ನವದೆಹಲಿ: ಅಚ್ಚರಿ ಮೇಲೆ ಅಚ್ಚರಿ ನಿರ್ಧಾರ ಕೈಗೊಳ್ಳುತ್ತಿರುವ ಬಿಜೆಪಿ ಹೈಕಮಾಂಡ್ ಎರಡನೇ ಅಚ್ಚರಿ ನೀಡಿದೆ. ಮಾಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಮೈತ್ರಿ ಸರ್ಕಾರದಲ್ಲಿ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಲಿದ್ದಾರೆ.
ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಲಿದ್ದಾರೆ. ಶಿವಸೇನೆ- ಬಿಜೆಪಿ ಸರ್ಕಾರದ ಭಾಗವಾಗಿ ನಾನು ಇರುವುದಿಲ್ಲ ಎಂದು ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಫಡ್ನವೀಸ್ ತಿಳಿಸಿದ್ದರು. ಆದರೆ ಸಂಜೆ 6:30ರ ವೇಳೆ ದೇವೇಂದ್ರ ಫಡ್ನವೀಸ್ ಡಿಸಿಎಂ ಪಟ್ಟವನ್ನು ಅಲಂಕರಿಸಬೇಕೆಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮನವಿ ಮಾಡಿದ್ದಾರೆ.
Advertisement
#WATCH | "…BJP's central leadership has decided that Devendra Fadnavis should become a part of the Govt. So, made a personal request to him and Central leadership has said that Devendra Fadnvais should take charge as Deputy CM of Maharashtra..," BJP national president JP Nadda pic.twitter.com/Gxmt4zurym
— ANI (@ANI) June 30, 2022
Advertisement
ದೇವೇಂದ್ರ ಫಡ್ನವೀಸ್ ಸರ್ಕಾರದ ಭಾಗವಾಗಬೇಕು ಎಂದು ಬಿಜೆಪಿಯ ಕೇಂದ್ರ ನಾಯಕತ್ವ ನಿರ್ಧರಿಸಿದೆ. ಹೀಗಾಗಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅಧಿಕಾರ ವಹಿಸಿಕೊಳ್ಳಬೇಕು ಎಂದು ಕೇಂದ್ರ ನಾಯಕತ್ವ ಹೇಳಿದೆ ಎಂದು ತಿಳಿಸಿದ್ದಾರೆ.
Advertisement
ಇಂದು ಸಂಜೆಯವರೆಗೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವರದಿಯಾಗುತ್ತಿತ್ತು. ಆದರೆ ಯಾರೂ ಊಹಿಸಿಕೊಳ್ಳದ ನಿರ್ಧಾರ ಕೈಗೊಳ್ಳುವ ಬಿಜೆಪಿ ಹೈಕಮಾಂಡ್ ಏಕನಾಥ್ ಶಿಂಧೆ ಅವರಿಗೆಎ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಮೂಲಕ ಅಚ್ಚರಿ ನೀಡಿತ್ತು.
Advertisement
Live Tv