ಬೆಳಗಾವಿ: ಮಹಾರಾಷ್ಟ್ರ ವಿಧಾನಸಭೆ ಕಲಾಪದಲ್ಲಿ ಕರ್ನಾಟಕ (Karnataka) ಸಿಎಂಗೆ ಎನ್‌ಸಿಪಿ (NCP) ಶಾಸಕ, ಮಾಜಿ ಸಚಿವ ಜಯಂತ್ ಪಾಟೀಲ್ ಅಪಮಾನ ಮಾಡಿದ್ದು, ಕರ್ನಾಟಕ ಸಿಎಂಗೆ ಅವರ ಭಾಷೆಯಲ್ಲೇ ಉತ್ತರಿಸಿ ಎಂದು ಮಹಾರಾಷ್ಟ್ರ (Maharashtra) ವಿಧಾನಸಭೆ ಕಲಾಪದಲ್ಲಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಕಲಾಪದಲ್ಲಿ ಸಾಲು ಸಾಲು ಸುಳ್ಳು ಆರೋಪಗಳನ್ನು ಮಾಡಿದ ಎನ್‌ಸಿಪಿ ಶಾಸಕರು ಕರ್ನಾಟಕ ಪೊಲೀಸರು ನಮ್ಮ ಮೇಲೆ ಲಾಠಿ ಬೀಸಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆ ಕಲಾಪದಲ್ಲಿ ಎನ್‌ಸಿಪಿ ಶಾಸಕ ಜಯಂತ್ ಪಾಟೀಲ್ ನಿಲುವಳಿ ಸೂಚನೆ ಮಂಡಿಸಿದರು.
ಈ ವೇಳೆ ಮಾತಾನಡಿದ ಅವರು, ಕರ್ನಾಟಕದಲ್ಲಿ ಮರಾಠಿ ಭಾಷಿಕರು ಸಭೆಯನ್ನು ಆಯೋಜಿಸಿದ್ದರು. ಆ ಸಭೆಗೆ ಮಹಾರಾಷ್ಟ್ರ ನಾಯಕರು ತೆರಳದಂತೆ ತಡೆ ಹಿಡಿದಿದ್ದರು. ಮರಾಠಿ ಭಾಷಿಕರ ಸಭೆಗೆ ತೆರಳುತ್ತಿದ್ದ ಎನ್‌ಸಿಪಿ ಶಾಸಕ ಹಸನ್ ಮುಶ್ರಿಫ್ ಮೇಲೆ ಲಾಠಿ ಪ್ರಹಾರ ಮಾಡಿ ಹಿಂದೆ ಸರಿಸಿದ್ದಾರೆ. ಬೆಳಗಾವಿಯಲ್ಲಿ ಮರಾಠಿ ಬಾಂಧವರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ನಾನು ನಿಲುವಳಿ ಸೂಚನೆ ಮಂಡನೆ ಮಾಡಿದ್ದೇನೆ ಎಂದು ಹೇಳಿದರು.
ಎಲ್ಲ ವಿಚಾರ ಬದಿಗಿಟ್ಟು ಕರ್ನಾಟಕದ ಪರಿಸ್ಥಿತಿ ಬಗ್ಗೆ ಚರ್ಚೆ ಆಗಬೇಕು. ಕರ್ನಾಟಕದಲ್ಲಿ ಆಗುವ ಪರಿಸ್ಥಿತಿ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು. ಮರಾಠಿ ಭಾಷಿಕರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುವ ಕೆಲಸ ಆಗುತ್ತಿದೆ. ಕರ್ನಾಟಕ ಸಿಎಂ ಯಾವ ಭಾಷೆಯಲ್ಲಿ ಹೇಳ್ತಾರೆ ಆ ಭಾಷೆಯಲ್ಲೇ ಉತ್ತರ ನೀಡಬೇಕು. ಕೊಯ್ನಾ, ವಾರಣಾ ಸೇರಿ ಕೊಲ್ಲಾಪುರ, ಸಾತಾರಾ ಜಿಲ್ಲೆಯ ಅಣೆಕಟ್ಟುಗಳ ಎತ್ತರ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಕೈಗೊಳ್ಳಬೇಕು. ಅಲ್ಲಿಯವರೆಗೆ ಈ ಪರಿಸ್ಥಿತಿ ನಿಯಂತ್ರಣ ಮಾಡಲು ಆಗಲ್ಲ. ನಮ್ಮ ನೀರು ನಮ್ಮ ಕೈಯಲ್ಲಿದೆ ಎಂದು ಎನ್‌ಸಿಪಿ ಶಾಸಕ ಜಯಂತ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಗೆಲ್ಲೋದು 50-70 ಸೀಟ್ ಅಷ್ಟೇ – ಜೆಡಿಎಸ್ ಸರ್ಕಾರ ರಚಿಸುತ್ತೆ ಬರೆದಿಟ್ಟುಕೊಳ್ಳಿ: HDK
ಇದೇ ವೇಳೆ ಶಾಸಕ ಹಸನ್ ಮುಶ್ರಿಫ್ ಜೊತೆ ಯಾವುದೇ ಅಸಭ್ಯ ವರ್ತನೆ ಆಗಿದ್ದರೇ ಮಹಾರಾಷ್ಟ್ರ ಸರ್ಕಾರ ವಿಚಾರಣೆ ನಡೆಸಲಿ ಎಂದು ಸ್ಪೀಕರ್ ತಿಳಿಸಿದ್ದಾರೆ. ಆದರೆ, ಮಹಾರಾಷ್ಟ್ರ ವಿಧಾನಸಭೆ ಕಲಾಪದಲ್ಲಿ ಸುಳ್ಳು ಮಾಹಿತಿ ನೀಡಿ ರಾಜಕೀಯ ಲಾಭ ಪಡೆಯಲು ಎನ್‌ಸಿಪಿ ಶಾಸಕನ ಯತ್ನಿಸುತ್ತಿದೆ. ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿ ಅನುಸರಿಸಿ ಇಲ್ಲಾ ಜೋಡೋ ಯಾತ್ರೆ ನಿಲ್ಲಿಸಿ – ಕಾಂಗ್ರೆಸ್‌ಗೆ ಕೇಂದ್ರ ಸೂಚನೆ