‘ಎಳ್ಳು ಬೆಲ್ಲ ತಿಂದು, ಒಳ್ಳೆಯ ಮಾತನಾಡಿ’ ಎಂಬ ಗಾದೆ ಇದೆ. ಅದರಂತೆಯೇ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ ತಿಂದು ಹೊಸ ವರ್ಷದ ಮೊದಲ ಹಬ್ಬವನ್ನು ಸಿಹಿಯಾಗಿ ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು
1. ಬಿಳಿ ಎಳ್ಳು – 200 ಗ್ರಾಂ
2. ಅಚ್ಚು ಬೆಲ್ಲ – 2
3. ಕೊಬ್ಬರಿ – 2 ಓಳು
4. ಹುರಿಗಡಲೆ – 1 ಕಪ್
5. ಕಡ್ಲೆಕಾಯಿಬೀಜ – 1 ಕಪ್
6. ಜೀರಿಗೆ ಪೆಪ್ಪರ್ ಮೆಂಟ್ – 100 ಗ್ರಾಂ
7. ಬಿಳಿ ಬತಾಸು – 100 ಗ್ರಾಂ
Advertisement
Advertisement
ಮಾಡುವ ವಿಧಾನ
* ಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.
* ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.
* ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ.
* ಕೊಬ್ಬರಿ ಕಪ್ಪು ಭಾಗವನ್ನು ತೆಗೆದು ಚಿಕ್ಕದಾಗಿ ಕಟ್ ಮಾಡಿ.
* ಹುರಿಗಡಲೆಯನ್ನು ಬೆಚ್ಚಗಾಗುವಷ್ಟು ಹುರಿದುಕೊಳ್ಳಿ.
* ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಎಳ್ಳು, ಕಡ್ಲೆಕಾಯಿಬೀಜ, ಹುರಿಗಡಲೆ, ಸಣ್ಣಗೆ ತುಂಡರಿಸಿದ ಬೆಲ್ಲ, ಕೊಬ್ಬರಿ, ಜೀರಿಗೆ ಪೆಪ್ಪರ್ ಮೆಂಟ್, ಬಿಳಿ ಬತಾಸು ಸೇರಿಸಿ ಮಿಕ್ಸ್ ಮಾಡಿ.
* ಒಂದು ಏರ್ ಟೈಟ್ ಜಾರ್ ಗೆ ಶೇಖರಿಸಿಟ್ಟರೆ ತಿಂಗಳುಗಳ ಕಾಲ ತಿನ್ನಲು ಯೋಗ್ಯವಾಗಿರುತ್ತದೆ.
* ಅಂಗಡಿಯಲ್ಲಿ ಸಿಗುವ ರೆಡಿ ಮಿಕ್ಸ್ ಗಿಂತ ಮನೆಯಲ್ಲೇ ಮಾಡಿ ಪ್ರೆಶ್ ಆಗಿ ತಿನ್ನಿರಿ.
Advertisement
ಇದನ್ನೂ ಓದಿ: ಸಂಕ್ರಾಂತಿ ಯಾಕೆ ಮಾಡ್ತಾರೆ? ಈ ದಿನ ಎಳ್ಳಿಗೆ ಮಹತ್ವ ಯಾಕೆ?
ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?
ಇದನ್ನೂ ಓದಿ: ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು
ಇದನ್ನೂ ಓದಿ: ಸಂಕ್ರಾಂತಿಗೆ ನಿಮ್ಮ ಮನೆಯಲ್ಲಿರಲಿ ಅವಲಕ್ಕಿ ಸಿಹಿ ಪೊಂಗಲ್