ನವದೆಹಲಿ: ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾಗೆ XUV 700 ಎಸ್‍ಯುವಿ ಕಾರ್ ಅನ್ನು ಮಹೀಂದ್ರಾ ಕಂಪೆನಿ ಉಡುಗೊರೆಯಾಗಿ ನೀಡಿದೆ.
Advertisement
ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ನೀರಜ್ ಮೊದಲ ಚಿನ್ನದ ಪದಕ ತಂದ ಹಿನ್ನೆಲೆಯಲ್ಲಿ ಕಾರು ಗಿಫ್ಟ್ ನೀಡುವುದಾಗಿ ಆನಂದ್ ಮಹೀಂದ್ರಾ ಅವರು ಘೋಷಿಸಿದ್ದರು. ಅಲ್ಲದೇ ಚಿನ್ನದ ಪದಕ ವಿಜೇತನ ಸಾಧನೆ ಗುರುತಿಸುವ ಉದ್ದೇಶದಿಂದ ಕಾರನ್ನು ವಿಶಿಷ್ಟವಾಗಿ ವಿನ್ಯಾಸಗೊಸಲಾಗಿತ್ತು. ಇದನ್ನೂ ಓದಿ: ಭೀಕರ ಅಪಘಾತ-11 ಮಂದಿ ಸಾವು, ನಾಲ್ವರಿಗೆ ಗಾಯ
Advertisement
Thank you @anandmahindra ji for the new set of wheels with some very special customisation! I'm looking forward to taking the car out for a spin very soon. ???? pic.twitter.com/doNwgOPogp
— Neeraj Chopra (@Neeraj_chopra1) October 30, 2021
Advertisement
ಕಾರು ಉಡುಗೊರೆಯನ್ನು ಸ್ವೀರಿಸಿದ ನೀರಜ್ ಚೋಪ್ರಾ ಅವರು ಮಹೀಂದ್ರಾ ಕಂಪೆನಿಗೆ ಧನ್ಯವಾದ ತಿಳಿಸಿದ್ದಾರೆ. “ಕೆಲವು ವಿಶಿಷ್ಟ ವಿನ್ಯಾಸಗಳೊಂದಿಗೆ ಕಾರನ್ನು ರೂಪಿಸಿ ಉಡುಗೊರೆಯಾಗಿ ನೀಡಿರುವ ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದಗಳು! ಶೀಘ್ರವೇ ಕಾರಿನಲ್ಲಿ ತಿರುಗಾಡಲು ಎದುರು ನೋಡುತ್ತಿದ್ದೇನೆ” ಎಂದು ಖುಷಿ ವ್ಯಕ್ತಪಡಿಸಿ ನೀರಜ್ ಟ್ವೀಟ್ ಮಾಡಿದ್ದಾರೆ.
Advertisement
ನೀರಜ್ ಚೋಪ್ರಾ ಅವರಿಗೆ ನೀಡಿರುವ ಎಸ್‍ಯುವಿ700 ಕಾರು ಕಪ್ಪು ಬಣ್ಣದ್ದಾಗಿದೆ. ಹೊಸ ಮಹೀಂದ್ರಾ ಲೋಗೊ ಅನ್ನು ಒಳಗೊಂಡಿದೆ. ಸ್ಯಾಟಿನ್ ಚಿನ್ನದ ಲೇಪವನ್ನೂ ಹೊಂದಿದೆ. ಇದನ್ನೂ ಓದಿ: ದೆಹಲಿಯಲ್ಲಿ ಶ್ವಾನಗಳಿಗಾಗಿ ಪಾರ್ಕ್ ನಿರ್ಮಾಣ!
ಟೋಕಿಯೊ ಒಲಿಂಪಿಕ್ಸ್ (2020)ನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ದಾಖಲೆ ಮುರಿದಿದ್ದರು. ಈ ವರ್ಷ ನಡೆದ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದಿದ್ದರು.