ಮಕರ ಸಂಕ್ರಾಂತಿಯಂದು ಮಾಡುವ ಗಂಗಾ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಯಾಕೆಂದರೆ ಈ ದಿನ ಗಂಗೆಯು ಭೂಮಿಯಲ್ಲಿ ಜನಿಸಿದ ದಿನ. ಮಕರ ಸಂಕ್ರಾಂತಿಯಂದು ಗಂಗೆಯಲ್ಲಿ ಸ್ನಾನ ಮಾಡಲು ಸಾಧ್ಯಾವಾಗದಿದ್ದರೆ, ಸ್ನಾನ ಮಾಡುವ ನೀರಿಗೆ ಗಂಗಾ ನೀರನ್ನು ಬೆರೆಸಿ ಸ್ನಾನ ಮಾಡಬಹುದು. ಮಕರ ಸಂಕ್ರಾಂತಿಯಂದು ಗಂಗಾ ಸ್ನಾನ ಯಾಕೆ ಮಾಡಬೇಕು.? ಈ ದಿನ ಗಂಗಾ ಸ್ನಾನ ಮಾಡುವುದರ ಪ್ರಯೋಜನವೇನು..? ಗಂಗೆ ಭೂಮಿಗೆ ಬರಲು ಕಾರಣವೇನು? ಗಂಗಾ ಸ್ನಾನದ ಮಹತ್ವ ಏನು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಮಕರ ಸಂಕ್ರಾಂತಿಯ ಹಬ್ಬಕ್ಕೆ ಸನಾತನ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಸೂರ್ಯ ತನ್ನ ಮಗನ ರಾಶಿಚಕ್ರವಾದ ಮಕರ ರಾಶಿಯನ್ನು ಪ್ರವೇಶಿಸಿದ ದಿನವನ್ನೇ ಮಕರ ಸಂಕ್ರಾಂತಿಯೆಂದು ಆಚರಿಸಲಾಗುತ್ತದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ, ಸೂರ್ಯ, ಬುಧ, ಗುರು, ಚಂದ್ರ ಮತ್ತು ಶನಿ ಸೇರಿದಂತೆ ಐದು ಗ್ರಹಗಳ ಸಂಯೋಜನೆ ಇರುತ್ತದೆ. ಈ ವಿಶೇಷ ಸಂಯೋಜನೆಯಂದು, ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ.

ಇದನ್ನು ಮಾಡುವುದರಿಂದ ಮೋಕ್ಷ ಮತ್ತು ಸದ್ಗುಣಗಳನ್ನು ಪಡೆಯಬಹುದು. ಅಲ್ಲದೆ, ಗಂಗೆಯಲ್ಲಿ ಸ್ನಾನ ಮಾಡುವುದರಿಂದ, ಜನ್ಮ ಜನ್ಮಾಂತರದ ಪಾಪಗಳು ನಾಶವಾಗುತ್ತವೆ ಮತ್ತು ಎಲ್ಲಾ ದೇವಾನು ದೇವತೆಗಳು ಸಂತೋಷಗೊಳ್ಳುತ್ತಾರೆ ಎಂಬ ನಂಬಿಕೆ ಇದೆ.
ಗಂಗೆ ಭೂಮಿಗೆ ಬಂದಿದ್ದು
ಮಕರ ಸಂಕ್ರಾಂತಿಯ ದಿನದಂದು, ತಾಯಿ ಗಂಗಾಳು ಭೂಮಿಗೆ ಇಳಿದು ರಾಜ ಭಗೀರಥನನ್ನು ಕಪಿಲ ಮುನಿಯ ಆಶ್ರಮದ ಮೂಲಕ ಹಿಂಬಾಲಿಸಿದ್ದಳು, ಇದರ ಹಿಂದೆ ಒಂದು ಪುರಾಣ ಕಥೆಯಿದೆ. ಪ್ರಾಚೀನ ಕಾಲದಲ್ಲಿ ಸೂರ್ಯವಂಶದ ಚಕ್ರವರ್ತಿ ಸಾಗರ, ಅವನಿಗೆ ಇಬ್ಬರು ರಾಣಿಯರು ಇದ್ದರು. ಅವನಿಗೆ ರಾಣಿ ಕೇಶನಿ ಎನ್ನುವ ಪತ್ನಿಯಿಂದ ಒಬ್ಬ ಮಗನಿದ್ದನು ಮತ್ತು ಎರಡನೇ ಪತ್ನಿಯಿಂದ 60 ಸಾವಿರ ಗಂಡು ಮಕ್ಕಳಿದ್ದರು. ಒಂದು ದಿನ ರಾಜ ಸಾಗರನು ಅಶ್ವಮೇಧ ಯಾಗ ಮಾಡುವ ಸಂಕಲ್ಪ ಮಾಡಿದ. ಇದಕ್ಕಾಗಿ ಅವನು ತನ್ನ ಕುದುರೆಯನ್ನು ಸಂಚಾರಕ್ಕೆ ಕಳುಹಿಸಿದನು. ರಾಜ ಸಾಗರನ ಕುದುರೆಯನ್ನು ಇಂದ್ರ ದೇವನು ಕದ್ದು ಪಾತಾಳ ಲೋಕದಲ್ಲಿ ಕಪಿಲ ಮುನಿಯ ಆಶ್ರಮದಲ್ಲಿ ಕಟ್ಟಿ ಹಾಕುತ್ತಾನೆ.
