Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಳ್ಳಿ ಪರದೆಯಲ್ಲಿ ಮಹಾ ಶಿವಾರಾಧನೆ; ಶಿವರಾತ್ರಿ ದಿನ ನೀವು ನೋಡಲೇಬೇಕಾದ ಸಿನಿಮಾಗಳಿವು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಬೆಳ್ಳಿ ಪರದೆಯಲ್ಲಿ ಮಹಾ ಶಿವಾರಾಧನೆ; ಶಿವರಾತ್ರಿ ದಿನ ನೀವು ನೋಡಲೇಬೇಕಾದ ಸಿನಿಮಾಗಳಿವು

Cinema

ಬೆಳ್ಳಿ ಪರದೆಯಲ್ಲಿ ಮಹಾ ಶಿವಾರಾಧನೆ; ಶಿವರಾತ್ರಿ ದಿನ ನೀವು ನೋಡಲೇಬೇಕಾದ ಸಿನಿಮಾಗಳಿವು

Public TV
Last updated: March 8, 2024 9:29 am
Public TV
Share
3 Min Read
mahashivaratri kannada movies
SHARE

ಇಂದು ಮಹಾ ಶಿವರಾತ್ರಿ (Mahashivratri). ಮಹಾದೇವನ ಆರಾಧಿಸುವ ಪುಣ್ಯದಿನ. ಶಿವನೊಲಿದರೆ ಭಯವಿಲ್ಲ ಎನ್ನುವಂತೆ ಅವನನ್ನು ಒಲಿಸಿಕೊಳ್ಳಲು ಸ್ಯಾಂಡಲ್‌ವುಡ್ ಕೂಡ ಹಿಂದೆ ಬಿದ್ದಿಲ್ಲ. ಪರಶಿವನ ಮಹಿಮೆಯನ್ನು ಸಾರುವಂತಹ ಅನೇಕ ಚಿತ್ರಗಳನ್ನು ಮಾಡುವ ಮೂಲಕ ತೆರೆಯ ಮೇಲೂ ಶಿವನ ಅವತಾರಗಳನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಪೌರಾಣಿಕ ಚಿತ್ರಗಳಲ್ಲಿ ಶಿವನಿಲ್ಲದೇ ಚಿತ್ರಗಳೇ ಇಲ್ಲ ಎನ್ನುವಷ್ಟು ಶಿವ ದರ್ಶನ ಮಾಡಿದ್ದಾನೆ. ಕೆಲ ನಟರಂತೂ ಈಗಲೂ ಶಿವನಾಗಿಯೇ ಅಭಿಮಾನಿಗಳು ಹೃದಯದಲ್ಲಿ ಉಳಿದಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಹಲವು ಭಾಷೆಗಳಲ್ಲಿ ಮತ್ತು ಕಿರುತೆರೆಗಳಲ್ಲೂ ಶಿವನಾಮ ಸ್ಮರಣೆ ಮಾಡುವಂತಹ ಅನೇಕ ಚಿತ್ರಗಳು ಮತ್ತು ಧಾರಾವಾಹಿಗಳು ತೆರೆ ಕಂಡಿವೆ. ಮಹಾ ಶಿವರಾತ್ರಿ ದಿನದಂದು ಆ ಚಿತ್ರಗಳ, ಪಾತ್ರಗಳ ಒಂದು ನೋಟ ಹೀಗಿದೆ. ಇದನ್ನೂ ಓದಿ: ಶಿವರಾತ್ರಿ ಸ್ಪೆಷಲ್ ತಂಬಿಟ್ಟು ರೆಸಿಪಿ

Untitled design

ಪೌರಾಣಿಕ ಸಿನಿಮಾಗಳನ್ನು ಮಾಡುವಾಗ, ಅದರಲ್ಲೂ ವಿಶೇಷವಾಗಿ ಪುರಾಣ ಪ್ರಸಂಗಗಳನ್ನು ಆಧರಿಸಿ ಚಿತ್ರಗಳನ್ನು ಮಾಡುವಾಗ ಅಲ್ಲಿ ಶಿವನಿರಲೇಬೇಕು. ಹಾಗಾಗಿ ಕೈಲಾಸ ವಾಸ ಶಿವನಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಬೇಡರ ಕಣ್ಣಪ್ಪ ಸಿನಿಮಾದಿಂದ ಶಿವನಿಗೆ ಮತ್ತಷ್ಟು ಬೇಡಿಕೆಯೂ ಹೆಚ್ಚಾಗಿದೆ.

