Advertisements

ವರ್ಕ್‍ಶಾಪ್‍ನಲ್ಲಿದ್ದ ಐಷಾರಾಮಿ ಕಾರುಗಳು ಸುಟ್ಟು ಭಸ್ಮ

ಹೈದರಾಬಾದ್: ಅಗ್ನಿ ಅವಘಡದಿಂದಾಗಿ ಶುಕ್ರವಾರ ರಾತ್ರಿ ಹೈ ಎಂಡ್ ಕಾರುಗಳ ವರ್ಕ್‍ಶಾಪ್‍ನಲ್ಲಿ ನಿಲ್ಲಿಸಲಾಗಿದ್ದ ಹಲವಾರು ವಿದೇಶಿ ಐಷಾರಾಮಿ ಕಾರುಗಳು ಸುಟ್ಟು ಭಸ್ಮವಾಗಿವೆ.

Advertisements

ಬರ್ಲಿನ್ ಮೋಟಾರ್ ವರ್ಕ್ಸ್, ಅತ್ತಾಪುರದ ರಾಧಾ ಕೃಷ್ಣ ನಗರದಲ್ಲಿ ಜರ್ಮನ್ ಮತ್ತು ಅಮೆರಿಕನ್ ಕಾರುಗಳ ಸ್ಥಳೀಯ ಕಾರ್ಯಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ವರ್ಕ್‍ಶಾಪ್‍ನಲ್ಲಿದ್ದ ಹಲವಾರು ಐಷಾರಾಮಿ ಕಾರುಗಳು ಬೆಂಕಿಯಿಂದಾಗಿ ಸುಟ್ಟುಹೋಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುವುದರ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

Advertisements

ಪ್ರತಿದಿನ ರಾತ್ರಿ 10 ಗಂಟೆಯವರೆಗೆ ತೆರೆದಿರುವ ವರ್ಕ್‍ಶಾಪ್‍ನಲ್ಲಿದ್ದ ಸಿಬ್ಬಂದಿ ಗ್ಯಾರೇಜ್‍ನಲ್ಲಿದ್ದ ಕಾರುಗಳಿಂದ ಬೆಂಕಿ ಹೊರಹೊಮ್ಮುತ್ತಿರುವುದನ್ನು ಗಮನಿಸಿ ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದಾಗಿ ಕಾರುಗಳಿಗೆ ತೀವ್ರವಾಗಿ ಹಾನಿಯಾಗಿದ್ದು, ಹಾನಿಗೊಳಗಾದ ಆಸ್ತಿಯ ಒಟ್ಟು ಮೌಲ್ಯವನ್ನು ಇನ್ನೂ ಅಂದಾಜಿಸಬೇಕಾಗಿದೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್

Advertisements
Exit mobile version