ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಇಂದು(ಮಂಗಳವಾರ) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂಬೈ ಬಿಜೆಪಿ ಕಚೇರಿಯಲ್ಲಿ ಅವರು ಪಕ್ಷಕ್ಕೆ ಸೇರಿದ್ದು, ಅವರೊಂದಿಗೆ ಮಾಜಿ ಕಾಂಗ್ರೆಸ್ ಎಂಎಲ್‍ಸಿ ಅಮರ್ ರಾಜುರ್ಕರ್ ಕೂಡಾ ಬಿಜೆಪಿ ಸೇರಿದ್ದಾರೆ.
ಚವಾಣ್ ಸೋಮವಾರ ತಮ್ಮ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್‍ನಿಂದ ಹೊರಬರುವುದು ಅವರ ವೈಯಕ್ತಿಕ ನಿರ್ಧಾರ ಎಂದಿದ್ದರು. ಎರಡು ದಿನಗಳಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದರು. ಇದೀಗ ಕಾಂಗ್ರೆಸ್ ತೊರೆದ ಒಂದೇ ದಿನದಲ್ಲಿ ಬಿಜೆಪಿಗೆ ಅವರು ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ದೆಹಲಿಯ ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 1 ಸ್ಥಾನ- AAP ಪ್ರಸ್ತಾಪ
Advertisement
Advertisement
ಸೋಮವಾರ, ಕಾಂಗ್ರೆಸ್ ತೊರೆದ ಬಳಿಕ ಅವರು, ನಾನು ಪಕ್ಷವನ್ನು ತೊರೆದಿದ್ದೇನೆ, ಶಾಸಕ ಸ್ಥಾನ ಮತ್ತು ಇತರ ಎಲ್ಲಾ ಪಕ್ಷದ ಹುದ್ದೆಗಳಿಂದ ಹೊರ ಬಂದಿದ್ದೇನೆ. ನಾನು ಪಕ್ಷದೊಂದಿಗಿನ ನನ್ನ ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದೇನೆ. ನಾನು ಪಕ್ಷಕ್ಕೆ ಪ್ರಮಾಣಿಕವಾಗಿ ದುಡಿದಿದ್ದೇನೆ ಎಂದಿದ್ದರು.
Advertisement
Advertisement
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಚವಾಣ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದು, ಮುಂಬೈ ಬಿಜೆಪಿ ಕಚೇರಿಯಲ್ಲಿ ಅಧಿಕೃತ ಕಾರ್ಯಕ್ರಮ ನಡೆಯಿತು. ಇದನ್ನೂ ಓದಿ: ಡಿಕೆಶಿ ಮೇಲೆ ಲೋಕಾಯುಕ್ತದಿಂದ ಎಫ್‌ಐಆರ್ ದಾಖಲು