– ಭಾರತದ ಪರ ದ್ವಿಶತಕ ಸಿಡಿಸಿದ 3ನೇ ಕಿರಿಯ ಆಟಗಾರ
– 400 ರನ್‌ಗಳ ಗಡಿ ಸಮೀಪಿಸಿದ ಟೀಂ ಇಂಡಿಯಾ
ವಿಶಾಖಪಟ್ಟಣಂ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಆಕರ್ಷಕ ದ್ವಿಶತಕ ಬಾರಿಸಿ ಮಿಂಚಿದ್ದಾರೆ.
Maiden DOUBLE HUNDRED for Yashasvi Jaiswal ????????
TAKE. A. BOW ????
Follow the match ▶️ https://t.co/X85JZGt0EV#TeamIndia | #INDvENG | @ybj_19 | @IDFCFIRSTBank pic.twitter.com/uTvJLdtDje
— BCCI (@BCCI) February 3, 2024
Advertisement
ಈವೆರೆಗೆ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಕಪ್ ಟೂರ್ನಿಗಳಲ್ಲಿ ದ್ವಿಶತಕ ಸಿಡಿಸಿದ್ದ 22 ವರ್ಷ ವಯಸ್ಸಿನ ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕದ ಖಾತೆ ತೆರೆದಿದ್ದಾರೆ. 277 ಎಸೆತಗಳಲ್ಲಿ 200 ರನ್ (18 ಬೌಂಡರಿ, 7 ಸಿಕ್ಸರ್) ಬಾರಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಭಾರತದ (Team India) 3ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ 400 ರನ್‌ಗಳ ಗಡಿ ಸಮೀಪಿಸಿದೆ.
Advertisement
Advertisement
ವಿಶಾಖಪಟ್ಟಣಂನ ಡಾ. ವೈ.ಎಸ್.ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ (England) ವಿರುದ್ಧದ 2ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಆರಂಭಿಸಿದ ಜೈಸ್ವಾಲ್ 209 ರನ್ ಗಳಿಸಿ ಔಟಾದರು. ಮೊದಲ ದಿನದಾಟದಲ್ಲಿ 179 ರನ್ ಗಳಿಸಿದ ಜೈಸ್ವಾಲ್ 2ನೇ ದಿನದಾಟದಲ್ಲಿ 290 ಎಸೆತಗಳಲ್ಲಿ 209 ರನ್ ಬಾರಿಸಿ ಮಿಂಚಿದ್ದಾರೆ. ಇದನ್ನೂ ಓದಿ: ಆಂಗ್ಲರ ವಿರುದ್ಧ ಯಶಸ್ವಿ ಜೈಸ್ವಾಲ್ ಬೊಂಬಾಟ್ ಶತಕ – ಬೃಹತ್ ಮೊತ್ತದತ್ತ ಭಾರತ
Advertisement
ವಿಶೇಷ ಸಾಧನೆ ಮಾಡಿದ ಕಿರಿಯ ಆಟಗಾರ:
ಆಂಗ್ಲರ ವಿರುದ್ಧ ಬ್ಯಾಟಿಂಗ್ ಪ್ರಾಬಲ್ಯ ಮೆರೆದ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ದ್ವಿಶತಕ ಸಿಡಿಸಿದ 3ನೇ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ವಿಶೇಷ ಸಾಧನೆಗೆ ಪಾತ್ರರಾಗಿದ್ದಾರೆ. 1993ರಲ್ಲಿ ವಾಂಖೆಡೆ ಮೈದಾನದಲ್ಲಿ ವಿನೋಂದ್ ಕಾಂಬ್ಳಿ (21 ವರ್ಷ, 32 ದಿನಗಳು), ನಂತರ ಸುನೀಲ್ ಗವಾಸ್ಕರ್ 21 ವರ್ಷ 277 ದಿನಗಳಿದ್ದಾಗ ಈ ಸಾಧನೆ ಮಾಡಿದ್ದರು. ಆದ್ರೆ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ದ್ವಿಶತಕ ಬಾರಿಸಿದ ಸಾಧನೆ ಜಾವೇದ್ ಮಿಯಾಂದಾದ್ ಹೆಸರಿನಲ್ಲಿದೆ. ಜಾವೇದ್ 19 ವರ್ಷ, 140 ದಿನಗಳ ವಯಸ್ಸಿನಲ್ಲಿ ತಮ್ಮ ಸಾಧನೆ ಮಾಡಿದ್ದರು. ಇದನ್ನೂ ಓದಿ: ಮೊದಲ ದಿನವೇ ʻಯಶಸ್ವಿʼ ಶತಕದ ಹೋರಾಟ – ಭರ್ಜರಿ ಮೊತ್ತದತ್ತ ಭಾರತ
ದಿಗ್ಗಜರ ಎಲೈಟ್ ಪಟ್ಟಿಗೆ ಜೈಸ್ವಾಲ್:
ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿರುವ ಜೈಸ್ವಾಲ್ ಮೊದಲ ದಿನದ ಆಟದಲ್ಲೇ ಅತಿಹೆಚ್ಚು ರನ್‌ಗಳಿಸಿದ ದಿಗ್ಗಜರ ಎಲೈಟ್ ಪಟ್ಟಿ ಸಹ ಸೇರಿದ್ದಾರೆ.
* 228 ವಿರೇಂದ್ರ ಸೆಹ್ವಾಗ್ ವಿರುದ್ಧ ಪಾಕ್ ಮುಲ್ತಾನ್ – 2004
* 195 ವಿರೇಂದ್ರ ಸೆಹ್ವಾಗ್ ವಿರುದ್ಧ ಆಸ್ ಮೆಲ್ಬೋರ್ನ್ – 2003
* 192 ವಾಸಿಂ ಜಾಫರ್ ವಿರುದ್ಧ ಪಾಕ್ ಕೋಲ್ಕತ್ತಾ – 2007
* 190 ಶಿಖರ್ ಧವನ್ ವಿರುದ್ಧ ಎಸ್ಎಲ್ ಗಾಲೆ – 2017
* 180 ವೀರೇಂದ್ರ ಸೆಹ್ವಾಗ್ vs WI ಗ್ರೋಸ್ ಐಲೆಟ್ – 2006
* 179 ಯಶಸ್ವಿ ಜೈಸ್ವಾಲ್ ವಿರುದ್ಧ ಇಂಗ್ಲೆಂಡ್ ವೈಜಾಗ್ – 2024