ಬೆಳಗಾವಿ/ಮುಂಬೈ: ಮಹಾರಾಷ್ಟ್ರದಲ್ಲಿ (Maharastra) ಭಾರೀ ಗಾಳಿ ಬೀಸಿ ದೋಣಿ ಮುಗುಚಿ ಭೀಕರ ಅವಘಡ ಸಂಭವಿಸಿದ್ದು, ಒಂದು ವರ್ಷದ ಮಗು ಸೇರಿ ಆರು ಮಂದಿ ನೀರು ಪಾಲಾಗಿರುವ ಘಟನೆ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ನಡೆದಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದೋಣಿ (Boat) ಮುಗುಚಿ 6 ಮಂದಿ ನೀರು ಪಾಲಾಗಿದ್ದಾರೆ. ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(30) ಕೋಮಲ್ ಜಾಧವ್(26) ಶುಭ ಜಾಧವ್(1) ಮಾಹಿ ಜಾಧವ್(3) ನೀರು ಪಾಲಾಗಿದ್ದಾರೆ.
ಇನ್ನೂ ಅದೇ ದೋಣಿಯಲ್ಲಿ ಮತ್ತಿಬ್ಬರು ವಿಹಾರಿಗಳು ಸಹ ಪಯಣಿಸುತ್ತಿದ್ದು, ಅವರೂ ನೀರು ಪಾಲಾಗಿದ್ದಾರೆ. ಕುಗ್ಗಾಂವ್ ಗ್ರಾಮದ ಅನುರಾಗ್ ಅವಘಡೆ, ಗೌರವ್ ಡೋಂಗರೆ ನೀರುಪಾಲುದವರು. ನೀರುಪಾಲಾಗಿರುವವರ ಹುಡುಕಾಟಕ್ಕೆ ರಾಷ್ತ್ರೀಯ ವಿಪತ್ತು ನಿರ್ವಹಣಾ ದಳ (NDRF) ತಂಡದ ಸಿಬ್ಬಂದಿ ಆಗಮಿಸಿದ್ದಾರೆ. ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ಮುಂದುವರಿಸಿದ್ದಾರೆ. ಇದನ್ನೂ ಓದಿ: HDK ಅಫಿಡವಿಟ್, ಅಶೋಕ್ ರೈಟಿಂಗ್‌ನಲ್ಲಿ ಕೊಡ್ಲಿ- ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ಟಾಂಗ್