ಮುಂಬೈ: ಉಮೇಶ್ ಕೊಲ್ಹೆಯ ಹತ್ಯೆಯನ್ನು ವಿರೋಧಿಸಿ ಅವರ ಅಮರಾವತಿ ನಿವಾಸದ ಮುಂದೆ ಸಂಸದೆ ನವನೀತ್ ರಾಣಾ ಹಾಗೂ ಶಾಸಕ ರವಿ ರಾಣಾ ಹನುಮಾನ್ ಚಾಲೀಸಾವನ್ನು ಪಠಿಸಿದರು.
ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಉಮೇಶ್ ಕೊಲ್ಹೆ ಅವರನ್ನು ಕೆಲ ದುಷ್ಕರ್ಮಿಗಳು ಜೂ. 21ರಂದು ಕೊಲೆ ಮಾಡಿದ್ದರು. ಇದನ್ನು ವಿರೋಧಿಸಿ ರಾಣಾ ದಂಪತಿ ಹನುಮಾನ್ ಚಾಲೀಸಾವನ್ನು ಪಠಿಸಿದ್ದಾರೆ.
ಈ ಬಗ್ಗೆ ಅಮರಾವತಿಯ ಸಂಸದೆ ನವನೀತ್ ರಾಣಾ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲ್ಹೆಯ ಹಂತಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಇದರಿಂದ ದೇಶದಲ್ಲಿ ಇಂತಹ ಅಪರಾಧವನ್ನು ಪುನರಾವರ್ತಿಸಲು ಯಾರೂ ಧೈರ್ಯ ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಪತಿ ಕುಡಿದು ಗಲಾಟೆ ಮಾಡುತ್ತಾನೆ ಅಂತಾ ಪ್ರಿಯಕರನಿಂದ ಕೊಲೆ ಮಾಡಿಸಿದ ಪತ್ನಿ
ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನ ಮಾಡಿದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಮಾಡಲಾಗಿದ್ದ ಸಾಮಾಜಿಕ ಮಾಧ್ಯಮದ ಪೋಸ್ಟ್ ಒಂದನ್ನು ಉಮೇಶ್ ಕೊಲ್ಹೆ ಬೆಂಬಲಿಸಿದ್ದರು. ಈ ಹಿನ್ನೆಲೆ ಜೂನ್ 21 ರಂದು ರಾತ್ರಿ 10 ಗಂಟೆಯ ವೇಳೆ ಮೂವರು ದುಷ್ಕರ್ಮಿಗಳ ತಂಡ ಉಮೇಶ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ಹಲ್ಲೆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಕೊಡಗು ಜಿಲ್ಲೆಗೆ ಇಂದಿನಿಂದ ಈ ವಾಹನಗಳಿಗಿಲ್ಲ ಪ್ರವೇಶ – ಜಿಲ್ಲಾಧಿಕಾರಿ ಆದೇಶ