ಭೂ ಕೈಲಾಸ, ಭಕ್ತ ಸಿರಿಯಾಳ (Bhakta Siriyala), ಗಿರಿಜಾ ಕಲ್ಯಾಣ, ಗಂಗೆ ಗೌರಿ, ಭಕ್ತ ಮಾರ್ಕಂಡೇಯ, ಸ್ವರ್ಣಗೌರಿ, ಶಿವ ಕೊಟ್ಟ ಸೌಭಾಗ್ಯ, ಭಕ್ತ ಮಲ್ಲಿಕಾರ್ಜುನ, ಶ್ರೀ ಮಂಜುನಾಥ, ಶಿವ ಮೆಚ್ಚಿದ ಕಣ್ಣಪ್ಪ, ಪಾರ್ವತಿ ಕಲ್ಯಾಣ ಹೀಗೆ ಶಿವನ ಕುರಿತಾಗಿ ಸಾಮಾಜಿಕ, ಭಕ್ತಿ ಪ್ರಧಾನ ಮತ್ತು ಪೌರಾಣಿಕ ಚಿತ್ರಗಳು ತೆರೆ ಕಂಡಿವೆ. ಪಿ.ಆರ್. ಕೌಂಡಿನ್ಯ ನಿರ್ದೇಶನದಲ್ಲಿ ಮೂಡಿ ಬಂದ ಶಿವರಾತ್ರಿ ಮಹಾತ್ಮೆಯಂತೂ ಶಿವನ ನಾನಾ ಅವತಾರಗಳನ್ನು ತೋರಿಸುವ ಮೂಲಕ ಜನಪ್ರಿಯತೆ ಪಡೆಯಿತು. ಇದನ್ನೂ ಓದಿ: ಮಹಾಶಿವರಾತ್ರಿಯಲ್ಲಿ ಜಾಗರಣೆಗಿರುವ ಮಹತ್ವವೇನು?

bedara kannappa 1

ಬೇಡರ ಕಣ್ಣಪ್ಪ (Bedara Kannappa)
ಶಿವರಾತ್ರಿ ಹಬ್ಬ ಅಂದಾಕ್ಷಣ ಥಟ್ಟನೆ ನೆನಪಾಗುವ ಗೀತೆ ‘ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವ’ ಈ ಗೀತೆಯು ಶಿವಭಕ್ತರ ಪಾಲಿನ ಅತ್ಯಂತ ಜನಪ್ರಿಯ ಸಿನಿಮಾ ಬೇಡರ ಕಣ್ಣಪ್ಪ ಚಿತ್ರದ್ದು. 1954ರಲ್ಲಿ ತೆರೆಕಂಡ ಬೇಡರ ಕಣ್ಣಪ್ಪ ಚಿತ್ರದಲ್ಲಿ ಬೇಡ ಭಕ್ತನೊಬ್ಬ ತನ್ನ ಆರಾಧ್ಯ ದೈವ ಶಿವನಿಗೆ ತೊಂದರೆ ಆಗಿದೆಯಂತೆ ತನ್ನೆರಡು ಕಣ್ಣುಗಳನ್ನು ಅರ್ಪಿಸುವ ಕಥೆಯಿದೆ. ಬೇಡರ ಕಣ್ಣಪ್ಪನಾಗಿ ಡಾ.ರಾಜ್ ಕುಮಾರ್ ಅಮೋಘವಾಗಿ ನಟಿಸಿದ್ದಾರೆ.

