ತೆಲುಗು ನಟ(Telagu Actor) ಮಹೇಶ್ ಬಾಬು(Mahesh Babu) ಅವರ ಕುಟುಂಬಕ್ಕೆ ಒಂದಾದ ಮೇಲೊಂದು ಆಘಾತ ಎದುರಾಗುತ್ತಿದೆ. ಮಹೇಶ್ ಬಾಬು ತಂದೆ ಕೃಷ್ಣ ಅವರ ಸಾವಿಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಇದೀಗ ಮಹೇಶ್ ಬಾಬು ಇಬ್ಬರು ಮಕ್ಕಳು ಸಿತಾರಾ ಮತ್ತು ಗೌತಮ್ ಕೂಡ ಅಗಲಿದ ತಾತನ ನೆನೆದು ಕಣ್ಣೀರಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತ್ರದ ಮೂಲಕ ದುಃಖ ತೊಡಿಕೊಂಡಿದ್ದಾರೆ.
ಮಹೇಶ್ ಬಾಬು ಅವರ ಕುಟುಂಬಕ್ಕೆ ದೊಡ್ಡ ಪೆಟ್ಟೆ ಬಿದ್ದಿದೆ. ಈ ವರ್ಷ ಶುರುವಿನಲ್ಲಿ ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು ನಿಧನರಾಗಿದ್ದರು. ಇತ್ತೀಚೆಗೆ ನಟನ ತಾಯಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದರು. ಈಗಾಗಲೇ ಶೋಕ ಸಾಗರದಲ್ಲಿ ಮುಳುಗಿರುವ ಈ ಕುಟುಂಬಕ್ಕೆ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ ಅವರ ಕೂಡ ಶಾಕ್ ಕೊಟ್ಟಿದೆ. ಹೀಗಿರುವಾಗ ಅಗಲಿದ ತಾತನನ್ನು ನೆನೆದು ಮಹೇಶ್ ಬಾಬು ಮಕ್ಕಳು ಪತ್ರವೊಂದನ್ನ ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: 50 ದಿನ ಪೂರೈಸುವುದಕ್ಕೂ ಮೊದಲೇ `ಕಾಂತಾರ’ ಎತ್ತಂಗಡಿ ಆಗುತ್ತಾ?
ಪುತ್ರಿ ಸಿತಾರಾ ತನ್ನ ತಾತನ ಜೊತೆಯಿರುವ ಫೋಟೋ ಶೇರ್ ಮಾಡಿ, ಇನ್ನು ನಾವು ಒಟ್ಟಿಗೆ ಕೂತು ಊಟ ಮಾಡುವುದಕ್ಕೆ ಆಗಲ್ಲ. ನೀವು ನನಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದೀರಿ. ಪ್ರತಿನಿತ್ಯ ನಾನು ನಗುವಂತೆ ನೋಡಿಕೊಂಡಿದ್ದೀರಿ. ಇನ್ನು ಅವೆಲ್ಲಾ ನೆನಪು ಮಾತ್ರ. ನೀವು ನನ್ನ ನಿಜವಾದ ಹೀರೋ. ಒಂದು ದಿನ ನೀವು ಹೆಮ್ಮೆ ಪಡುವಂತೆ ಮಾಡುತ್ತೇನೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ತಾತ ಎಂದು ಸಿತಾರಾ ತನ್ನ ತಾತನೊಂದಿಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾಳೆ.
ಅದೇ ರೀತಿಯಾಗಿ ಮಹೇಶ್ ಬಾಬು ಪುತ್ರ ಗೌತಮ್ ಕೂಡ ಭಾವನಾತ್ಮಕ ಪತ್ರ ಹಂಚಿಕೊAಡಿದ್ದು, ನೀವು ಎಲ್ಲೇ ಇರಿ, ಹೇಗೆ ಇರಿ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನೀವು ಕೂಡ ನನ್ನನ್ನು ಪ್ರೀತಿಸುತ್ತೀರಾ ಎಂದು ಗೊತ್ತು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ತಾತ ಎಂದು ಗೌತಮ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ.
ಇನ್ನೂ ಪದ್ಮಾಲಯ ಸ್ಟುಡಿಯೋದಲ್ಲಿ ನಟ ಕೃಷ್ಣ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಯಿತು. ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.