ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್‌ – ಉದ್ಧವ್‌ ಬಣದ ಐವರು ಅರೆಸ್ಟ್‌, 40 ಮಂದಿ ವಿರುದ್ಧ FIR

Public TV
1 Min Read
Eknath Shinde Uddhav Thackeray

ಮುಂಬೈ: ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿದ ಆರೋಪದಡಿ ಮಹಾರಾಷ್ಟ್ರದ (maharashtra) ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (uddhav thackrey) ಬಣದ ಐವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ 30-40 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಏಕನಾಥ್‌ ಶಿಂದೆ (eknath shinde) ಬಣದ ಪಕ್ಷದ ಕಾರ್ಯಕರ್ತ ಸಂತೋಷ್ ತಲವಾಣೆ ಅವರು ಉದ್ಧವ್ ಠಾಕ್ರೆ ಗುಂಪಿನ ಕೆಲವರ ವಿರುದ್ಧ ದೂರು ನೀಡಿದ್ದು, ಅದರಂತೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ಲಕ್ನೋ ಅಗ್ನಿ ದುರಂತ – ನಿರ್ಲಕ್ಷ್ಯವಹಿಸಿದ 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಯೋಗಿ

shiva sen

ಗಣೇಶ ವಿಸರ್ಜನೆ ವೇಳೆ ಶಿವಸೇನೆಯ (ಉದ್ಧವ್ ಮತ್ತು ಶಿಂದೆ) ಎರಡೂ ಬಣಗಳ ಕಾರ್ಯಕರ್ತರು ಪರಸ್ಪರ ಎದುರಾಗಿ ಕೈ ಕೈ ಮಿಲಾಯಿಸಿದ್ದಾರೆ. ಶನಿವಾರ ರಾತ್ರಿ ಎರಡೂ ಬಣಗಳ ನಡುವೆ ಗಲಾಟೆ ನಡೆದಿದೆ.

ಉದ್ಧವ್ ಬಣದ ಕಾರ್ಯಕರ್ತರು ಶಾಸಕ ಸದಾ ಸರ್ವಾಂಕರ್ ಅವರ ನಿವಾಸದ ಹೊರಗೆ ಜಮಾಯಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಈ ವೇಳೆ ಶಿಂದೆ ಬಣದವರು ಕೂಡ ಸ್ಥಳಕ್ಕೆ ಆಗಮಿಸಿದ್ದರಿಂದ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: ‘ಕುದುರೆ ವ್ಯಾಪಾರ’ ಆರೋಪ – ಕಾಂಗ್ರೆಸ್ ಶಾಸಕ, ಬಿಜೆಪಿ ನಾಯಕಿಯ ಹಾದಿಬೀದಿ ರಂಪಾಟ

ಶಾಸಕ ಸದಾ ಸರ್ವಂಕರ್ ಕಡೆಯವರು ಉದ್ಧವ್ ಬಣದ ಶಾಸಕರ ವಿರುದ್ಧ ದಾದರ್ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣ ಪೋಸ್ಟ್‌ಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಇತ್ತ ಉದ್ಧವ್‌ ಬಣದ ಶಾಸಕ ಸುನಿಲ್‌ ಶಿಂದೆ ಅವರು ಸರ್ವಂಕರ್‌ ವಿರುದ್ಧ ದೂರು ನೀಡಿದ್ದಾರೆ. ಸರ್ವಂಕರ್‌ ಅವರು ಗುಂಡು ಹಾರಿಸಿ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರು ಎರಡೂ ಬಣಗಳ ದೂರನ್ನು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *