ಬೆಂಗಳೂರು: ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯ ಕಾಲದಲ್ಲಿ ಅದ್ಭುತ ಕ್ಷಣಕ್ಕೆ ಇಂದು ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರೇಶ್ವರನ (Gavi Gangadhareshwara Temple) ಸನ್ನಿಧಿ ಸಾಕ್ಷಿಯಾಗಲಿದೆ. ಗಂಗಾಧರನಿಗೆ ಭಾಸ್ಕರ ನಮಿಸುವ ಸೂರ್ಯರಶ್ಮಿಯ ವಿಸ್ಮಯದ ಕ್ಷಣ ಇಂದು ನಡೆಯಲಿದೆ
ಇಂದು ಮಕರ ಸಂಕ್ರಾಂತಿ ಸಂಭ್ರಮ. ಗವಿಗಂಗಾಧರ ದೇಗುಲದಲ್ಲಿ ವರ್ಷಕ್ಕೊಮ್ಮೆ ಸಂಭವಿಸು ಕೌತುಕ ವಿಸ್ಮಯ ನಡೆಯಲಿದೆ. ಪಥವನ್ನು ಬದಲಾಯಿಸುವ ಸೂರ್ಯದೇವ ಇಂದು ಪರಮೇಶ್ವರನ ದರ್ಶನ ಮಾಡಿ ಉತ್ತರಾಯಣ ಪ್ರವೇಶ ಮಾಡುತ್ತಾನೆ. ಈ ವೇಳೆ ಸಂಜೆ ದೇಗುಲದ ಬಲಭಾಗದಲ್ಲಿರುವ ಕಿಂಡಿಯ ಮೂಲಕ ಪ್ರವೇಶಿಸುವ ಸೂರ್ಯ ರಶ್ಮಿ ಬಳಿಕ ನಂದಿಯ ಕೊಂಬುಗಳ ಮೂಲಕ ಹಾದು ಗವಿಯೊಳಗಿರುವ ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ಭಾಸ್ಕರ ವಿಸ್ಮಯ ಇಂದು ನಡೆಯಲಿದೆ. ಇದನ್ನೂ ಓದಿ: ಸಂಕ್ರಾಂತಿ ಸುಗ್ಗಿ; ಹಸುಗಳಿಗೆ ಕಿಚ್ಚು ಹಾಯಿಸುವ ಸಂಭ್ರಮ
Advertisement
Advertisement
ಸಂಜೆ 5:15 ರಿಂದ 5:17 ರ ವರೆಗೆ ಈ ಕೌತುಕ ನಡೆಯಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದು, ದೇಗುಲದ ಅವರಣದಲ್ಲಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ.
Advertisement
Advertisement
ಪ್ರತಿ ವರ್ಷ ಈ ಸುಂದರ ವಿದ್ಯಮಾನಕ್ಕೆ ದೇವಸ್ಥಾನ ಸಾಕ್ಷಿಯಾಗುತ್ತದೆ. ಭಕ್ತರ ಕೌತುಕ ವಿಸ್ಮಯವನ್ನು ಕಣ್ತುಂಬಿಸಿಕೊಳ್ಳುವ ಕಾತುರ ಅದೇ ರೀತಿ ಇರಲಿದೆ. ಇದನ್ನೂ ಓದಿ: ಇಂದಿನಿಂದ ಉತ್ತರಾಯಣ ಆರಂಭ – ಶುಭ ಕಾರ್ಯಕ್ಕೆ ಮಂಗಳಕರ ಅವಧಿ ಯಾಕೆ?