ತಾಯಿಯೊಂದಿಗೆ ಸೇರಿ ಅಕ್ಕನನ್ನು ಕೊಂದ ತಮ್ಮ- ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ

Advertisements

ಮುಂಬೈ: 19 ವರ್ಷದ ಯುವತಿಯನ್ನು ಆಕೆಯ ಅಪ್ರಾಪ್ತ ತಮ್ಮ ಮತ್ತು ತಾಯಿ ಇಬ್ಬರೂ ಸೇರಿಕೊಂಡು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ. ಯುವತಿಯ ತಲೆ ಕತ್ತರಿಸಿ, ಅದರ ಮುಂದೆ ತಾಯಿ ಮತ್ತು ತಮ್ಮ ಇಬ್ಬರು ಸೆಲ್ಫಿ ತೆಗೆದುಕೊಂಡು ವಿಕೃತಿ ಮೆರೆದಿದ್ದಾರೆ.

ಅಪ್ರಾಪ್ತ ತನ್ನ ತಾಯಿಯೊಂದಿಗೆ ಸೇರಿಕೊಂಡು ಸಹೋದರಿಯ ತಲೆಯನ್ನು ಕುಡುಗೋಲಿನಿಂದ ಕತ್ತರಿಸಿದ್ದಾನೆ. ನಂತರ ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ತೆಗೆದುಕೊಂಡು ಸ್ನೇಹಿತರಿಗೆಲ್ಲಾ ಶೇರ್‌ ಮಾಡಿದ್ದಾನೆ. ತಲೆಯೊಂದಿಗೆ ಊರೆಲ್ಲಾ ಮೆರವಣಿಗೆ ಹೊರಟು ನೆರೆಹೊರೆಯವರಿಗೆ ತೋರಿಸಿ ವಿಚಿತ್ರವಾಗಿ ವರ್ತಿಸಿದ್ದಾರೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ ಪೊಲೀಸ್ – ಡಿಕ್ಕಿ ಹೊಡೆದು ಇಬ್ಬರಿಗೆ ಗಾಯ

Advertisements

ವೈಜಾಪುರ್‌ ತೆಹಸಿಲ್‌ನ ಲಾಡ್‌ಗಾಂವ್‌ ಎಂಬಲ್ಲಿ ಭಾನುವಾರ ಈ ಕೃತ್ಯ ನಡೆದಿದೆ. ಕುಟುಂಬದವರ ವಿರೋಧದ ನಡುವೆಯೂ ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದೇ ಹತ್ಯೆಗೆ ಕಾರಣ ಎನ್ನಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಹಾಗೂ ಆತನ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೀರ್ತಿ (19) ಕೊಲೆಯಾದ ಯುವತಿ. ಈಕೆ ಅದೇ ಗ್ರಾಮದ ಅಜಯ್‌ ಎಸ್‌.ಥೋರ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ಕೆಲ ದಿನಗಳ ಹಿಂದೆ ಇಬ್ಬರೂ ಮದುವೆಯಾಗಿ ಗ್ರಾಮಕ್ಕೆ ಹಿಂತಿರುಗಿದ್ದಾರೆ. ನಂತರ ಕೀರ್ತಿ ತನ್ನ ಪತಿ ಅಜಯ್‌ ಮನೆಯಲ್ಲಿ ನೆಲೆಸಿದ್ದರು. ಇದನ್ನೂ ಓದಿ: ಮದುವೆ ಮಂಟಪದೊಳಗೆ ನುಗ್ಗಿ ಪ್ರೇಯಸಿಗೆ ಸಿಂಧೂರವಿಟ್ಟ ಪಾಗಲ್ ಪ್ರೇಮಿ

Advertisements

ಪತಿ ಮನೆಯಲ್ಲಿದ್ದ ಕೀರ್ತಿಯನ್ನು ಭೇಟಿಯಾಗುವ ನೆಪದಲ್ಲಿ ಬಂದಿದ್ದ ಸಹೋದರ ಹಾಗೂ ತಾಯಿ ಹೋಗಿದ್ದಾರೆ. ಇಬ್ಬರಿಗೂ ಟೀ ಮಾಡಿಕೊಡಲು ಕಿಚನ್‌ಗೆ ಕೀರ್ತಿ ತೆರಳಿದ್ದಾರೆ. ಈ ವೇಳೆ ಇಬ್ಬರೂ ಆಕೆಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Advertisements
Exit mobile version