ಮುಂಬೈ: ಮಹಾರಾಷ್ಟ್ರ ವಿದ್ಯುತ್ ಸರಬರಾಜು ನಿಗಮವು ತರಕಾರಿ ವ್ಯಾಪಾರ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರಿಗೆ 8.64 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ್ದು, ಭಾರೀ ಮೊತ್ತದ ಮೊತ್ತವನ್ನು ಕಂಡು ಹೆದರಿದ ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಔರಂಗಬಾದ್ ಪ್ರದೇಶದಲ್ಲಿ ನಡೆದಿದೆ.
40 ವರ್ಷ ವಯಸ್ಸಿನ ಜಗನ್ನಾಥ್ ಆತ್ಮಹತ್ಯೆಗೆ ಶರಣಾಗಿರುವ ವ್ಯಾಪಾರಿ. ಮಹಾರಾಷ್ಟ್ರ ರಾಜ್ಯ ವಿದ್ಯುತ್ ಸರಬರಾಜು ನಿಗಮವು (ಎಂಎಸ್‍ಇಡಿಸಿಎಲ್) ಏಪ್ರಿಲ್ ತಿಂಗಳ ಅಂತ್ಯಕ್ಕೆ ಭಾರೀ ಮೊತ್ತದ ವಿದ್ಯುತ್ ಬಿಲ್ ನೀಡಿತ್ತು. ಇದನ್ನು ಕಂಡ ಜಗನ್ನಾಥ್ ಗುರುವಾರ ಬೆಳಗ್ಗೆ ಔರಂಗಬಾದ್ ಪ್ರದೇಶದ ಭರತ್ ನಗರದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ಸದ್ಯ ಪ್ರಕರಣದ ಕುರಿತು ತನಿಖೆ ನಡೆಸಿರುವ ಎಂಎಸ್‍ಇಡಿಸಿಎಲ್ ಭಾರೀ ಮೊತ್ತದ ಬಿಲ್ ನೀಡಿ ತಪ್ಪು ಮಾಡಿದ್ದ ತನ್ನ ಅಧಿಕಾರಿಯನ್ನು ಅಮಾನತು ಮಾಡಿದೆ. ಅಂದಹಾಗೇ ಜಗನ್ನಾಥ್ ಅವರಿಗೆ ನೀಡಿದ ಬಿಲ್ ನಲ್ಲಿ ಎರಡು ಕೊಠಡಿಯ ಶೆಡ್ ನಲ್ಲಿ 55,519 ಯೂನಿಟ್ಸ್ ವಿದ್ಯುತ್ ಬಳಕೆ ಮಾಡಲಾಗಿದ್ದು, 8,64,781 ರೂ ಪಾವತಿ ಮಾಡಬೇಕು ಎಂದು ನಮೂದಿಸಿಲಾಗಿತ್ತು. ಈ ಶೆಡ್ ನಲ್ಲಿ ಜಗನ್ನನಾಥ್ ಕಳೆದ 20 ವರ್ಷಗಳಿಂದ ತರಕಾರಿ ವ್ಯಾಪಾರ ನಡೆಸುತ್ತಿದ್ದರು.
Advertisement
ಮೀಟರ್ ರೀಡಿಂಗ್ ವೇಳೆ ಅಧಿಕಾರಿ ಬಳಕೆ ಮಾಡಿದ್ದ 6,117.8 ಕಿಲೋವ್ಯಾಟ್ ಬದಲಾಗಿ 61,178 ಕಿಲೋ ವ್ಯಾಟ್ ಎಂದು ನಮೂದಿಸಿದ್ದು ಈ ಅವಘಡಕ್ಕೆ ಕಾರಣವಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ವಿದ್ಯುತ್ ನಿಗಮ ತಿಳಿಸಿದೆ. ಅಲ್ಲದೇ ಮೀಟರ್ ಕಾರ್ಯನಿರ್ವಹಿಸುತ್ತಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಪುಂಡಲೀಕ ನಗರದಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement