ಬೆಂಗಳೂರು: ಸಿಲಿಕಾನ್ ಸಿಟಿಯ ಮನೆ ಮನಗಳಲ್ಲಿ ಸಂಕ್ರಾಂತಿ ಸಡಗರದ ಸಿರಿಯನ್ನು ಹೊತ್ತು ತಂದಿದೆ. ಸದಾ ಬ್ಯೂಸಿಯಾಗಿರೋ, ಐಟಿ-ಬಿಟಿ ಮಂದಿ ಕೆಲಸದ ನಡುವೆಯೂ ಹಬ್ಬವನ್ನು ಜೋಶ್ ನಿಂದ ಆಚರಿಸತ್ತಾ ಇದ್ದಾರೆ.ಇಡೀ ಮನೆಯನ್ನು ತಳಿರು-ತೋರಣಗಳಿಂದ ಸಿಂಗರಿಸಿದ್ದಾರೆ.
ಹೆಣ್ಣು ಮಕ್ಕಳಂತೂ ರಂಗು-ರಂಗಿನ ಸೀರೆ ಉಟ್ಕೊಂಡು , ಮನೆ ಅಂಗಳದಲ್ಲಿ ರಂಗೋಲಿಯ ಚಿತ್ತಾರ ಬಿಡಿಸುತ್ತಿದ್ದಾರೆ. ಉತ್ತರಾಯಣದ ಪುಣ್ಯಕಾಲದಲ್ಲಿ ಸೂರ್ಯ ದೇವನ ಕೃಪೆಗೆ ಪಾತ್ರರಾಗಲೂ ನಾನಾ ಪೂಜೆ,ವೃತಗಳನ್ನು ಮಾಡಿ, ಪೋಂಗಲ್ ನೈವೇದ್ಯವನ್ನು ಅರ್ಪಿಸುತ್ತಿದ್ದಾರೆ.
ಇದರ ಜೊತೆಗೆ ಚಿಕ್ಕ ಮಕ್ಕಳಿಗೆ ಎಳ್ಳು, ಕೊಬ್ಬರಿ, ಕಬ್ಬುಗಳನ್ನು, ತಲೆ ಮೇಲೆ ಹಾಕಿ ಕರಿ ಎರೆಯುತ್ತಿದ್ದಾರೆ.
ಮುತ್ತೈದೆಯರೆಲ್ಲ ಒಂದೆಡೆ ಸೇರಿ ಎಳ್ಳು-ಬೆಲ್ಲ ಸಿಹಿ ಹಂಚಿ ಸಂಪ್ರದಾಯ ಮೆರೆಯುತ್ತಾರೆ. ಒಟ್ನಲ್ಲಿ ಕ್ಲಬ್, ಪಬ್, ಫಂಕ್ಷನ್ ಅಂತಾ ಇದ್ದ ಬಹುತೇಕ ಮಂದಿ, ನಮ್ಮ ಸಂಪ್ರದಾಯವನ್ನು ಮರೆತಿಲ್ಲ ಎನ್ನುವುದು ಖುಷಿಯ ಸಂಗತಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv