ಭಾರತದ ಪ್ರಮುಖ ಎಸ್‌ಯುವಿ ತಯಾರಕರಾದ ಮಹೀಂದ್ರಾ & ಮಹೀಂದ್ರಾ (Mahindra & Mahindra) ಲಿಮಿಟೆಡ್ ಇತ್ತೀಚಿಗೆ ಹೊಸ XUV 3XO ‘REVX’ ಕಾರನ್ನು ಬಿಡುಗಡೆ ಮಾಡಿದೆ. ಇತೀಚೆಗಷ್ಟೇ ಮಹೀಂದ್ರಾ XUV 3XO ಕಾರುಗಳು ಒಂದು ವರ್ಷದೊಳಗೆ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿತ್ತು. ಈ ಗುರಿಯನ್ನು ಇಷ್ಟು ಬೇಗ ತಲುಪಿದ ಮಹೀಂದ್ರಾ SUV ಇದಾಗಿದೆ. ಈ ಸಾಧನೆಯನ್ನು ಸಂಭ್ರಮಿಸಲು ಮತ್ತು ಇನ್ನಷ್ಟು ಜನರನ್ನು ತಲುಪಲು ಕಂಪನಿಯು XUV 3XO ‘REVX’ ಶ್ರೇಣಿಯನ್ನು ಅತ್ಯಾಕರ್ಷಕ ಡಿಸೈನ್, ಉತ್ತಮ ಕಾರ್ಯಕ್ಷಮತೆ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. REVX ಸರಣಿಯ ಕಾರುಗಳ ಬೆಲೆ ರೂ. 8.94 ಲಕ್ಷದಿಂದ ಪ್ರಾರಂಭವಾಗುತ್ತದೆ.
REVX ಸರಣಿಯ ಪ್ರಮುಖ ಮುಖ್ಯಾಂಶಗಳು
REVX M (ಎಕ್ಸ್-ಶೋರೂಮ್ ಬೆಲೆ: ₹ 8.94 ಲಕ್ಷ) – ಈ ರೂಪಾಂತರದಲ್ಲಿ 1.2L mStallion TCMPFi ಎಂಜಿನ್ ಇದ್ದು, ಈ ಪೆಟ್ರೋಲ್ ಎಂಜಿನ್ 82 kW ಪವರ್ ಮತ್ತು 200 Nm ಟಾರ್ಕ್ ಉತ್ಪಾದಿಸುತ್ತದೆ. ಹೊರಭಾಗದಲ್ಲಿ ಕಾರಿನ ಬಣ್ಣದ ಗ್ರಿಲ್, LED DRLಗಳು, R16 ಕಪ್ಪು ಬಣ್ಣದ ವೀಲ್ ಕವರ್‌ಗಳು ಮತ್ತು ಸ್ಪೋರ್ಟಿ ಡ್ಯುಯಲ್-ಟೋನ್ ರೂಫ್ ಹೊಂದಿದೆ. ಒಳಭಾಗದಲ್ಲಿ ಪ್ಲಶ್ ಕಪ್ಪು ಲೆದರೆಟ್ ಸೀಟುಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಸ್, 26.03 ಸೆಂ.ಮೀ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 4-ಸ್ಪೀಕರ್ ಆಡಿಯೊ ಸೆಟಪ್ ಹೊಂದಿದೆ. ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್ (HHC) ಜೊತೆಗೆ ESC ಮತ್ತು ಎಲ್ಲಾ 4 ಡಿಸ್ಕ್ ಬ್ರೇಕ್‌ಗಳು ಸೇರಿದಂತೆ 35 ಪ್ರಮಾಣಿತ ವೈಶಿಷ್ಟ್ಯಗಳೊಂದಿಗೆ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
REVX M(O) (ಎಕ್ಸ್-ಶೋರೂಮ್ ಬೆಲೆ: ₹ 9.44 ಲಕ್ಷ) – ಈ ರೂಪಾಂತರವು REVX M ನಲ್ಲಿರುವ ಎಲ್ಲಾ ವೈಶಿಷ್ಟ್ಯಗಳ ಜೊತೆ ಹೆಚ್ಚುವರಿಯಾಗಿ ಸಿಂಗಲ್-ಪೇನ್ ಸನ್‌ರೂಫ್ ಹೊಂದಿದ್ದು ಅತ್ಯಾಧುನಿಕತೆಯನ್ನು ಹೆಚ್ಚಿಸಿದೆ. REVX Mಗಿಂತ ಉತ್ತಮ ಕ್ಯಾಬಿನ್ ಅನುಭವ ಇದರಲ್ಲಿ ದೊರೆಯಲಿದೆ.
