ಮಕರ ಸಂಕ್ರಾಂತಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ದೊಡ್ಡವರಿಗೆ ಪೂಜೆ ಪುನಸ್ಕಾರ ಮಾಡೋದರ ಚಿಂತೆಯಾದ್ರೆ, ಮಕ್ಕಳಿಗೆ ಸಕ್ಕರೆ ಅಚ್ಚು ತಿನ್ನುವ ಆಸೆ. ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತೇವೆ. ಖರೀದಿ ವೇಳೆ ಯಾವ ಸಕ್ಕರೆ ಅಚ್ಚು ಮಿಠಾಯಿ ಒಳ್ಳೆಯದು? ಗುಣಮಟ್ಟ ಹೇಗಿರುತ್ತೆ ಎಂಬ ಪ್ರಶ್ನೆ ಗ್ರಾಹಕರಲ್ಲಿ ಹುಟ್ಟಿಕೊಳ್ಳುತ್ತವೆ. ಈ ಎಲ್ಲ ಟೆನ್ಷನ್ ಬದಿಗಿಟ್ಟು ಮನೆಯಲ್ಲಿ ಸಕ್ಕರೆ ಅಚ್ಚು ಮಾಡಿ ಆರೋಗ್ಯಕರ ಸಂಕ್ರಾಂತಿ ಆಚರಿಸಿ.
ಬೇಕಾಗುವ ಸಾಮಾಗ್ರಿಗಳು
1. ಸಕ್ಕರೆ – ಅರ್ಧ ಕೆಜಿ
2. ಹಾಲು – ಕಾಲು ಕಪ್
3. ನೀರು – ಕಾಲು ಕಪ್
4. ಮೊಸರು – ಕಾಲು ಕಪ್
5. ಸಕ್ಕರೆ ಅಚ್ಚು ಮಾಡುವ ಮರದ ಮೌಲ್ಡ್ ಅಥವಾ ಪ್ಲಾಸ್ಟಿಕ್
6. ಫುಡ್ ಕಲರ್ – ಬೇಕಿದ್ದಲ್ಲಿ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ನೀವು ಸಕ್ಕರೆ ಅಚ್ಚು ಮಾಡಲು ಮರದ ಮೌಲ್ಡ್ ಬಳಸುತ್ತಿದ್ದರೆ, ಅದನ್ನು 3 – 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಸಕ್ಕರೆ ಪಾಕ ಮಾಡುವಾಗ ನೀರಿನಿಂದ ತೆಗೆದು ಒಣಗಿದ ಬಟ್ಟೆಯಲ್ಲಿ ಒರೆಸಿಡಿ. ಪ್ಲಾಸ್ಟಿಕ್ ಅಥವಾ ಫೈಬರ್ ಮೌಲ್ಡ್ ಆಗಿದ್ರೆ ಡೈರೆಕ್ಟ್ ಆಗೇ ಹಾಕಬಹುದು.
* ಸಕ್ಕರೆ ಪಾಕ ತಯಾರಿಸಲು ಗಟ್ಟಿ ತಳದ ಪಾತ್ರೆ ಬಳಸಿ.
* ಪಾತ್ರೆಗೆ ಸಕ್ಕರೆ ಹಾಕಿ ಅದಕ್ಕೆ ಕಾಲು ಕಪ್ ನೀರು ಹಾಕಿ ಕುದಿಸಿ. (ಸಕ್ಕರೆಯನ್ನು ನೀರಿನಲ್ಲಿ ಕರಗಿಸಿಯೂ ಬಳಸಬಹುದು)
Advertisement
* ಸಕ್ಕರೆ ಕರಗಿದ ಮೇಲೆ ಅದಕ್ಕೆ ಕಾಲು ಕಪ್ ಹಾಲು ಹಾಕಿ 2-3 ನಿಮಿಷ ಕುದಿಸಿ.
* ಬಳಿಕ ಮಿಶ್ರಣಕ್ಕೆ ಕಾಲು ಕಪ್ ಮೊಸರು ಹಾಕಿ 2-3 ನಿಮಿಷ ಕುದಿಸಿ. ಪಾಕ ಹಾಲು ಒಡೆದಂತೆ ಆಗುತ್ತದೆ. (ಹಾಲು, ಮೊಸರು ಬಳಸುವುದರಿಂದ ಅಚ್ಚು ಮೃದುವಾಗಿರುತ್ತದೆ)
* ಈಗ ಸಕ್ಕರೆ ಪಾಕದ ಮಿಶ್ರಣವನ್ನು ಮತ್ತೊಂದು ಪಾತ್ರೆಗೆ ಸೋಸಿಕೊಳ್ಳಿ.
* ಈಗ ಮರದ ಮೌಲ್ಡ್‍ಗೆ ಎರಡು ಕಡೆ ರಬ್ಬರ್ ಬ್ಯಾಂಡ್ ಹಾಕಿಡಿ. ಏಕೆಂದರೆ ಪಾಕ ಮಾಡಿ ರಬ್ಬರ್ ಬ್ಯಾಂಡ್ ಹಾಕುವಷ್ಟರಲ್ಲಿ ಪಾಕ ಗಟ್ಟಿ ಆಗಿರುತ್ತದೆ.
* ಈಗ ಸೋಸಿಕೊಂಡ ಪಾಕವನ್ನು ಮತ್ತೆ ಒಲೆಯ ಮೇಲಿಟ್ಟು. ಚೆನ್ನಾಗಿ ಕುದಿಸಿ… ಚೆನ್ನಾಗಿ ಬಬಲ್ಸ್ ಬರುತ್ತದೆ.(ಕಡಿಮೆ ಉರಿಯಲ್ಲಿ ಕುದಿಸಿ).
Advertisement
* ಪಾಕ್ ಥಿಕ್‍ನೆಸ್ ಬಂದಮೇಲೆ ಡೈರೆಕ್ಟ್ ಅಚ್ಚಿನ ಮೌಲ್ಡ್‍ಗೆ ಹಾಕಿ.. 10-15 ನಿಮಿಷ ಬಿಟ್ಟು ಮೌಲ್ಡ್‍ನಿಂದ ತೆಗೆದರೆ ಸಕ್ಕರೆ ಅಚ್ಚು ರೆಡಿ.
( ಸಕ್ಕರೆ ಅಚ್ಚು ಕಲರ್ ಕಲರ್ ಬೇಕಿದ್ದಲ್ಲಿ ಪಾಕ್ ಥಿಕ್‍ನೆಸ್ ಬರೋವಾಗ ಫುಡ್ ಕಲರ್ ಸೇರಿಸಿಕೊಳ್ಳಿ)
* ಅಚ್ಚು ತೆಗೆಯುವಾಗ ಮುರಿದು ಹೋದ್ರೆ.. ಮತ್ತೆ ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಬಿಸಿ ಮಾಡಿ ಅಚ್ಚು ಮಾಡಬಹುದು.