ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (Nationalist Congress Party) ಮತ್ತು ಉದ್ಧವ್ ಠಾಕ್ರೆ (Uddhav Thackeray) ಬಣದ ಹಲವು ಹಿರಿಯ ನಾಯಕರಿಗೆ ನೀಡಲಾದ ಭದ್ರತೆಯನ್ನು ಏಕನಾಥ್ ಶಿಂಧೆ- ದೇವೆಂದ್ರ ಫಡ್ನವೀಸ್ (Shinde-Fadnavis) ಸರ್ಕಾರ ವಾಪಸ್ ಪಡೆದುಕೊಂಡಿದೆ.
Advertisement
ಎನ್‍ಸಿಪಿ ನಾಯಕರಾದ ಅಜಿತ್ ಪವಾರ್ (Ajit Pawar) ಮತ್ತು ದಿಲೀಪ್ ವಾಲ್ಸೆ ಪಾಟೀಲ್ (Dilip Walse Patil ) ಅವರ ಭದ್ರತೆಯನ್ನು ‘ಝಡ್’ ವರ್ಗದಿಂದ ‘ವೈ-ಪ್ಲಸ್’ಗೆ ಇಳಿಸಲಾಗಿದೆ. ಎನ್‍ಸಿಪಿ ನಾಯಕ ಶರದ್ ಪವಾರ್, ಅವರ ಕುಟುಂಬದ ಭದ್ರತೆಯನ್ನು ಮುಂದುವರೆಸಲಾಗಿದೆ. ಇದನ್ನೂ ಓದಿ: ಯಮುನಾ ನದಿ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿ ಮೇಲೆ ಬಿಜೆಪಿ ಸಂಸದರ ದರ್ಪ
Advertisement
Advertisement
ಭದ್ರತೆಯನ್ನು ಹಿಂಪಡೆದಿರುವ ಪರಿಣಾಮ ಈ ನಾಯಕರ ಮನೆಯ ಬಳಿ ಶಾಶ್ವತ ಬೆಂಗಾವಲು ಪಡೆ ಇರುವುದಿಲ್ಲ. ಈ ನಾಯಕರ ಭದ್ರತಾ ಗ್ರಹಿಕೆಯ ಹೊಸ ಮೌಲ್ಯಮಾಪನದ ಆಧಾರದಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಭದ್ರತೆಯನ್ನು ಕಳೆದುಕೊಂಡವರ ಪೈಕಿ ಹಲವರು ಮಾಜಿ ಸಚಿವರಾಗಿದ್ದು, ಮಾಜಿ ಸಿಎಂ ಉದ್ಧವ್ ಠಾಕ್ರೆ ಹಾಗೂ ಅವರ ಕುಟುಂಬದ ಭದ್ರತೆಯನ್ನು ಮುಂದುವರೆಸಲಾಗಿದೆ. ಇದನ್ನೂ ಓದಿ: ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು
Advertisement
ಅನಿಲ್ ದೇಶಮುಖ್, ಛಗನ್ ಬುಜ್ಬಲ್, ಬಾಳಾಸಾಹೇಬ್ ಥೋರಟ್, ನಿತಿನ್ ರಾವುತ್, ನಾನಾ ಪಟೋಲೆ, ಜಯಂತ್ ಪಾಟೀಲ್, ಸಂಜಯ್ ರಾವುತ್, ವಿಜಯ್ ವಾಡೆತ್ತಿವಾರ್, ಧನಂಜಯ್ ಮುಂಡೆ, ನವಾಬ್ ಮಲಿಕ್, ನರಹರಿ ಜೀರ್ವಾಲ್, ಸುನೀಲ್ ಕೇದಾರ್, ಅಸ್ಲಂ ಶೇಖ್, ಅನಿಲ್ ಪರಬ್ ಮತ್ತು ಇತರ ನಾಯಕರಿಗೆ ಭದ್ರತೆಯನ್ನು ಹಿಂಪಡೆಯಲಾಗಿದೆ.