ಭಕ್ತಿ ಸಿರಿಯಾಳ
ಹರಿಕಥೆ, ತತ್ವಪದಗಳನ್ನೇ ಆಧಾರವಾಗಿಟ್ಟುಕೊಂಡು ಭಕ್ತ ಸಿರಿಯಾಳ ಕಥೆ ಹೇಳಿದ್ದಾರೆ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. 1980ರಲ್ಲಿ ಬಿಡುಗಡೆಯಾದ ಭಕ್ತ ಪ್ರಧಾನ ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದೆ. ಲೋಕೇಶ್ ಮತ್ತು ಆರತಿ ಅಭಿನಯವನ್ನು ನೋಡಲೇಬೇಕು. ಭಕ್ತಿ ಭಾವದಿಂದ ಈ ಜೋಡಿ ನಟಿಸಿದೆ. ಟಿ.ಟಿ. ಲಿಂಗಪ್ಪ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಸೂಪರ್. ಇದನ್ನೂ ಓದಿ: Shivaratri Speical – ಶಿವರಾತ್ರಿ ದಿನ ಕೇದಗೆ ಹೂ ಬಳಸಲ್ಲ ಯಾಕೆ? – ಏನಿದು ಪುರಾಣ ಕಥೆ?

maha shivratri 2018 puja ti 644x362 1

ಭಕ್ತ ಮಾರ್ಕಂಡೇಯ
ಮಕ್ಕಳು ಮತ್ತು ಹಿರಿಯರಿಗೆ ಏಕಕಾಲಕ್ಕೆ ಇಷ್ಟವಾಗುವ ಸಿನಿಮಾ ಭಕ್ತ ಮಾರ್ಕಂಡೇಯ. ಮುಗ್ದ ಮಗುವೊಂದು ಸಾವನ್ನು ಜಯಿಸುವ ರೋಚಕ ಮತ್ತು ಭಕ್ತಿ ತುಂಬಿಕ ಕಥೆ ಈ ಸಿನಿಮಾದಲ್ಲಿದೆ. ಮಾರ್ಕಂಡಯ್ಯ ಸಾವನ್ನು ಹೇಗೆ ಗೆಲ್ಲುತ್ತಾನೆ ಎನ್ನುವುದನ್ನು ನೀವು ಸಿನಿಮಾದಲ್ಲಿಯೇ ನೊಡಬೇಕು. ಅದರಲ್ಲೂ ಅದ್ಭುತವಾದ ಭಕ್ತಿ ಗೀತೆಗಳು ಈ ಚಿತ್ರದಲ್ಲಿವೆ. ಇದು 1956ರಲ್ಲಿ ನಿರ್ಮಾಣಗೊಂಡ ಚಿತ್ರ.

ಶ್ರೀಮಂಜುನಾಥ (Sri Manjunatha)
ಅರ್ಜುನ್ ಸರ್ಜಾ ಮತ್ತು ಹಂಸಲೇಖ ಕಾಂಬಿನೇಷನ್‌ನಲ್ಲಿ ಸಕ್ಸಸ್ ಆದ ಚಿತ್ರ ಶ್ರೀ ಮಂಜುನಾಥ್. ಈ ಸಿನಿಮಾದ ಹೈಲೈಟ್ ಅಂದರೆ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ. ಶಿವನ ಲೀಲೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನೀವು ಈ ಚಿತ್ರವನ್ನು ನೋಡಲೇಬೇಕು. ಅದರಲ್ಲೂ ಸೌಂದರ್ಯ ಮತ್ತು ಅರ್ಜುನ್ ಸರ್ಜಾ ಜೋಡಿಯು ತೆರೆಯ ಮೇಲೆ ಶಿವ ದರ್ಶನ ಮಾಡಿಸುತ್ತದೆ. ಅಂಬರೀಶ್, ಸುಮಲತಾ ಸೇರಿದಂತೆ ಹಲವಾರು ಹೆಸರಾಂತ ನಟರೇ ಈ ಸಿನಿಮಾದಲ್ಲಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ಹಬ್ಬ ಸೇರಿ 3 ದಿನ ರಜೆ- ಊರಿಗೆ ಹೊರಟ ಜನ, ಭಾರೀ ಟ್ರಾಫಿಕ್‌

Maha Shivaratri

ಇವರು ಶಿವನ ಪಾತ್ರಧಾರಿಗಳು:
1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ರಾಮಚಂದ್ರ ಶಾಸ್ತ್ರಿಗಳು ಶಿವನ ಪಾತ್ರ ಮಾಡಿದ್ದರು. ನಂತರ 1967ರಲ್ಲಿ ತೆರೆಕಂಡ ಪಾರ್ವತಿ ಕಲ್ಯಾಣ ಚಿತ್ರದಲ್ಲಿ ರಾಜ್ ಕುಮಾರ್ ಶಿವನಾಗಿ ಭಕ್ತರನ್ನು ಆವರಿಸಿಕೊಂಡ ರೀತಿ ಬಣ್ಣಿಸಲೆಸದಳ.

