ಮುಂಬೈ: ತನ್ನೊಂದಿಗೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದ 37 ವಯಸ್ಸಿನ ಮಹಿಳೆಯನ್ನು ಕೊಂದು ಚಾಪೆಯಲ್ಲಿ ಸುತ್ತಿಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ಸಂಗಾತಿ ಮೇಘಾ ಎಂಬಾಕೆಯನ್ನು ಹಾರ್ದಿಕ್ ಶಾ ಕೊಲೆ ಮಾಡಿದ್ದ. ನಂತರ ಮಹಾರಾಷ್ಟ್ರದ (Maharashtra) ಪಾಲ್ಘರ್ ಜಿಲ್ಲೆಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ. ಆದರೆ ರೈಲ್ವೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೇರಳ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಬಂಧನ
ಹಾರ್ದಿಕ್ ಶಾ ನಿರುದ್ಯೋಗಿಯಾಗಿದ್ದ. ನರ್ಸ್ ಆಗಿದ್ದ ಮೇಘಾ ಅವರೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ. ಇಬ್ಬರೂ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೇಘಾ ಅವರನ್ನು ಕೊಂದ ನಂತರ ಹಾರ್ದಿಕ್ ಮನೆಯ ಕೆಲ ವಸ್ತುಗಳನ್ನು ಮಾರಿ ಹಣದೊಂದಿಗೆ ಪರಾರಿಯಾಗಿದ್ದ. ಈತನ ಬಗ್ಗೆ ಮಾಹಿತಿ ಪಡೆದು ಮಧ್ಯಪ್ರದೇಶದ ನಗ್ಡಾದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷಗಳಿಂದ ಸಂಬಂಧದಲ್ಲಿದ್ದ ಹಾರ್ದಿಕ್ ಮತ್ತು ಮೇಘಾ ಕಳೆದ ಆರು ತಿಂಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದ ಬಗ್ಗೆ ಅವರ ನೆರೆಹೊರೆಯವರು ದೂರು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾರು ಬಾಂಬ್ ಸ್ಫೋಟ ಪ್ರಕರಣ – ಕರ್ನಾಟಕ, ತಮಿಳುನಾಡು, ಕೇರಳದ 60 ಸ್ಥಳಗಳಲ್ಲಿ NIA ದಾಳಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k