ಟೇಸ್ಟಿ ಚೀಸ್ ಚಿಕನ್ ಬಾಲ್ಸ್ ಪಾರ್ಟಿ ಟೈಮ್ಗೆ ಒಂದು ಬೆಸ್ಟ್ ಖಾದ್ಯವಾಗಿದೆ. ಮನೆಯಲ್ಲಿ ಏನಾದ್ರೂ ವಿಶೇಷ ಸಂದರ್ಭಗಳಲ್ಲಿ, ಸ್ನೇಹಿತರು ಇಲ್ಲವೇ ನೆಂಟರು ಬಂದಾಗ ಇದನ್ನು ಮಾಡಿ ಸವಿಯಬಹುದು. ಮಕ್ಕಳಿಗೂ ಇದು ತುಂಬಾ ಇಷ್ಟವಾಗುವ ರೆಸಿಪಿ. ನೀವು ಕೂಡಾ ಈ ರೆಸಿಪಿಯನ್ನು ಮಾಡಿ, ಪಾರ್ಟಿ ಟೈಂ ಅನ್ನು ಮಜವಾಗಿಸಿ.
Advertisement
ಬೇಕಾಗುವ ಪದಾರ್ಥಗಳು:
ಕೊಚ್ಚಿದ ಚಿಕನ್ – ಅರ್ಧ ಕೆಜಿ
ಮೊಟ್ಟೆ – 1
ಬೆಳ್ಳುಳ್ಳಿ – 3
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
ಹುರಿದ ಈರುಳ್ಳಿ – 2 ಟೀಸ್ಪೂನ್
ಚೀಸ್ ಕ್ಯೂಬ್ಸ್- ಅಗತ್ಯಕ್ಕೆ ತಕ್ಕಷ್ಟು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸುಪ್ಪು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1
ಬ್ರೆಡ್ ಕ್ರಂಬ್ಸ್ – 1 ಕಪ್ ಇದನ್ನೂ ಓದಿ: 10 ನಿಮಿಷದಲ್ಲಿ ಮಾಡಿ ರೋಲೆಕ್ಸ್..!
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚೀಸ್, ಬ್ರೆಡ್ ಹಾಗೂ ಮೊಟ್ಟೆಯನ್ನು ಹೊರತುಪಡಿಸಿ ಎಲ್ಲಾ ಪದಾರ್ಥಗಳನ್ನು ಒಂದು ಬೌಲ್ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ನಿಮ್ಮ ಅಂಗೈಯಲ್ಲಿ ಪ್ಯಾಟಿ ರೂಪಿಸುವಷ್ಟು ಮಿಶ್ರಣವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಚಪ್ಪಟೆ ಮಾಡಿ.
* ಅದರ ನಡುವೆ ಚೀಸ್ ಕ್ಯೂಬ್ ಅನ್ನು ಇಟ್ಟು, ಅದರ ಸುತ್ತ ಮಾಂಸದ ಮಿಶ್ರಣವನ್ನು ಮಡಚಿಕೊಂಡು ಚೆಂಡನ್ನಾಗಿ ಸುತ್ತಿಕೊಳ್ಳಿ. ಉಳಿದ ಮಿಶ್ರಣವನ್ನು ಕೂಡಾ ಹೀಗೇ ಮಾಡಿ ತಯಾರಿಸಿ ಇಡಿ.
* ಒಂದು ಬೌಲ್ನಲ್ಲಿ ಮೊಟ್ಟೆಯನ್ನು ಒಡೆದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಇನ್ನೊಂದು ಪ್ಲೇಟ್ನಲ್ಲಿ ಬ್ರೆಡ್ ಕ್ರಂಬ್ಸ್ ಅನ್ನು ಹರಡಿ ಇಟ್ಟಿರಿ.
* ಈಗ ಪ್ಯಾಟೀಯನ್ನು ಒಂದೊಂದಾಗಿ ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ, ಬಳಿಕ ಬ್ರೆಡ್ ಕ್ರಂಬ್ಸ್ನ ಪ್ಲೇಟ್ನಲ್ಲಿ ಹಾಕಿ ಸುತ್ತಲೂ ಕೋಟ್ ಆಗುವಂತೆ ಉರುಳಿಸಿ.
* ಈಗ ಕಾದ ಎಣ್ಣೆಯಲ್ಲಿ ಈ ಪ್ಯಾಟೀಗಳನ್ನು ಹಾಕಿ, ಮಧ್ಯಮ ಉರಿಯಲ್ಲಿ ಡೀಪ್ ಫ್ರೈ ಮಾಡಿ.
* ಪ್ಯಾಟೀಗಳ ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬಂದ ಮೇಲೆ ಅದನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ಗರಿಗರಿಯಾ ಚೀಸ್ ಚಿಕನ್ ಬಾಲ್ಸ್ ಸವಿಯಲು ಸಿದ್ಧವಾಗಿದ್ದು, ಸಾಸ್ ಅಥವಾ ಮೆಯೋನೀಸ್ನೊಂದಿಗೆ ಬಡಿಸಿ. ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಸಿಂಪಲ್ ಬಟರ್ ಗಾರ್ಲಿಕ್ ಸ್ಕ್ವಿಡ್