ಕನ್ನಡ ಚಿತ್ರರಂಗದ ಬ್ಯೂಟಿ ಕ್ವೀನ್ ಎಂದೇ ಗುರುತಿಸಿಕೊಂಡಿರುವ ನಟಿ ಸಂಹಿತಾ ವಿನ್ಯಾಗೆ (Samhita Vinya) ಈ ವರ್ಷ ಲಕ್ಕಿ ಇಯರ್ ಎಂದೇ ಹೇಳಬಹುದು. ದರ್ಶನ್ ಅಭಿನಯದ ಮೆಜೆಸ್ಟಿಕ್ ಚಿತ್ರದ ಮತ್ತೊಂದು ವರ್ಷನ್ ಆದ ಮೆಜೆಸ್ಟಿಕ್-2 (Majestic 2) ಚಿತ್ರದ ಹೀರೋಯಿನ್ ಕೂಡ ಆಗಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಸಂಹಿತಾ ಅಭಿನಯದ ಜಿಎಸ್‌ಟಿ, ಕಳೆದ ತಿಂಗಳು ಮಿಕ್ಸಿಂಗ್ ಪ್ರೀತಿ, ಹೀಗೆ ಒಂದರ ಮೇಲೊಂದರಂತೆ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದೀಗ ಸಂಹಿತಾ ನಾಯಕಿಯಾಗಿ ನಟಿಸಿರುವ ಮೆಜೆಸ್ಟಿಕ್-2 ಚಿತ್ರ ಕೂಡ ತೆರೆ ಕಾಣುತ್ತಿದೆ. ಸೂಪರ್ ಮಾಡೆಲ್, ಶೋ ಸ್ಟಾಪರ್ ಕೂಡ ಆಗಿರುವ ಸಂಹಿತಾ ವಿನ್ಯಾ ಈಗಾಗಲೇ ಕನ್ನಡ, ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಾಪರಾಜಿಗಳ ವಿರುದ್ಧ ಸಿಡಿದೆದ್ದ ಚಂದನವನದ ತಾರೆಯರು

ಕೆಲಸ ಹುಡುಕಿಕೊಂಡು ಹಳ್ಳಿಯಿಂದ ಸಿಟಿಗೆ ಬರುವ ಬಡ ಯುವತಿಯಾಗಿ ಸಂಹಿತಾ ಅವರು ಮೆಜೆಸ್ಟಿಕ್ -2 ಚಿತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಮೆಜೆಸ್ಟಿಕ್‌ಗೆ ಬಂದಿಳಿಯುವ ಆಕೆಗೆ, ರೌಡಿಸಂ ಮಾಡಿಕೊಂಡಿದ್ದ ನಾಯಕ ಭರತ್ ಪರಿಚಯ ಆಗುತ್ತದೆ. ಆತನ ಜೊತೆ ಲವ್ ಕೂಡ ಆಗಿ ನಂತರ ಏನೇನೆಲ್ಲ ನಡೆದು ಹೋಗುತ್ತದೆ ಎನ್ನುವುದೇ ಈ ಚಿತ್ರದ ಕಥೆ. ಮಾಲಾಶ್ರೀ, ಶೃತಿಯಂಥ ಹಿರಿಯ ಕಲಾವಿದೆಯರೊಂದಿಗೆ ನಟಿಸಿದ್ದು, ನನ್ನ ಜೀವನದ ಮರೆಯಲಾಗದ ಅನುಭವ ಎನ್ನುತ್ತಾರೆ. ಇದಲ್ಲದೆ ಸಂಹಿತಾ ಅಭಿನಯದ ಸ್ವಾಭಿಮಾನಿ, ವಿದೂಷಕ, ಯಾಕೋ ಬೇಜಾರು ಸೇರಿದಂತೆ ಒಂದಷ್ಟು ಚಿತ್ರಗಳು ರಿಲೀಸ್ ಹಂತದಲ್ಲಿದ್ದು, ಇದೇ ವರ್ಷ ತೆರೆ ಕಾಣಲಿವೆ.