REVX A (ಎಕ್ಸ್-ಶೋರೂಮ್ ಬೆಲೆ ₹ 11.79 ಲಕ್ಷದಿಂದ ಪ್ರಾರಂಭವಾಗುತ್ತದೆ) – ಈ ರೂಪಾಂತರವು ಸುಧಾರಿತ 1.2L mStallion TGDi ಎಂಜಿನ್ ಹೊಂದಿದೆ, ಇದು ತನ್ನ ವಿಭಾಗದ ಕಾರುಗಳಲ್ಲಿಯೇ ಅತ್ಯತ್ತಮ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಡೀಸೆಲ್ ಎಂಜಿನ್ 96 kW ಪವರ್ ಮತ್ತು 230 Nm ಟಾರ್ಕ್ ಉತ್ಪಾದಿಸುತ್ತದೆ. ಮಾನ್ಯುಯಲ್ ಗೇರ್‌ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ REVX A ಲಭ್ಯವಿದೆ. ಪ್ಯಾನಾರೋಮಿಕ್ ಸನ್‌ರೂಫ್, ಲೆದರೆಟ್ ಸೀಟುಗಳು, ಡ್ಯುಯಲ್-ಟೋನ್ ಒಳಾಂಗಣ, ಆಟೋ-ಡಿಮ್ಮಿಂಗ್ IRVM, ಇತ್ಯಾದಿ ಪ್ರೀಮಿಯಂ ವೈಶಿಷ್ಟ್ಯಗಳನ್ನು REVX A ಹೊಂದಿದೆ . ಹೊರಭಾಗದಲ್ಲಿ ಕಾರಿನ ಬಣ್ಣದ ಮುಂಭಾಗದ ಗ್ರಿಲ್, ವಿಶಿಷ್ಟ ಬ್ಯಾಡ್ಜಿಂಗ್, ಕಪ್ಪು ಬಣ್ಣದ R16 ಅಲಾಯ್ ವೀಲ್‌ಗಳು, ಡ್ಯುಯಲ್-ಟೋನ್ ರೂಫ್ ಅನ್ನು ಈ ಕಾರು ಹೊಂದಿದೆ. 26.03 cm HD ಇನ್ಫೋಟೈನ್‌ಮೆಂಟ್ ಸಿಸ್ಟಮ್, 26.03 cm HD ಡಿಜಿಟಲ್ ಕ್ಲಸ್ಟರ್, ಅಡ್ರಿನಾಕ್ಸ್ ಕನೆಕ್ಟ್ , ಅಲೆಕ್ಸಾ, ಆನ್‌ಲೈನ್ ನ್ಯಾವಿಗೇಷನ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು REVX A ಹೊಂದಿದೆ.
REVX ಸರಣಿಯ ಎಲ್ಲಾ ಮೂರು ರೂಪಾಂತರಗಳು ಗ್ಯಾಲಕ್ಸಿ ಗ್ರೇ, ಟ್ಯಾಂಗೋ ರೆಡ್, ನೆಬ್ಯುಲಾ ಬ್ಲೂ, ಎವರೆಸ್ಟ್ ವೈಟ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಎಂಬ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.