ಹೊಸ ವರ್ಷದ ಮೊದಲ ಹಬ್ಬ ಸಂಕ್ರಾತಿಯನ್ನು ಹಿಂದೂಗಳು ವಿಶೇಷವಾಗಿ ಆಚರಿಸಲಾಗುತ್ತಾರೆ. ಹಿಂದೂಗಳ ಪ್ರಕಾರ ಸೂರ್ಯ ತನ್ನ ಪಥವನ್ನು ಉತ್ತರದತ್ತ ಬದಲಾಯಿಸುವ ದಿನವಿದು. ಇಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಕೆಲವು ದೇವಾಲಯಗಳ ಗರ್ಭಗುಡಿಯಲ್ಲಿರುವ ದೇವರ ಮೂರ್ತಿಗೆ ಸೂರ್ಯ ರಶ್ಮಿಯ ಸ್ಪರ್ಶವಾಗುತ್ತದೆ. ಅದರಂತೆ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನ ಹಾಗೂ ಮಂಡ್ಯದ ಕಾಶಿ ಚಂದ್ರಮೌಳೇಶ್ವರ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸೂರ್ಯ ರಶ್ಮಿ ಸ್ಪರ್ಶಿಸುತ್ತದೆ. ಈ ಮೂಲಕ ಪಥ ಬದಲಾವಣೆಗೆ ಸೂರ್ಯ ಮಹಾದೇವನ ಅಪ್ಪಣೆ ಕೇಳುತ್ತಾನೆ.
Advertisement
Advertisement
ದೃಗ್ ಪಂಚಾಂಗದ ಪ್ರಕಾರ ಜನವರಿ 14ರಂದು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಪುಣ್ಯಕಾಲ ಜ.15ರವರೆಗೆ ಇರುತ್ತದೆ. ಹೀಗಾಗಿ ಈ ಎರಡು ದಿನ ಮಕರ ಸಂಕ್ರಾಂತಿ ಹಬ್ಬ ಆಚರಿಸುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ವಾಡಿಕೆ. ರೈತರಿಗೂ ಸಂಕ್ರಾಂತಿ ಸಮೃದ್ಧಿಯ ಸಂಕೇತ, ವರ್ಷಪೂರ್ತಿ ಬೆಳೆದ ಬೆಳೆಗಳು ಫಸಲಿಗೆ ಬಂದು ಧಾನ್ಯ ಸಂಗ್ರಹಿಸುವ ಸಮಯದಲ್ಲಿ ಈ ಹಬ್ಬ ಬರುತ್ತದೆ. ರಾಗಿ, ಮುಸುಕಿನ ಜೋಳ, ಅವರೆಕಾಳು ಸೇರಿದಂತೆ ಇತರೆ ಧಾನ್ಯಗಳು ಮನೆ ಸೇರುವ ಸಮಯದಲ್ಲಿ ರೈತರು ಅತ್ಯಂತ ಸಂತಸದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ತಾವು ಬೆಳೆದ ಧಾನ್ಯಗಳನ್ನು ಉಪಯೋಗಿಸಿ, ಸಿಹಿ ಪದಾರ್ಥ ಮಾಡಿ, ದೇವರಿಗೆ ನೈವೇದ್ಯ ನೀಡುವ ಜೊತೆಗೆ ಅಕ್ಕ ಪಕ್ಕದವರಿಗೂ ಹಂಚಿ ಸಂಭ್ರಮಿಸುತ್ತಾರೆ,
Advertisement
ದೇಗುಲಗಳಲ್ಲಿ ವಿಶೇಷ ಪೂಜೆ
ಮಕರ ಸಂಕ್ರಾಂತಿಯಂದು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಸಂಕ್ರಮಣದಂದು ದೇವರಿಗೆ ಅಭಿಷೇಕ ಮಾಡಿ, ಸೂರ್ಯ ರಶ್ಮಿ ದೇವಾಲಯ ಪ್ರವೇಶ ಮಾಡುವ ಕಾಲಕ್ಕೆ ಪೂಜೆ, ಮಹಾಮಂಗಳಾರತಿ ಮಾಡಲಾಗುತ್ತದೆ. ಹಲವು ದೇವಾಲಯಗಳಲ್ಲಿ ಈ ರೂಢಿ ಇಂದಿಗೂ ಇದೆ.
Advertisement
ಗವಿ ಗಂಗಾಧರೇಶ್ವರ ದೇವಸ್ಥಾನ
ಬೆಂಗಳೂರಿನ ಗವಿಗಂಗಾಧರೇಶ್ವ ದೇವಸ್ಥಾನ ನಗರದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿವರ್ಷ ಮಕರ ಸಂಕ್ರಮಣದ ದಿನದಂದು ಸೂರ್ಯ ರಶ್ಮಿಯು ಶಿವನ ವಾಹನವಾದ ನಂದಿಯ ಮೇಲೆ ಬೀಳುತ್ತದೆ. ಬಳಿಕ ಗರ್ಭಗುಡಿಯೊಳಗಿನ ಶಿವಲಿಂಗವನ್ನು ಸ್ಪರ್ಶಿಸುತ್ತದೆ. ನಿರ್ದಿಷ್ಟ ಶಿಲೆಯಿಂದ ನಿರ್ಮಿತವಾಗಿರುವ ಈ ದೇವಸ್ಥಾನದ ಗರ್ಭಗೃಹದೊಳಗೆ ವರ್ಷಪೂರ್ತಿ ಸೂರ್ಯನ ಬೆಳಕು ಪ್ರವೇಶಿಸುವುದಿಲ್ಲ. ಆದರೆ ಮಕರ ಸಂಕ್ರಾಂತಿಯಂದು ಮಾತ್ರ ಪ್ರವೇಶಿಸುವಷ್ಟು ನಿಖರವಾಗಿ ಇಲ್ಲಿನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
ಕಾಶಿ ಚಂದ್ರಮೌಳೇಶ್ವರನಿಗೆ ಪ್ರಥಮ ಸೂರ್ಯ ರಶ್ಮಿ ಸ್ಪರ್ಶ
ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿರುವ ಕಾಶಿ ಚಂದ್ರಮೌಳೇಶ್ವರನಿಗೆ ಸೂರ್ಯ ರಶ್ಮಿಯ ಸ್ಪರ್ಶವಾಗುತ್ತದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಕ್ಷಿಣ ಕಾವೇರಿ ನದಿ ತೀರದಲ್ಲಿರುವ ಏಕೈಕ ಶಿವನ ದೇವಾಲಯವಾಗಿರುವ ಪುರಾಣ ಪ್ರಸಿದ್ಧ ಕಾಶಿ ಚಂದ್ರಮೌಳೇಶ್ವರ ದೇವಾಲಯದ ಗರ್ಭಗುಡಿಯ ಲಿಂಗದ ಮೇಲೆ ಸೂರ್ಯನ ಪ್ರಥಮ ರಶ್ಮಿ ಕಿರಣಗಳು ಸ್ಪರ್ಶ ಮಾಡುತ್ತವೆ. ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.