ಬೆಂಗಳೂರು: ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ (INDIA Block) ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ಕೊಟ್ಟೇ ಕೊಡುತ್ತೇವೆ ಆದ್ರೆ ಕೇಂದ್ರದಲ್ಲಿ ಏನು ಷರತ್ತುಗಳು ಹಾಕ್ತಾರೋ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ (Post Office) ಖಾತೆ ತೆರೆಯಲು ಕಚೇರಿ ಮುಂದೆ ಮಹಿಳೆಯರು ಕ್ಯೂ ನಿಂತಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ಗ್ಯಾರಂಟಿ ಬಗ್ಗೆ ಹೆಣ್ಣು ಮಕ್ಕಳಿಗೆ ಎಷ್ಟು ನಂಬಿಕೆ ಅಂತ ಗೊತ್ತಾಗುತ್ತಿದೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ, 1 ಲಕ್ಷ ಕೊಟ್ಟೇ ಕೊಡ್ತೀವಿ ಅಂತ ಹೇಳಿದ್ದೇವೆ. ರಾಹುಲ್ ಗಾಂಧಿ (Rahul Gandhi) ಅವರು ಸಹ ಹೇಳಿರುವುದಾಗಿ ತಿಳಿಸಿದ್ದಾರೆ.
- Advertisement -
- Advertisement -
ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಕೊಟ್ಟ ಮಾತಿನಂತೆ ಪ್ರತಿ ವರ್ಷ ಮಹಿಳೆಯರ ಖಾತೆಗೆ ಒಂದು ಲಕ್ಷ ರೂ. ಹಣ ಜಮೆ ಮಾಡುತ್ತೇವೆ. ಈಗಾಗಲೇ ಗ್ಯಾರಂಟಿ ಘೋಷಿಸಲಾಗಿದೆ. ಆದ್ರೆ ಏನು ಷರತ್ತುಗಳು ಹಾಕ್ತಾರೋ ಗೊತ್ತಿಲ್ಲ. ನಮ್ ಕಂಡಿಷನ್ ಗೊತ್ತಿದೆಯಲ್ಲವಾ? ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕೋಮು ಭಾವನೆ ಕೆರಳಿಸೋ ಭಾಷಣ ಮಾಡಿದರೇ ಹೊರತು ಜನರ ಸಮಸ್ಯೆ ಬಗ್ಗೆ ಮಾತಾಡಿಲ್ಲ: ಖರ್ಗೆ
- Advertisement -
- Advertisement -
ಇದೇ ವೇಳೆ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾತನಾಡಿ, ಈ ಪ್ರಕರಣಗಳ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವುದು ಅವರ ಕರ್ತವ್ಯ. ಸಿಎಂ ಸಹ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ತಪ್ಪಿತಸ್ತರು ಯಾರೇ ಆಗಿದ್ದರೂ ಅವರ ಮೇಲೆ ಕ್ರಮ ಆಗುತ್ತೆ. ಕೋಟ್ಯಂತರ ರೂಪಾಯಿ ಹಗರಣ ಆರೋಪ ಕೇಳಿಬಂದಿದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ಸಚಿವ ನಾಗೇಂದ್ರ ಅವರನ್ನೂ ಕರೆಸಿ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಡಿಕೆಸು ಕೆಪಿಸಿಸಿ ಅಧ್ಯಕ್ಷರಾಗ್ತಾರಾ?
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಸುರೇಶ್ ಅವರ ಹೆಸರು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅದೆಲ್ಲ ಸುಳ್ಳು. ಯಾರಿಗೆ ಸ್ಥಾನ ಕೊಡಬೇಕು ಅನ್ನೋದನ್ನ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಭಾಷಣ ಪ್ರಧಾನಿ ಕಚೇರಿಯ ಘನತೆ ಕ್ಷೀಣಿಸುವಂತೆ ಮಾಡಿದೆ: ಮನಮೋಹನ್ ಸಿಂಗ್ ಆರೋಪ