ಬೆಲ್ಲ, ಬೇಳೆ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಬಳಸಿ ಮಾಡಲಾಗುವ ಸಿಹಿಯಾದ ಹಯಗ್ರೀವವನ್ನು ದೇವರಿಗೆ ನೈವೇದ್ಯವಾಗಿಯೂ ಮಾಡಲಾಗುತ್ತದೆ. ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಲು ಈ ಪಾಕವಿಧಾನ ಪರಿಪೂರ್ಣವಾಗಿದೆ. ಇದೀಗ ದೀಪಾವಳಿ ಹಬ್ಬವಾದ್ದರಿಂದ ಒಮ್ಮೆ ಮನೆಯಲ್ಲಿ ಸಿಹಿಯಾದ ಹಯಗ್ರೀವ ಮಾಡಿ, ಸವಿಯಿರಿ.
Advertisement
ಬೇಕಾಗುವ ಪದಾರ್ಥಗಳು:
ಕಡಲೆ ಬೇಳೆ – 1 ಕಪ್
ನೀರು – 3 ಕಪ್
ಬೆಲ್ಲ – 1 ಕಪ್
ಲವಂಗ – 4
ತುಪ್ಪ – 2 ಟೀಸ್ಪೂನ್
ಗೋಡಂಬಿ – 10
ಒಣದ್ರಾಕ್ಷಿ – 2 ಟೀಸ್ಪೂನ್
ಏಲಕ್ಕಿ ಪುಡಿ – ಕಾಲು ಟೀಸ್ಪೂನ್
ತುರಿದ ತೆಂಗಿನಕಾಯಿ – ಅರ್ಧ ಕಪ್ ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ಮನೆಯಲ್ಲಿಯೇ ಮಾಡಿ ರಸಭರಿತ ರಸಗುಲ್ಲ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ಕಡಲೆ ಬೇಳೆ, 3 ಕಪ್ ನೀರು ಹಾಕಿ, 5 ಸೀಟಿ ಇಟ್ಟು ಬೇಯಿಸಿಕೊಳ್ಳಿ.
* ಈಗ ಕಡಲೆ ಬೇಳೆಯನ್ನು ನೀರಿನಿಂದ ಬೇರ್ಪಡಿಸಿ ದೊಡ್ಡ ಕಡಾಯಿಗೆ ಹಾಕಿ.
* ಈಗ ಕಡಾಯಿಗೆ ಬೆಲ್ಲ, ಲವಂಗ ಹಾಕಿ ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡಿ.
* ಬೆಲ್ಲ ಕರಗಿ ಮಿಶ್ರಣ ದಪ್ಪವಾಗುವವರೆಗೆ ಕೈಯಾಡಿಸಿ.
* ಈಗ ಇನ್ನೊಂದು ಬಾಣಲೆಯಲ್ಲಿ ತುಪ್ಪ, ಗೋಡಂಬಿ ಹಾಗೂ ಒಣ ದ್ರಾಕ್ಷಿ ಹಾಕಿ, ಹುರಿಯಿರಿ.
* ಗೋಡಂಬಿ ಗೋಲ್ಡನ್ ಬ್ರೌನ್ ಬಣ್ಣ ಬಂದ ತಕ್ಷಣ ಉರಿಯನ್ನು ಆಫ್ ಮಾಡಿ, ಕಡಲೆ ಬೆಳೆಯ ಮಿಶ್ರಣಕ್ಕೆ ಹಾಕಿ.
* ಈಗ ಏಲಕ್ಕಿ ಪುಡಿ ಮತ್ತು ತೆಂಗಿನ ತುರಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಸಿಹಿಯಾದ ಹಯಗ್ರೀವ ತಯಾರಾಗಿದ್ದು, ತುಪ್ಪದೊಂದಿಗೆ ಬಿಸಿಯಾಗಿಯೇ ಸವಿಯಿರಿ. ಇದನ್ನೂ ಓದಿ: ಸಿಹಿಯಾದ ಜಿಲೇಬಿ ಮಾಡಿ ನಾಲಿಗೆ ಚಪ್ಪರಿಸಿ ಸವಿಯಿರಿ