Advertisements

ಹಿಂದಿ ಚಿತ್ರರಂಗಕ್ಕೆ ನನ್ನ ತಡ್ಕೋಳೋಕೆ ಆಗಲ್ಲ:ಮಹೇಶ್ ಬಾಬು ಖಡಕ್ ಉತ್ತರ

ಪ್ಯಾನ್ ಇಂಡಿಯಾ ಸಿನಿಮಾಗಳೇ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸೌಂಡ್ ಮಾಡುತ್ತಿದೆ. ಬಾಲಿವುಡ್‌ನಲ್ಲಿಗ ದಕ್ಷಿಣದ ಸಿನಿಮಾಗಳೇ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುತ್ತಿದೆ. ಅದಕ್ಕೆ `ಪುಷ್ಪ’, `ಆರ್‌ಆರ್‌ಆರ್’, `ಕೆಜಿಎಫ್ 2′ ಚಿತ್ರಗಳೇ ಸಾಕ್ಷಿ. ಹಾಗಾಗಿ ಬಾಲಿವುಡ್ ಮಂದಿ ದಕ್ಷಿಣದ ಸ್ಟಾರ್‌ಗಳ ಮೇಲೆ ಕಣ್ಣೀಟ್ಟಿದ್ದಾರೆ. ಇದೀಗ ಈ ವಿಚಾರವಾಗಿ ಬಿಟೌನ್ ಎಂಟ್ರಿ ಕುರಿತು ಪ್ರಶ್ನಿಸಿದಕ್ಕೆ ಟಾಲಿವುಡ್ ಮಹೇಶ್ ಬಾಬು ಖಡಕ್ ಆನ್ಸರ್ ಕೊಟ್ಟಿದ್ದಾರೆ.

Advertisements

`ಸರ್ಕಾರಿ ವಾರಿ ಪಾಟ’ ಚಿತ್ರ ಮೇ 12ಕ್ಕೆ ರಿಲೀಸ್ ಸಜ್ಜಾಗಿದೆ. ಚಿತ್ರದ ಟ್ರೇಲರ್‌ಗೆ ಮಹೇಶ್ ಬಾಬು ಆಕ್ಟಿಂಗ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಲಾಂಚ್ ಈವೆಂಟ್‌ನಲ್ಲಿ ಮಹೇಶ್ ಬಾಬು ಭಾಗಿ ಆಗಿದ್ದರು. ಈ ವೇಳೆ ಬಾಲಿವುಡ್‌ಗೆ ಮಹೇಶ್ ಬಾಬು ಎಂಟ್ರಿಯ ಕುರಿತು ಪ್ರಶ್ನಿಸಲಾಯಿತು. ಆಗ ಈ ಪ್ರಶ್ನೆಗೆ ನಟ ಮಹೇಶ್ ಬಾಬು ಖಡಕ್ ಆಗಿ ಉತ್ತರಿಸಿದ್ದಾರೆ.

Advertisements

ನನಗೆ ಬಾಲಿವುಡ್ ಸಾಕಷ್ಟು ಆಫರ್‌ಗಳು ಬಂದಿವೆ ಆದರೆ ಬಾಲಿವುಡ್‌ಗೆ ನನ್ನ ತಡ್ಕೋಳಕೆ ಆಗಲ್ಲ. ಹಾಗಾಗಿ ನಾನು ಚಿತ್ರ ಮಾಡಲಿಲ್ಲ ಅಂತಾ ಉತ್ತರಿಸಿದ್ದಾರೆ. ಇನ್ನು ಈ ವಿಚಾರವಾಗಿ ನನಗೆ ನನ್ನ ಸಮಯ ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ ಅಂದಿದ್ದಾರೆ. ನನಗೆ ಟಾಲಿವುಡ್‌ನಲ್ಲಿ ಸಖತ್ ಸ್ಟಾರ್‌ಡಂ ಇದೆ. ನನ್ನ ಚಿತ್ರಗಳನ್ನು ತೆಲುಗಿನಲ್ಲಿಯೇ ಎತ್ತಿ ಮೆರೆಸುತ್ತಾರೆ.ಇಲ್ಲಿಯ ಅಭಿಮಾನಿಗಳ ಪ್ರೀತಿಗೆ‌ ಯಾವಾಗಲೂ ನಾನು ಋಣಿ. ತೆಲುಗು ಬಿಟ್ಟು ಬೇರೆ ಇಂಡಸ್ಟ್ರಿಗೆ ನಾನು ಹೋಗಬೇಕು ಎಂಬ ಯೋಚನೆ ನನಗಿಲ್ಲ. ಸಿನಿಮಾ ಮಾಡುತ್ತಾ ಬೆಳೆಯುವ ಆಲೋಚನೆ ನನ್ನದು ನನ್ನ ಕನಸು ನನಸಾಗುತ್ತಿದೆ ಎಂದು ಈ ಕುರಿತು ಮನಬಿಚ್ಚಿ ಮಾತಾನಾಡಿದ್ದಾರೆ. ಇದನ್ನೂ ಓದಿ: ಪಿಂಕ್ ನೋಟಿನ ಹಿಂದೆ ಬಿದ್ದ ಭಾವನಾ : ದ್ವಿಪಾತ್ರದಲ್ಲಿ ಜಾಕಿ ಬೆಡಗಿ

Advertisements

ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ `ಸರ್ಕಾರಿ ವಾರಿ ಪಾಟ’ ಚಿತ್ರ ರಿಲೀಸ್‌ಗೆ ರೆಡಿಯಿದೆ. ಪೊಸ್ಟರ್ ಲುಕ್ ಮತ್ತು ಟ್ರೇಲರ್‌ನಿಂದ ಸೌಂಡ್ ಮಾಡುತ್ತಿರೋ ಮಹೇಶ್ ಬಾಬು ಸಿನಿಮಾ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ.

Advertisements
Exit mobile version