ಮುಂಬೈ: ಕಲಾವಿದರಿಗಾಗಿ ವಿಶಾಲವಾದ ವೇದಿಕೆ ಕಲ್ಪಿಸಲು ಮುಂಬೈ (Mumbai) ಮತ್ತು ಥಾಣೆ (Thane) ನಗರಗಳ ನಡುವೆ ಫಿಲ್ಮ್ ಸಿಟಿ (Film City) ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ಯೋಜಿಸಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಹೇಳಿದ್ದಾರೆ.
ಖ್ಯಾತ ಮರಾಠಿ ರಂಗಭೂಮಿ ಕಲಾವಿದ ಪ್ರಶಾಂತ್ ದಾಮ್ಲೆ (Prashant Damle) ಅವರ ‘ಏಕ್ ಲಗ್ನಾಚಿ ಗೋಷ್ಟ್’ (Eka Lagnachi Gosht) ಎಂಬ ನಾಟಕದ 12,500ನೇ ಪ್ರದರ್ಶನಕ್ಕೆ ಆಗಮಿಸಿ, ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಏಕನಾಥ್ ಶಿಂಧೆ ಅವರು, ರಾಜ್ಯ ಸರ್ಕಾರ ಮರಾಠಿ ರಂಗಭೂಮಿ ಮತ್ತು ಸಿನಿಮಾಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಇದೇ ವಾರ ರಾಜಧಾನಿಗೆ ಪ್ರಧಾನಿ ಮೋದಿ- ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಸಿಎಂ
Advertisement
Advertisement
ಥಾಣೆಯಲ್ಲೂ ಸಾಕಷ್ಟು ಶೂಟಿಂಗ್‍ಗಳು ನಡೆಯುತ್ತಿರುತ್ತದೆ, ಮುಂಬೈ ಮತ್ತು ಥಾಣೆ ನಡುವೆ 23 ಕಿ.ಮೀ. ಪ್ರತ್ಯೇಕಿಸಿ ಫಿಲ್ಮ್ ಸಿಟಿಯನ್ನು ನಿರ್ಮಿಸುವ ಬಗ್ಗೆ ಸರ್ಕಾರ ಯೋಜಿಸಿದ್ದು, ಆದಷ್ಟು ಶೀಘ್ರವೇ ಕೆಲಸ ಮಾಡಲಿದೆ ಎಂದರು. ಇದನ್ನೂ ಓದಿ: ಹೇಮಾವತಿ ಹಿನ್ನೀರಿನಲ್ಲಿ ತೇಲುವ ಹಡಗು- ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಶೆಟ್ಟಿಹಳ್ಳಿ ಚರ್ಚ್
Advertisement
Advertisement
ಡ್ರಾಮಾ ಆಡಿಟೋರಿಯಂಗಳನ್ನು ಪರಿಶೀಲಿಸಿ ಮತ್ತು ಅವುಗಳನ್ನು ಅಭಿವೃದ್ಧಿಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ ಎಂದರು. ಅಲ್ಲದೇ ಇದೇ ವೇಳೆ ಪ್ರಶಾಂತ್ ದಾಮ್ಲೆ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.