ಕಲಬುರಗಿ: ಗೌತಮ್ ಅದಾನಿ (Gautam Adani) ದೇಶ ಲೂಟಿ ಮಾಡುತ್ತಿದ್ದಾರೆ. ರಿಯಾಕ್ಷನರಿ ಸರ್ಕಾರಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಕಿಡಿಕಾರಿದ್ದಾರೆ.
2019ರಲ್ಲಿಯೇ ಬಿಜೆಪಿ (BJP) ಮೈತ್ರಿಕೂಟಕ್ಕೆ ಜಿಗಿಯುವ ನಾಟಕ ಮಾಡಿದ್ದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್, ಅದಾನಿ-ಬಿಜೆಪಿ ನಂಟಿನ ಬಗ್ಗೆ ಮೊನ್ನೆ ಸ್ಫೋಟಕ ಹೇಳಿಕೆ ನೀಡಿದ್ದರು. 2019ರಲ್ಲಿ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತ ಬಿಜೆಪಿಯ ಉನ್ನತ ಮಟ್ಟದ ಸಭೆಯಲ್ಲಿ ಗೌತಮ್ ಅದಾನಿ ಪಾಲ್ಗೊಂಡಿದ್ದ ಮಾಹಿತಿ ನೀಡಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಮುಡಾ ಕೇಸಲ್ಲಿ ಆಪ್ತರಿಗೆ ಸತತ 9 ಗಂಟೆ ಇಡಿ ಡ್ರಿಲ್; ಸಿಎಂಗೂ ಸಮನ್ಸ್ ಸಾಧ್ಯತೆ
Advertisement
Advertisement
ಇಂದು (ಗುರುವಾರ) ಇದಕ್ಕೆ ಪೂರಕವಾದ ಆರೋಪವನ್ನು ಮಲ್ಲಿಕಾರ್ಜುನ ಖರ್ಗೆ ಮಾಡಿದ್ದು, ಗೌತಮ್ ಅದಾನಿ ದೇಶದ ಸಂಪತ್ತನ್ನು ಲೂಟಿ ಮಾಡ್ತಿದ್ದಾರೆ. ಅದಾನಿಯಂತಹ ಬಂಡವಾಳ ಶಾಹಿಗಳಿಂದ ಮೋದಿ-ಅಮಿತ್ ಶಾ ಹಣ ಪಡೆದು ಚುನಾವಣೆ ನಡೆಸುತ್ತಿದ್ದಾರೆ. ಅದಾನಿಯಂತಹ ಉದ್ಯಮಿಗಳನ್ನು ಬೆಳೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: Cyclone Effect: ತಮಿಳುನಾಡಿನಲ್ಲಿ 2 ದಿನ ಮಳೆ ಸಾಧ್ಯತೆ
Advertisement
Advertisement
ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ ಅದಾನಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಶಿಂಧೆ ಸರ್ಕಾರ ಧಾರಾವಿಯನ್ನು ಅದಾನಿಗೆ ಹಸ್ತಾಂತರಿಸಿದೆ. ಮಹಾರಾಷ್ಟ್ರದಲ್ಲಿ ಇರುವುದು ಜನರ ಸರ್ಕಾರ ಅಲ್ಲ. ಅದಾನಿ ಸರ್ಕಾರ ಎಂದೆಲ್ಲಾ ಆರೋಪ ಮಾಡಿದ್ದಾರೆ. ಇದನ್ನೂ ಓದಿ: 17,000 ಕೆಲಸ ಕಡಿತಗೊಳಿಸಲಿದೆ ಬೋಯಿಂಗ್ – ಕಂಪನಿಯ 10% ಉದ್ಯೋಗಿಗಳ ಕೆಲಸಕ್ಕೆ ಕುತ್ತು