ಕೆ ಪುದೀನಾ ಸೊಪ್ಪು ಹಾಗೂ ಚೆರಿ ಹಣ್ಣುಗಳನ್ನು ಇರಿಸಿ.
* ಇದೀಗ ಚೆರಿ ಸ್ಮೂದಿ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k