ಚಾಮರಾಜನಗರ: ಜೈನಧರ್ಮದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ ಕನಕಗಿರಿಯ ಬಾಹುಬಲಿ ಮೂರ್ತಿಗೆ ಇಂದು ಮಸ್ತಕಾಭಿಷೇಕ ನೆರವೇರಿತು. ದೆಹಲಿ, ಮುಂಬೈ, ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರು ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.
Advertisement
ಕನಕಗಿರಿ ಕ್ಷೇತ್ರ, ಚಾಮರಾಜನಗರ ತಾಲೂಕಿನಲ್ಲಿರುವ ಜೈನರ ಧರ್ಮ ಕ್ಷೇತ್ರ ಶ್ರವಣಬೆಳಗೊಳ ಬಾಹುಬಲಿ ಮೂರ್ತಿಗೆ 12 ವರ್ಷಕ್ಕೊಮ್ಮೆ ಮಸ್ತಕಾಭಿಷೇಕ ನಡೆಯುತ್ತೆ. ಆದರೆ ಇಲ್ಲಿನ ಬಾಹುಬಲಿಗೆ 6 ವರ್ಷಕ್ಕೊಮ್ಮೆ ಮಸ್ತಕಾಭಿಷೇಕ ನಡೆಯುತ್ತದೆ. ಮೊದಲ ಕಳಸವನ್ನು ಅನಿಲ್ ಸೇಠ್ ಅವರು ಬಾಹುಬಲಿಗೆ ಮಜ್ಜನ ಮಾಡಿಸುವ ಮೂಲಕ ಮಸ್ತಕಾಭಿಷೇಕ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಕನಕಗಿರಿ ಮಠದ ತೀರ್ಥಂಕರ ಸ್ವಾಮೀಜಿ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ಮಾಡಿದ್ರು. ಈ ಕ್ಷೇತ್ರದಲ್ಲಿ ಅಭಿಷೇಕಕ್ಕೆ ಜೇನುತುಪ್ಪ ಬಳಸದೇ ಇರುವುದು ವಿಶೇಷ. ಇದನ್ನೂ ಓದಿ: ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ: ಸಿದ್ದು ವಿರುದ್ಧ ಸೋಮಣ್ಣ ಕಿಡಿ
Advertisement
Advertisement
ಏಕೆಂದರೆ ಜೇನುನೊಣಗಳು ತುಪ್ಪವನ್ನು ತಮಗೆಂದು ಸಂಗ್ರಹಿಸುತ್ತವೆ. ಇದನ್ನು ದೇವರಿಗೆ ಅಭಿಷೇಕ ಮಾಡುವುದು ಜೈನಧರ್ಮದಲ್ಲಿ ನಿಷಿದ್ಧ. ಹೀಗಾಗಿ ಮಸ್ತಕಾಭಿಷೇಕದಲ್ಲಿ ಬಾಹುಬಲಿಗೆ ಜೇನುತುಪ್ಪದಿಂದ ಅಭಿಷೇಕ ಮಾಡುವುದಿಲ್ಲ. ಅಷ್ಟ ದ್ರವ್ಯಗಳೊಂದಿಗೆ ಬಾಹುಬಲಿಗೆ ಮಜ್ಜನ ನೆರವೇರುತ್ತದೆ. ಇದನ್ನೂ ನೋಡಲು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ.
Advertisement
ಜಲಾಭಿಷೇಕದ ನಂತರ ಬಾಹುಬಲಿ ಮೂರ್ತಿಗೆ ಕ್ಷೀರಾಭಿಷೇಕ, ಅರಿಶಿನ, ಕುಂಕುಮ, ಗಂಧ, ಕಬ್ಬಿನ ಹಾಲು, ಸುಗಂಧ ದ್ರವ್ಯ ಸೇರಿದಂತೆ 8 ರೀತಿಯ ವಿವಿಧ ಅಭಿಷೇಕ ನಡೆಸಲಾಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಬಾಹುಬಲಿಯ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಂಡು ಪುನೀತರಾದರು. ಮಸ್ತಕಾಭಿಷೇಕದ ವೇಳೆ ಭಕ್ತಿ ಪರಕಾಷ್ಠೇಯಿಂದ ಭಕ್ತರು ನೃತ್ಯ ಮಾಡಿ ಬಾಹುಬಲಿಯ ಕೃಪೆಯನ್ನು ಕೋರಿದರು.
ಕನಕಗಿರಿಯ ಮಸ್ತಕಾಭಿಷೇಕವನ್ನು ಜಾತಿ ಮತ ಭೇದವಿಲ್ಲದೇ ಸಾವಿರಾರು ಮಂದಿ ಕಣ್ತುಂಬಿಕೊಂಡ್ರು. ಚಾಮರಾಜನಗರ ಜಿಲ್ಲೆಯ ಧಾರ್ಮಿಕ ಪರಂಪರೆಯ ಭಾಗವಾಗಿರುವ ಕನಕಗಿರಿ ಬಾಹುಬಲಿ ಮಸ್ತಕಾಭಿಷೇಕಕ್ಕೆ ಆರು ವರ್ಷದವರೆಗೆ ಕಾಯಬೇಕು. ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಸಂತೋಷ್ ಯಾಕೆ ಹೇಳಿದ್ದಾರೆ ನನಗೆ ಗೊತ್ತಿಲ್ಲ: ಉಮೇಶ್ ಕತ್ತಿ