ಹುಬ್ಬಳ್ಳಿ: ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಾಲವಾಡ ಗ್ರಾಮದ ಮುಖ್ಯರಸ್ತೆ ಕೆಸರು ಗದ್ದೆಯಾಗಿದ್ದು, ವಾಹನ ಇರಲಿ ಜನರು ಸಹ ಒಂದು ಹೆಜ್ಜೆ ಕಿತ್ತಿಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಲವಾಡದ ನವಗ್ರಾಮದಲ್ಲಿ 60 ಕುಟುಂಬಗಳು ಜೀವನ ನಡೆಸುತ್ತಿವೆ. ಹೆಸರು ಮಾತ್ರ ನವಗ್ರಾಮ ಆದರೆ ಅಭಿವೃದ್ಧಿಯಲ್ಲಿ ಆದಿಮಾನವರ ಕಾಲದಲ್ಲಿದ್ದಾರೆ. ಈ ಹಿಂದೆಯೂ ಗ್ರಾಮಕ್ಕೆ ಹಲವು ಬಾರಿ ಮಳೆ ಬಂದು ರಸ್ತೆಯೆಲ್ಲ ಹದಗೆಟ್ಟಿ ಜನರು ನಡೆದಾಡಲು ಬಹಳಷ್ಟು ಕಷ್ಟದಾಯಕವಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಜನ ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಒಂಟಿ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಕತ್ತು ಕೊಯ್ದ ಕಿರಾತಕರು – ಕೊಲೆಯ ಹಿಂದೆ ಅನುಮಾನದ ಹುತ್ತ
Advertisement
Advertisement
ಈಗ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ರಸ್ತೆ ಸಂಪೂರ್ಣವಾಗಿ ಹಾಳಾಗಿ ಭತ್ತದ ಗದ್ದೆಯಂತಾಗಿದೆ. ತುರ್ತುಪರಿಸ್ಥಿತಿಯಲ್ಲಿ ಬಾಣಂತಿಯರು, ಗರ್ಭಿಣಿರು, ಅನಾರೋಗ್ಯ ಪೀಡಿತರು ಸೇರಿದಂತೆ ಗ್ರಾಮಸ್ಥರು ರಸ್ತೆಗಿಳಿಯಲು ಸಂಕಷ್ಟ ಎದುರಾಗಿದೆ.
Advertisement
Advertisement
ಈ ರಸ್ತೆಯಲ್ಲಿ ವಾಹನಗಳನ್ನು ತಂದರೇ ಮುಗಿಯಿತೂ ಕಥೆ. ಚಕ್ರಕೆಲ್ಲಾ ಮೆಣ್ಣುಮೆತ್ತಿ ಚಕ್ರ ತಿರುಗದೆ ಕೆಳಗೆ ಬಿಳೋದೂ ಗ್ಯಾರಂಟಿ. ಒಂದು ವೇಳೆ ಗಾಡಿ ಕೈಕೊಟ್ಟರೆ ರಸ್ತೆಗೆ ಗೋಣಿಚೀಲ ಹಾಕಿ ಅದರ ಮೇಲೆ ಬೈಕ್ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಗ್ರಾಮದಲ್ಲಿ ಸಾಕಷ್ಟು ಮನೆಗಳು ಸಹ ಹಾನಿಗೊಳಗಾಗಿವೆ. ಹೀಗಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸಂಕಷ್ಟ ಕೇಳಲು ಮುಂದಾಗುತ್ತಿಲ್ಲ. ಇದನ್ನೂ ಓದಿ: 5 ವರ್ಷದ ವಿದ್ಯಾರ್ಥಿನಿಯನ್ನು ಥಳಿಸಿದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು