CinemaKarnatakaLatestMain PostSouth cinema

ಬಿಗ್ ಬಾಸ್ ಮನೆಗೆ ಮಹಾಲಕ್ಷ್ಮಿ ರವೀಂದರ್ ಜೋಡಿ ಎಂಟ್ರಿ: ಕಾಯ್ತೀವಿ ಎಂದ ಫ್ಯಾನ್ಸ್

ಮಿಸ್ ಮ್ಯಾಚ್ (Miss Match) ಜೋಡಿ ಎಂದೇ ಟ್ರೋಲ್ ಆದ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಅಡ್ಡಾದಿಂದ ಹೊಸ ಸುದ್ದಿಯೊಂದು ಬಂದಿದೆ. ಅಕ್ಟೋಬರ್ ನಿಂದ ಶುರುವಾಗಲಿರುವ ತಮಿಳಿನ ಬಿಗ್ ಬಾಸ್ ಮನೆಗೆ (Bigg Boss) ಈ ಜೋಡಿ ಎಂಟ್ರಿ ಕೊಡಲಿದೆ ಎನ್ನುವುದು ತಾಜಾ ವರ್ತಮಾನ. ಈಗಾಗಲೇ ದಸರಾ ಹಬ್ಬಕ್ಕಾಗಿ ವಾಹಿನಿಯೊಂದು ವಿಶೇಷ ಸಂದರ್ಶನ ಮಾಡಿದ್ದು, ಅಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಮಹಾಲಕ್ಷ್ಮಿ (Mahalakshmi) ಮತ್ತು ರವೀಂದರ್  (Ravinder) ದಂಪತಿ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನುವ ಸುದ್ದಿಯೇ ತಮಿಳು ಚಿತ್ರೋದ್ಯಮದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ರವೀಂದರ್ ಈ ಕುರಿತು ರಿಯಾಕ್ಟ್ ಮಾಡಿರುವುದರಿಂದ ಕುತೂಹಲ ಮೂಡಿದೆ. ಮಹಾಲಕ್ಷ್ಮಿ ಮತ್ತು ರವೀಂದರ್ ಬಿಗ್ ಬಾಸ್ ಮನೆಯಲ್ಲಿ ಹೇಗೆ ಇರುತ್ತಾರೆ ಎನ್ನುವ ಕುರಿತು ಈಗಿನಿಂದಲೇ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

ಮದುವೆ ನಂತರ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿರುವ ಮಹಾಲಕ್ಷ್ಮಿ ಮತ್ತು ರವೀಂದರ್, ದೇವರ ದರ್ಶನದ ನಂತರ ಅಮೆರಿಕಾಗೆ ಹಾರಿದ್ದರು. ಅಮೆರಿಕಾದಲ್ಲಿ ಹನಿಮೂನ್ (Honeymoon) ಮುಗಿಸಿಕೊಂಡು ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಮಹಾಲಕ್ಷ್ಮಿ. ಪತ್ನಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೆ, ಅವರಿಗೆ ಊಟ ತಗೆದುಕೊಂಡು ಹೋಗುವುದು ನನ್ನ ಕೆಲಸವಾಗಿದೆ ಎಂದು ರವೀಂದರ್ ಮೊನ್ನೆಯಷ್ಟೇ ಬರೆದುಕೊಂಡಿದ್ದರು.

ಮಹಾಲಕ್ಷ್ಮಿ ಮತ್ತು ರವೀಂದರ್ ಮದುವೆ ಆಗುತ್ತಿದ್ದಂತೆಯೇ ಈ ಜೋಡಿ ಸಖತ್ ಟ್ರೆಂಡ್ ಆಗಿತ್ತು. ರವೀಂದರ್ ತೂಕವನ್ನಿಟ್ಟುಕೊಂಡು ಅನೇಕರು ಮಹಾಲಕ್ಷ್ಮಿಗೆ ಕಾಲೆಳೆದರು. ದುಡ್ಡಿಗಾಗಿ ಅವರು ಮದುವೆಯಾಗಿದ್ದಾರೆ ಎಂದು ಮಹಾಲಕ್ಷ್ಮಿ ಕುರಿತು ಕಾಮೆಂಟ್ ಮಾಡಿದ್ದರು. ಯಾರು ಏನೇ ಹೇಳಿದರೂ, ಈ ಜೋಡಿ ಮಾತ್ರ ನೆಮ್ಮದಿಯಿಂದ ದಿನಗಳನ್ನು ದೂಡುತ್ತಿದೆ.

Live Tv

Leave a Reply

Your email address will not be published. Required fields are marked *

Back to top button