ಬಾಲಿವುಡ್‌ನಲ್ಲಿ ಮತ್ತೊಂದು ಬಂಪರ್‌ ಅವಕಾಶ ಬಾಚಿಕೊಂಡ ಕೀರ್ತಿ ಸುರೇಶ್

Public TV
1 Min Read
keerthy suresh 2

ಸೌತ್ ಬ್ಯೂಟಿ ಕೀರ್ತಿ ಸುರೇಶ್‌ಗೆ (Keerthy Suresh) ಮದುವೆಯಾದ್ಮೇಲೆಯೂ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮದುವೆಯ ಬಳಿಕವೂ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಮತ್ತೊಂದು ಬಾಲಿವುಡ್ (Bollywood) ಸಿನಿಮಾಗೆ ಕೀರ್ತಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:ಪ್ರಭಾಸ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌- ‌’ಕಲ್ಕಿ2898 ಎಡಿ’ ಸೀಕ್ವೆಲ್‌ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್

keerthy suresh

‘ಬೇಬಿ ಜಾನ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಕೀರ್ತಿ ಪಾದಾರ್ಪಣೆ ಮಾಡಿದ್ದರು. ಮದುವೆ ಬಳಿಕ ಈ ಸಿನಿಮಾ ರಿಲೀಸ್ ಆಗಿ ಮಕಾಡೆ ಮಲಗಿತ್ತು. ಹೀಗಿದ್ದರೂ ಅವರಿಗಿರುವ ಬೇಡಿಕೆ ಕಮ್ಮಿಯಾಗಿಲ್ಲ. ಬಾಲಿವುಡ್‌ನ ಪ್ರತಿಷ್ಠಿತ ಸಂಸ್ಥೆಯೊಂದು ನಟಿಗೆ ಮಣೆ ಹಾಕಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಲು ಕೀರ್ತಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.

KEERTHY SURESH 1 4

ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

keerthy suresh 1

ಕಳೆದ ವರ್ಷ ವರುಣ್ ಧವನ್‌ಗೆ ಜೋಡಿಯಾಗಿ `ಬೇಬಿ ಜಾನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಜವಾನ್ ಡೈರೆಕ್ಟರ್ ಅಟ್ಲಿ ಆ್ಯಕ್ಷನ್ ಕಟ್ ಹೇಳಿದ್ದರು.

Share This Article