ಸಾಗರ ರಾಜನ ತಪಸ್ಸು
ರಾಜನು ತನ್ನ 60 ಸಾವಿರ ಗಂಡು ಮಕ್ಕಳನ್ನು ಕರೆದು ಅಶ್ವಮೇಧ ಯಾಗಕ್ಕೆ ಬಿಟ್ಟ ಕುದುರೆಯನ್ನು ಮರಳಿ ಕರೆತರುವಂತೆ ಆದೇಶಿಸಿದನು. ಕಪಿಲ ಮುನಿಯ ಆಶ್ರಮದಲ್ಲಿ ಕಟ್ಟಿದ ಕುದುರೆಯನ್ನು ನೋಡಿದ ಆಶ್ರಮದ ಮೇಲೆ ದಾಳಿ ಮಾಡಿದರು. ಇದರಿಂದ ಕೋಪಗೊಂಡ ಕಪಿಲ ಮುನಿ ತನ್ನ ಕಣ್ಣುಗಳ ಜ್ವಾಲೆಯಿಂದ 60 ಸಾವಿರ ಗಂಡು ಮಕ್ಕಳನ್ನು ಸುಟ್ಟು ಬೂದಿ ಮಾಡುತ್ತಾನೆ. ರಾಜ ಸಾಗರ ಈ ಬಗ್ಗೆ ತಿಳಿದಾಗ, ಕಪಿಲ ಮುನಿ ಅವರ ಬಳಿ ಕ್ಷಮೆಗಾಗಿ ಪ್ರಾರ್ಥಿಸಿದರು. ಆಗ ಋಷಿ ಗಂಗೆಯ ನೀರಿನಿಂದ ಮಾತ್ರ ಈ ಪಾಪದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಹೇಳಿದನು. ರಾಜನು ತನ್ನ ಮೊಮ್ಮಗನಾದ ಅಂಶುಮಾನನ್ನು ಪಟ್ಟಾಧಿಕಾರಿಯನ್ನಾಗಿ ಮಾಡಿ ತಪಸ್ಸಿಗೆ ಹೋಗುತ್ತಾನೆ.
ಇದರ ನಂತರ, ಭಗೀರಥನ ಮೊಮ್ಮಗನಾದ ಅಂಶುಮಾನನು ಇತ್ತ ತನ್ನ ಅಜ್ಜನ ರಾಜ್ಯವನ್ನು ಆಳಲು ಮುಂದಾದರೆ, ಭಗೀರಥನು ತನ್ನ ಪೂರ್ವಜರ ಆತ್ಮದ ಶಾಂತಿಗಾಗಿ ಕಠಿಣ ತಪಸ್ಸು ಮಾಡಿದನು. ಇದರಿಂದ ಸಂತಸಗೊಂಡ ತಾಯಿ ಗಂಗಾ ಅವರ ಪ್ರಾರ್ಥನೆಯನ್ನು ಸ್ವೀಕರಿಸಿದಳು. ಆಕೆಯ ಪ್ರವಾಹದ ಹರಿವು ಎಷ್ಟು ವೇಗವಾಗಿತ್ತೆಂದರೆ ಭೂಮಿಗೆ ವಿನಾಶಕ್ಕೆ ತಳ್ಳುವ ಅಪಾಯವಿತ್ತು. ಇದಕ್ಕಾಗಿ ಭಗೀರಥ ಮಹಾರಾಜನು ಶಿವನನ್ನು ಧ್ಯಾನಿಸಿ ಸಹಾಯಕ್ಕಾಗಿ ಮನವಿ ಮಾಡಿದ.

ಭಗೀರಥನ ಧ್ಯಾನದಿಂದ ಶಿವನು ಸಂತಸಗೊಂಡು ಆತನಿಗೆ ಗಂಗೆಯನ್ನು ಭೂಮಿಗೆ ತರುವಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾನೆ. ಭಗೀರಥನ ತಪಸ್ಸಿಗೆ ಮೆಚ್ಚಿದ ಗಂಗೆಯು ಭೂಮಿಗೆ ಬಂದ ಶಿವನ ತನ್ನ ಜಟೆಯಿಂದ ಗಂಗೆಯನ್ನು ಬಿಗಿ ಹಿಡಿದು ಆಕೆಯ ಹರಿವನ್ನು ನಿಯಂತ್ರಿಸುತ್ತಾನೆ.
ಶಿವನ ಜಟೆಯಿಂದ ಗಂಗೆಯು ಸರಾಗವಾಗಿ ಹರಿದು ಭೂಮಿಗೆ ಬಂದು ಭಗೀರಥನನ್ನು ಅನುಸರಿಸಿ ಕಪಿಲ ಮುನಿಯ ಆಶ್ರಮಕ್ಕೆ ಹೋದಳು, ಅಲ್ಲಿ ರಾಜ ಸಾಗರನ 60 ಸಾವಿರ ಪುತ್ರರು ಆಕೆಯಿಂದ ವಿಮೋಚನೆಗೊಂಡರು. ಬಳಿಕ ಗಂಗೆ ಸಮುದ್ರ ಸೇರಿದಳು.
ಮಕರ ಸಂಕ್ರಾಂತಿಯ ದಿನದಂದು ತಾಯಿ ಗಂಗೆಯು ಪವಿತ್ರ ನೀರಿನ ರೂಪದಲ್ಲಿ ಭೂಮಿಯನ್ನು ತಲುಪಿದಳು. ಅಂದಿನಿಂದ ಯಾವ ವ್ಯಕ್ತಿ ಗಂಗೆಯಲ್ಲಿ ಸ್ನಾನ ಮಾಡುತ್ತಾನೋ ಆ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ. ಅವರ ಎಲ್ಲಾ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆಯಿದೆ. ಅಷ್ಟು ಮಾತ್ರವಲ್ಲ, ಆತನ ಎಲ್ಲಾ ತೊಂದರೆಗಳು ಕೂಡ ದೂರಾಗುವುದು ಎನ್ನಲಾಗುತ್ತದೆ.

