ಗುವಾಹಟಿ: ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮ ಮುಂದುವರಿದಿದ್ದು, ಮಹಾರಾಷ್ಟ್ರ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಾಮಂತ್ ಗುವಾಹಟಿಯಲ್ಲಿ ಏಕನಾಥ್ ಶಿಂಧೆ ಬಣವನ್ನು ಸೇರಿದರು.
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಣಕ್ಕೊಂದು ಬದಲಾವಣೆ ಆಗುತ್ತಿದ್ದು, ಇದೀಗ ಸಚಿವ ಉದಯ್ ಸಾಮಂತ್ ಅವರು ಶಿಂಧೆ ಪಾಳಯಕ್ಕೆ ಸೇರ್ಪಡೆಯಾದ 8ನೇ ಸಚಿವರಾಗಿದ್ದಾರೆ. ಉದಯ್ ಸಾಮಂತ್ ಅವರು ಸೂರತ್‍ನಿಂದ ವಿಮಾನದ ಮೂಲಕ ಗುವಾಹಟಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಇವರೊಂದಿಗೆ ರತ್ನಗಿರಿ ಜಿಲ್ಲೆಯ ಮತ್ತೊಬ್ಬ ಶಾಸಕ ಗುವಾಹಟಿಗೆ ತೆರಳಿದ್ದಾರೆ.
Advertisement
Correction | Uday Samant*, Maharashtra Minister of Higher & Technical Education joins Eknath Shinde faction at Guwahati. He is the 8th minister to join the Shinde camp: Sources pic.twitter.com/cFFt43yEFk
— ANI (@ANI) June 26, 2022
ಈಗಾಗಲೇ ಏಕನಾಥ್ ಶಿಂಧೆ ನೇತೃತ್ವದ 15 ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರ ಸರ್ಕಾರವು Y+ ಭದ್ರತೆಯನ್ನು ನೀಡಿದೆ. ಶನಿವಾರ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಡಿಜಿಪಿ ರಜನೀಶ್ ಸೇಠ್ ಮತ್ತು ಇತರರಿಗೆ ಬರೆದ ಪತ್ರದಲ್ಲಿ ಬಂಡಾಯ ಶಾಸಕರ ಕುಟುಂಬ ಸದಸ್ಯರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಆರೋಪಿಸಿದ್ದರು. ಇದಾದ ಒಂದು ದಿನದ ಬಳಿಕ ಕೇಂದ್ರವು ಸಶಸ್ತ್ರ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯ Y+ ವರ್ಗದ ಭದ್ರತೆಯನ್ನು ಒದಗಿಸಿದೆ. ಇದನ್ನೂ ಓದಿ: ಎಷ್ಟು ದಿನ ಗುವಾಹಟಿಯಲ್ಲೇ ಅಡಗಿರುತ್ತೀರಿ?: ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಟಾಂಗ್
Advertisement
Advertisement
ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದಾದ ಬಳಿಕ ರಾಜ್ಯಪಾಲರು ರಾಜಭವನಕ್ಕೆ ಮರಳಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಕೊಳಕು ರಾಜಕೀಯವನ್ನು ಜನರು ಸೋಲಿಸಿದ್ದಾರೆ: ಕೇಜ್ರಿವಾಲ್