ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಎಂಇಎಸ್ (MES) ಪುಂಡರು ತಮ್ಮ ಉದ್ಧಟತನ ಮುಂದುವರಿಸಿದ್ದು, ವ್ಯಾಕ್ಸಿನ್ ಡಿಪೋ ಬಳಿ ಹೇರಲಾಗಿದ್ದ ನಿಷೇಧಾಜ್ಞೆ ನಡುವೆಯೂ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
Advertisement
ಬೆಳಗಾವಿ ಅಧಿವೇಶನದ (Belagavi Session) ಹಿನ್ನೆಲೆಯಲ್ಲಿ ಪುಂಡಾಟಿಕೆ ಮುಂದುವರಿಸಿರುವ ಎಂಇಎಸ್ ಪುಂಡರು, ನಗರದ 2ನೇ ರೇಲ್ವೆಗೇಟ್ ಬಳಿ ಘೋಷಣೆ ಕೂಗಿದ್ದಾರೆ. ಎಂಇಎಸ್ ಮಾಜಿ ಮೇಯರ್ ಸರಿತಾ ಪಾಟೀಲ್, ಉಪಮೇಯರ್ ರೇಣು ಕಿಲ್ಲೇಕರ್, ಶಿವಾನಿ ಪಾಟೀಲ್ ಹಲವು ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದು, ಬೆಳಗಾವಿ, ನಿಪ್ಪಾಣಿ, ಕಾರವಾರ (Karwar), ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ. `ಬೆಳಗಾವಿ ನಮ್ಮ ಹಕ್ಕು – ಯಾರ ಅಪ್ಪಂದಲ್ಲ’ ಎಂದು ಘೋಷಣೆ ಕೂಗಿದ್ದಾರೆ. ಬಳಿಕ ವ್ಯಾಕ್ಸಿನ್ ಡಿಪೋಗೆ ನುಗ್ಗಲು ಯತ್ನಿಸಿದ 20ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು (Police) ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮೊದಲ ಬಾರಿಗೆ ಎಂಇಎಸ್ ಮಹಾಮೇಳಾವ್‌ಗೆ ಬ್ರೇಕ್
Advertisement
Advertisement
ಮಹಾಮೇಳಾವ್‌ಗೆ ಬ್ರೇಕ್‌ಹಾಕಲಾದ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಮೂಲಕ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಬಂದ ಕಾರ್ಯಕರ್ತರು ಬೆಳಗಾವಿ ಗಡಿಗೆ ನುಗ್ಗಲು ಯತ್ನಿಸಿದ್ದಾರೆ. 300ಕ್ಕೂ ಅಧಿಕ ಕಾರ್ಯಕರ್ತರು ಬೆಳಗಾವಿ ನುಗ್ಗಲು ಯತ್ನಿಸಿದ್ದು, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಇದೇ ವೇಳೆ ಗುಂಪಿನ ಪ್ರಮುಖರು ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿರುವ ದೂದ್‌ಗಂಗಾ ನದಿ ಸೇತುವೆ ಮೇಲೆ ನಿಂತು ಭಾಷಣ ಮಾಡಿದ್ದು, ಕರ್ನಾಟಕದ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ನ 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?
Advertisement
ಪೊಲೀಸ್ ಸರ್ಪಗಾವಲು: ಅನುಮತಿಯಿಲ್ಲದೇ ಮಹಾಮೇಳಾವ್ ನಡೆಸಲು ಮುಂದಾಗಿರುವ ಎಂಇಎಸ್ ಪುಂಡರಿಗೆ ವೇದಿಕೆ ತೆರವು ಮಾಡಲು ಡಿಸಿಪಿ ರವೀಂದ್ರ ಗಡಾದಿ ಸೂಚನೆ ನೀಡಿದ್ದಾರೆ. `ಮಹಾಮೇಳಾವ್’ಗೆ ಬ್ರೇಕ್ ಹಾಕಲು ವ್ಯಾಕ್ಸಿನ್ ಡಿಪೋ ಮೈದಾನದ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಓರ್ವ ಎಸಿಪಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿ ಬೀಡುಬಿಟ್ಟಿದೆ. ಒಟ್ಟಿನಲ್ಲಿ ವ್ಯಾಕ್ಸಿನ್ ಡಿಪೋ ಮೈದಾನದ 500 ಮೀಟರ್ ಸುತ್ತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.