ಮಹಾ ಬಿಕ್ಕಟ್ಟಿಗೆ ಇಂದು ಕ್ಲೈಮ್ಯಾಕ್ಸ್‌ – ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ

Public TV
1 Min Read
eknath shinde

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದ್ದ ಬಂಡಾಯ ಶಾಸಕರ ನೇತೃತ್ವದ ನಾಯಕ ಏಕನಾಥ್ ಶಿಂಧೆ ಅವರು ಜೂ. 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬಹುಮತ ಸಾಬೀತು ಮಾಡಲಿದ್ದಾರೆ.

ಎರಡು ದಿನಗಳ ಕಾಲ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ, ಭಾನುವಾರದಂದು ಸ್ಪೀಕರ್ ಆಯ್ಕೆ ಮಾಡಲಾಗಿತ್ತು. ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಬಂಡಾಯ ಶಾಸಕರ ನೆರವಿನೊಂದಿಗೆ 164 ಮತಗಳನ್ನು ಗಳಿಸುವ ಮೂಲಕ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಶಿಂಧೆ ಬಹುಮತ ಸಾಬೀತಿಗೆ ಮತಗಳ ಕೊರತೆಯಾಗದು ಎಂದು ಹೇಳಲಾಗುತ್ತಿದೆ.

newly elected Speaker of Maharashtra Assembly Rahul Narwekar 2

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಮತಗಳ ಅವಶ್ಯಕತೆ ಇದ್ದು, ಓರ್ವ ಶಾಸಕನ ನಿಧನದಿಂದ ಇದು 144ಕ್ಕೆ ಇಳಿದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ 55, ಎನ್‍ಸಿಪಿ 53, ಕಾಂಗ್ರೆಸ್ 44, ಬಿಜೆಪಿ 106, ಬಹುಜನ ವಿಕಾಸ್ ಅಘಾಡಿ 3, ಸಮಾಜವಾದಿ 2, ಎಐಎಂಐಎಂ 2, ಪ್ರಹರ್ ಜನಶಕ್ತಿ 1, ಸಿಪಿಐ (ಎಂ) 1, ಪಿಡಬ್ಲ್ಯೂಪಿ 1, ಸ್ವಾಭಿಮಾನಿ ಪಕ್ಷ 1, ರಾಷ್ಟ್ರೀಯ ಸಮಾಜ ಪಕ್ಷ 1, ಜನಸುರಾಜ್ಯ ಶಕ್ತಿ ಪಕ್ಷ 1, ಕ್ರಾಂತಿಕಾರಿ ಶೆಟ್ಕರಿ ಪಕ್ಷ 1 ಸ್ಥಾನಗಳನ್ನು ಹೊಂದಿದೆ. ಇದನ್ನೂ ಓದಿ: ಕೊಡಗಿನ ಚೆಂಬು, ಪೆರಾಜೆಯಲ್ಲಿ ಮತ್ತೆ ಕಂಪಿಸಿದ ಭೂಮಿ

Eknath Shinde Devendra Fadnavis 2 e1656604712575

ಭಾನುವಾರ ನಡೆದ ಸ್ಪೀಕರ್ ಚುನಾವಣೆಯ ಲೆಕ್ಕಾಚಾರದ ಪ್ರಕಾರ 164 ಮತಗಳು ಏಕನಾಥ್ ಶಿಂಧೆ ಪರ ಚಲಾವಣೆಯಾಗುವ ಸಾಧ್ಯತೆಗಳಿದ್ದು, ಹೆಚ್ಚುವರಿ ಮತಗಳು ಸೇರಬಹುದು ಎಂದು ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. 107 ಮತಗಳನ್ನು ಹೊಂದಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ವಿರೋಧ ಪಕ್ಷವಾಗಲಿದೆ. ಈ ಮೂಲಕ ಮೂರು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ-ಭಾರತ ಗಡಿಯಲ್ಲಿನ ಸೇತುವೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *