ಮುಂಬೈ: ಮಹಾರಾಷ್ಟ್ರದ ಕೃಷಿ ಸಚಿವ ಅಬ್ದುಲ್ ಸತ್ತಾರ್ (Maharashtra Agriculture Minister Abdul Sattar) ಅವರು ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ (Radhabinod Sharma) ಅವರಿಗೆ ಮದ್ಯಪಾನ ಮಾಡುತ್ತೀರಾ ಎಂದು ಕೇಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
अतिवृष्टी पाहणी दौरा कि मद्यसृष्टी पाहणी दौरा?
गम का दौर हो या हो खुशी, समा बाँधती है शराब
किसान मरे या करे खुदकुशी, समा बाँधती है शराब
एक मशवरा है जनाब के थोड़ी-थोड़ी पिया करो
हुई महँगी बहत ही शराब, के थोड़ी-थोड़ी पिया करो ???? pic.twitter.com/UDZsfypmAO
— Sachin Sawant सचिन सावंत (@sachin_inc) October 27, 2022
Advertisement
ಮಧ್ಯ ಮಹಾರಾಷ್ಟ್ರದ (Maharashtra) ಬೀಡ್ ಜಿಲ್ಲೆಯ (Beed district) ಪ್ರವಾಸದಲ್ಲಿರುವಾಗ ಅಬ್ದುಲ್ ಸತ್ತಾರ್ ಅವರೊಂದಿಗೆ ಅಕ್ಟೋಬರ್ 21 ರಂದು ಜಿಲ್ಲೆಯ ಗೆವ್ರಾಯಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಲು ರಾಧಾಬಿನೋದ್ ಶರ್ಮಾ ಬಂದಿದ್ದರು. ಈ ವೇಳೆ ಚಹಾ ನೀಡಲು ಬಂದಾಗ ನಿರಾಕರಿಸಿದ್ದಕ್ಕೆ ರಾಧಾಬಿನೋದ್ ಶರ್ಮಾ ಮದ್ಯ ಸೇವಿಸುತ್ತೀರಾ ಎಂದು ಅಬ್ದುಲ್ ಸತ್ತಾರ್ ಅಣಕಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಒಂದು ದೇಶ, ಒಂದು ಸಮವಸ್ತ್ರ – ಕಲ್ಪನೆ ಪ್ರಸ್ತಾಪಿಸಿದ ಮೋದಿ
Advertisement
Advertisement
ಇದೀಗ ಈ ವೀಡಿಯೋ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಅಬ್ದುಲ್ ಸತ್ತಾರ್, ರಾಧಾಬಿನೋದ್ ಶರ್ಮಾ ಮತ್ತು ಇನ್ನೂ ಕೆಲವರು ಕುಳಿತುರುವುದನ್ನು ಕಾಣಬಹುದಾಗಿದೆ. ಸದ್ಯ ಈ ವೀಡಿಯೋ ಕುರಿತಂತೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (Maharashtra Congress general secretary) ಸಚಿನ್ ಸಾವಂತ್ (Sachin Sawant), ಸತ್ತಾರ್ ಅವರದ್ದು ಮಳೆ ಹಾನಿ ಪರಿಶೀಲನೆ ಪ್ರವಾಸವೋ ಅಥವಾ ಮದ್ಯ ಸೇವಿಸಲು ಹೋಗಿರುವ ಪ್ರವಾಸವೋ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