1973ರಲ್ಲಿ ಬಿಡುಗಡೆಯಾದ ದೂರದ ಬೆಟ್ಟ ಚಿತ್ರದಲ್ಲಿ ಉದಯ ಶಂಕರ್, 1981ರಲ್ಲಿ ರಿಲೀಸ್ ಆದ ಗುರು ಶಿಷ್ಯರು ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ, 1983ರಲ್ಲಿ ತೆರೆಗೆ ಬಂದ ಕ್ರಾಂತಿಯೋಗಿ ಬಸವಣ್ಣ ಚಿತ್ರದಲ್ಲಿ ಅಶೋಕ್, 1988ರಲ್ಲಿ ಬಿಡುಗಡೆಯಾದ ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ ರಾಜಕುಮಾರ್, ಶಬರಿ ಮಲೆ ಸ್ವಾಮಿ ಅಯ್ಯಪ್ಪ, ಕೊಲ್ಲೂರು ಮೂಕಾಂಬಿಕಾ, ಮಹಾಸಾಧ್ವಿ ಮಲ್ಲಮ್ಮ ಹಾಗೂ ಬಾಲ ಶಿವ ಚಿತ್ರದಲ್ಲಿ ಶ್ರೀಧರ್, ಪ್ರಚಂಡ ಕುಳ್ಳ ಚಿತ್ರದಲ್ಲಿ ವಿಷ್ಣುವರ್ಧನ್, ಶ್ರೀಮಂಜುನಾಥ ಸಿನಿಮಾದಲ್ಲಿ ತೆಲುಗು ನಟ ಚಿರಂಜೀವಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ಶಿವನೇ ಆಗಿದ್ದಾರೆ.

TAGGED:bedara kannappaBhakta MarkandeyaLord ShivaMahashivratri 2024Sri Manjunatha
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

adugodi women death
Bengaluru City

ಬೆಂಗಳೂರಲ್ಲಿ ಯುವತಿ ಅನುಮಾನಾಸ್ಪದ ಸಾವು – ಬೆತ್ತಲೆ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

Public TV
By Public TV
3 hours ago
RCB 1
Cricket

ಬೆಂಗಳೂರು ಹೊಡೆತಕ್ಕೆ ಮಕಾಡೆ ಮಲಗಿದ ಡೆಲ್ಲಿ – ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ 

Public TV
By Public TV
4 hours ago
Panchamasali Peetha 1
Davanagere

ಹರಿಹರ ಪಂಚಮಸಾಲಿ ಗುರುಪೀಠದಲ್ಲಿ ಭಾರಿ ಹೈಡ್ರಾಮಾ – ಚಪ್ಪಲಿ, ಬಾಟೆಲ್ ತೂರಾಟ, ಕರೆಂಟ್ ಕಟ್

Public TV
By Public TV
4 hours ago
ramanath rai team mangaluru
Dakshina Kannada

ಬ್ರಹ್ಮರಕೊಟ್ಲು ಟೋಲ್‌ಗೇಟ್‌ ಬಂದ್‌: ನಾಳೆ ಬೃಹತ್‌ ಜನಾಂದೋಲನ ನಡಿಗೆ

Public TV
By Public TV
6 hours ago
pm modi 5
Latest

ಭಯದಲ್ಲಿ ಬದುಕಿದ್ದು ಸಾಕು.. ನಮಗಿನ್ನು ನಂಬಿಕೆ ಬೇಕು: ಬಂಗಾಳ ಜನತೆಗೆ ಮೋದಿ ಪತ್ರ

Public TV
By Public TV
7 hours ago
4 Of Mumbai Family Die Of Suspected Food Poisoning After Eating Biryani Watermelon
Crime

ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?